ಪಂಚಮಸಾಲಿಗಳಿಗೆ ಮೀಸಲು ನೀಡಿದಲ್ಲಿ ಪರಿಣಾಮ ನೆಟ್ಟಗಿರಲ್ಲ ; ರಾಜ್ಯ ಸರಕಾರಕ್ಕೆ ಬ್ರಹ್ಮಾನಂದ ಶ್ರೀ ಸವಾಲು

23-02-21 11:40 am       Headline Karnataka News Network   ಕರ್ನಾಟಕ

ಸಿಎಂ ಯಡಿಯೂರಪ್ಪ ತುಂಬಾ ಒಳ್ಳೆಯವರು. ಅವರನ್ನು ಬ್ಲಾಕ್ ಮೇಲ್ ಮಾಡುವ ಕೆಲಸವನ್ನು ಸರಕಾರದ ಹಿರಿಯ ಮಂತ್ರಿಗಳೇ ಮಾಡುತ್ತಿದ್ದಾರೆ ಎಂದು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು. 

ಕಾರವಾರ, ಫೆ.23: ಪಂಚಮಸಾಲಿಗಳ ಒತ್ತಡಕ್ಕೆ ಮಣಿದು ಸರಕಾರ ಮೀಸಲಾತಿ ನೀಡಿದಲ್ಲಿ ಪರಿಣಾಮ ನೆಟ್ಟಗಿರಲ್ಲ. ಅದರ ವಿರುದ್ಧ ನಾನೇ ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತೇನೆ ಎಂದು ಸರ್ಕಾರದ ವಿರುದ್ಧ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಗುಡುಗಿದ್ದಾರೆ.‌

ಭಟ್ಕಳದಲ್ಲಿ ಪಂಚಮಸಾಲಿ ಮೀಸಲಾತಿ ಆಗ್ರಹ ವಿರೋಧಿಸಿ ಉಜಿರೆ ಶ್ರೀರಾಮ ಪೀಠದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನೇತೃತ್ವದಲ್ಲಿ ಸಮಾವೇಶ ನಡೆದಿದ್ದು ರಾಜಕಾರಣಿಗಳ ರಾಜಕೀಯ ಲೇಪಿತ ಹೋರಾಟದ ಬಗ್ಗೆ ಕಿಡಿಕಾರಿದ್ದಾರೆ. 

ಸಿಎಂ ಯಡಿಯೂರಪ್ಪ ತುಂಬಾ ಒಳ್ಳೆಯವರು. ಅವರನ್ನು ಬ್ಲಾಕ್ ಮೇಲ್ ಮಾಡುವ ಕೆಲಸವನ್ನು ಸರಕಾರದ ಹಿರಿಯ ಮಂತ್ರಿಗಳೇ ಮಾಡುತ್ತಿದ್ದಾರೆ. ಪ್ರಬಲ ಸಮುದಾಯದ ಮಂತ್ರಿಗಳು ರಾಜೀನಾಮೆ ನೀಡುವ ಬೆದರಿಕೆ ಒಡ್ಡಿದ್ದಾರೆ. ಸಿಎಂ ಅವರನ್ನ ನಿದ್ರೆ ಮಾಡದಂತೆ ಮಾಡಿದ್ದಾರೆ. ಹಾಗೆಂದು ಬ್ರಹ್ಮಾನಂದ ಯಾವುದೇ ಜಾತಿಯ ಪರವಾಗಿ ಈ ಸಮಾವೇಶಕ್ಕೆ ಬಂದಿಲ್ಲ. 360 ಹಿಂದುಳಿದ ವರ್ಗದ ಜಾತಿಗಳ ಕಣ್ಣೀರು ಒರೆಸುವ ಉದ್ದೇಶದಿಂದ ವೇದಿಕೆಯಲ್ಲಿ ಬಂದು ಕುಳಿತಿದ್ದೇನೆ ಎಂದು ಹೇಳಿದರು. 

ಜಾತಿಯ ಬಲವಿದೆ ಎಂದು ರಾಜ್ಯ ಸರ್ಕಾರ ದುಡುಕಿದ್ರೆ ಅದರ ಪರಿಣಾಮ ಚೆನ್ನಾಗಿರಲ್ಲ. ಕುರುಕ್ಷೇತ್ರದಲ್ಲಿ ಕೌರವರ ವಿರುದ್ಧ ಪಾಂಡವರು ಗೆದ್ದಿದ್ದನ್ನ ಸರ್ಕಾರ ನೆನಪಿಡಲಿ. ದುರ್ಬಲ, ಹಿಂದುಳಿದವರು ಓಟಿನ‌ ಮೂಲಕ ಮೇಲ್ವರ್ಗದವರಿಗೆ ಲಾಠಿ ಕೊಟ್ಟು ಬಡಿಸಿಕೊಳ್ಳುತ್ತಿದ್ದೀರಿ. 2- 3 ಶೇ. ಇರೋ ಮೇಲ್ವರ್ಗದ ನಾಯಕರು ಬುದ್ಧಿವಂತಿಕೆಯಿಂದ ನಿಮ್ಮ ಬೆನ್ನು ಸವರಿ ಮತ್ತೆ ಮೇಲೆ ಸವಾರಿ ಮಾಡ್ತಿದ್ದಾರೆ. ಇದು ತುಂಬಾ ಬೇಸರ ತರುವ ವಿಷಯವಾಗಿದೆ. ರಾಜ್ಯವನ್ನು ಆಳುವ ಜನಪ್ರತಿನಿಧಿಗಳಿಗೆ ಸವಾಲು ಹಾಕ್ತಿದ್ದೇನೆ, ನಿಮಗೆ ಅಧಿಕಾರ ಕೊಟ್ಟವರ್ಯಾರು ? ಸಂವಿಧಾನ ಅಂದ್ರೆ ಅಜ್ಜನಿಂದ ವಂಶ ಪಾರಂಪರ್ಯವಾಗಿ ಬಂದ ಆಸ್ತಿಯಲ್ಲ, ನಿಮಗೆ ಪಾಲು ಮಾಡಿ ಕೊಡಲು. ಪಂಚಮಸಾಲಿಗಳನ್ನ 2ಎ ವಿಭಾಗಕ್ಕೆ ಸೇರಿಸಿದ್ದೆ ಆದಲ್ಲಿ ನಾನೇ ಸುಪ್ರೀಮ್ ಕೋರ್ಟ್ ಮೆಟ್ಟಿಲು ಏರುತ್ತೇನೆ ಎಂದ ಬ್ರಹ್ಮಾನಂದ ಸ್ವಾಮೀಜಿ ಗುಡುಗಿದ್ದಾರೆ.

Kawar Panchamasali Seer warms cm demanding reservations for the community and its inclusion under the Category 2A in the state quota, warning that if the BS Yediyurappa-led government fails to do so they will have to see a big consequences.