ಬೆಲೆ ಏರಿಕೆಗೆ ವ್ಯಂಗ್ಯ : ವಧೂವರರಿಗೆ ಪೆಟ್ರೋಲ್ ಕ್ಯಾನ್ ಉಡುಗೊರೆ !!

22-02-21 10:41 am       Headline Karnataka News Network   ಕರ್ನಾಟಕ

ನಗರ ಪಾಲಿಕೆ ಸದಸ್ಯರೊಬ್ಬರು ಮದುವೆ ಸಮಾರಂಭದಲ್ಲಿ ನವಜೋಡಿಗೆ ಪೆಟ್ರೋಲ್ ಕ್ಯಾನ್ ಉಡುಗೊರೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. 

ಮೈಸೂರು, ಫೆ.22 : ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಿಂದ ಸಾರ್ವಜನಿಕರು ತತ್ತರಿಸಿದ್ದು, ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯುತ್ತಿದ್ದಾರೆ. ಈ ಮಧ್ಯೆ ನಗರ ಪಾಲಿಕೆ ಸದಸ್ಯರೊಬ್ಬರು ಮದುವೆ ಸಮಾರಂಭದಲ್ಲಿ ನವಜೋಡಿಗೆ ಪೆಟ್ರೋಲ್ ಕ್ಯಾನ್ ಉಡುಗೊರೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. 

ಮೈಸೂರಿನ ರಾಮಾನುಜ ರಸ್ತೆಯಲ್ಲಿರುವ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಮುಖಂಡ ಜಿ. ಶ್ರೀನಾಥ್‌ ಬಾಬು ಅವರ ಪುತ್ರಿ ನಿಕಿತಾ ಹಾಗೂ ನಿತೇಶ್ ಭಾಸ್ಕರ್ ಅವರ ವಿವಾಹ ಮಹೋತ್ಸವ ನಡೆದಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡ‌ ನಗರಪಾಲಿಕೆ ಸದಸ್ಯೆ ಶೋಭಾ ಹಾಗೂ ಪತಿ ಸುನೀಲ್, ಸ್ನೇಹಿತರು ನೂತನ ವಧು-ವರರಿಗೆ ಒಂದು ಕ್ಯಾನ್ ಪೆಟ್ರೋಲ್ ನೀಡುವ ಮೂಲಕ ವಿಭಿನ್ನವಾಗಿ ಶುಭ ಕೋರಿದರು.

ಹೂಗುಚ್ಛ ಹಾಗೂ ಹಣ ಇನ್ನಿತರ ವಸ್ತುಗಳನ್ನು ನೀಡುವ ಬದಲು, ಪೆಟ್ರೋಲ್ ದರ ದುಪ್ಪಟ್ಟಾದ ಕಾರಣ ವಧು-ವರನಿಗೆ ಪೆಟ್ರೋಲ್ ನೀಡಿ ಶುಭ ಕೋರಿ ವ್ಯವಸ್ಥೆಯ ವಿರುದ್ಧ ವ್ಯಂಗ್ಯ ಮಾಡಿದ್ದಾರೆ.

As fuel prices across the country are on the rise, the guests got creative with their gifts giving the newlywed couple 5 litres of petrol in Mysore.