ಶಿವಮೊಗ್ಗ ದುರಂತ ಮಾಸುವ ಮುನ್ನವೇ ಮತ್ತೊಂದು ಗಣಿ ಸ್ಫೋಟ! ಆರು ಸಾವು, ಸಚಿವ ಸುಧಾಕರ್ ವಿರುದ್ಧ ಆಕ್ರೋಶ

23-02-21 12:12 pm       Headline Karnataka News Network   ಕರ್ನಾಟಕ

ಶಿವಮೊಗ್ಗದ ಗಣಿ ದುರಂತ ಮಾಸುವ ಮುನ್ನವೇ ಅದೇ ರೀತಿಯ ಮತ್ತೊಂದು ದುರಂತ ಚಿಕ್ಕಬಳ್ಳಾಪುರದಲ್ಲಿ ಸಂಭವಿಸಿದೆ.

ಬೆಂಗಳೂರು, ಫೆ.23: ಶಿವಮೊಗ್ಗದ ಗಣಿ ದುರಂತ ಮಾಸುವ ಮುನ್ನವೇ ಅದೇ ರೀತಿಯ ಮತ್ತೊಂದು ದುರಂತ ಚಿಕ್ಕಬಳ್ಳಾಪುರದಲ್ಲಿ ಸಂಭವಿಸಿದೆ. ಆರೋಗ್ಯ ಸಚಿವ ಸುಧಾಕರ್ ಅವರ ಊರಲ್ಲೇ ಘಟನೆ ನಡೆದಿದ್ದು, ಗುಡಿಬಂಡೆ ತಾಲೂಕಿನ ಹಿರೇನಾಗವಲ್ಲಿ ಎನ್ನುವ ಗ್ರಾಮದಲ್ಲಿ ಕಲ್ಲು ಕ್ವಾರಿಯಲ್ಲಿ ನಿನ್ನೆ ಮಧ್ಯರಾತ್ರಿ ಜಿಲೆಟಿನ್ ಸ್ಫೋಟಗೊಂಡಿದ್ದು ಆರು ಮಂದಿ ಸಾವು ಕಂಡಿದ್ದಾರೆ.

ಸ್ಫೋಟದ ತೀವ್ರತೆಗೆ ಮೃತದೇಹಗಳು ನೂರಾರು ಮೀಟರ್ ದೂರಕ್ಕೆ ಛಿದ್ರವಾಗಿ ಬಿದ್ದಿವೆ. ಮೃತರನ್ನು ಉಮಾಕಾಂತ್ ( ಇಂಜಿನಿಯರ್), ರಾಮು (ಸೂಪರ್ ವೈಸರ್), ಮಹೇಶ್ (ವಾಚ್ ಮನ್), ಗಂಗಾಧರ್ ಮತ್ತು ಮುರುಳಿ ಎಂದು ಗುರುತಿಸಲಾಗಿದೆ. ಟಾಟಾ ಏಸ್ ಚಾಲಕ ರಿಯಾಸ್ ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಘಟನಾ ಸ್ಥಳಕ್ಕೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಆರೋಗ್ಯ ಸಚಿವ ಸುಧಾಕರ್ ಸೇರಿದಂತೆ ಎಡಿಜಿಪಿ ಪ್ರತಾಪ ರೆಡ್ಡಿ, ಜಿಲ್ಲಾಧಿಕಾರಿ, ಎಸ್ಪಿ ದರ್ಜೆಯ ಅಧಿಕಾರಿಗಳು ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ. ಆಂಧ್ರ ಪ್ರದೇಶ ಮೂಲದ ರಾಘವೇಂದ್ರ ರೆಡ್ಡಿ, ಶಿವಾರೆಡ್ಡಿ ಮತ್ತು ಗುಡಿಬಂಡೆ ತಾಲೂಕಿನ ನಾಗರಾಜ್ ರೆಡ್ಡಿ ಕಲ್ಲು ಕೋರೆಟ ಮಾಲೀಕರಾಗಿದ್ದು ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಭ್ರಮರವಾಸಿನಿ ಕ್ರಶರ್ ನಿಂದ ಒಂದು ಕಿಮೀ ದೂರದ ಅರಣ್ಯ ಪ್ರದೇಶದಲ್ಲಿ ಅಡಗಿಸಿಟ್ಟಿದ್ದ ಜಿಲೆಟಿನ್ ಕಡ್ಡಿ ಹಾಗೂ ಇಲೆಕ್ಟ್ರಿಕ್ ಡಿಟೋನೇಟರ್ಸ್ ಗಳನ್ನು ತರುವ ಪ್ರಯತ್ನದಲ್ಲಿದ್ದಾಗ ಸ್ಫೋಟ ಸಂಭವಿಸಿದೆ ಎನ್ನಲಾಗುತ್ತಿದೆ. ಇದೇ ವೇಳೆ, ಸ್ಥಳೀಯರು ಆರೋಗ್ಯ ಸಚಿವ ಸುಧಾಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಸುಧಾಕರ್ ಅವರ ನಿರ್ಲಕ್ಷ್ಯದಿಂದ ಮತ್ತು ಅವರ ಆಪ್ತರೇ ಗಣಿ ನಡೆಸುತ್ತಿದ್ದಾರೆ ಎಂದು ಆಕ್ರೋಶ ತೋರಿದ್ದಾರೆ.

ಕಠಿಣ ಕ್ರಮಕ್ಕೆ ಸಿಎಂ ಸೂಚನೆ

ಘಟನೆ ಸಂಬಂಧ ಆಘಾತ ವ್ಯಕ್ತಪಡಿಸಿರುವ ಸಿಎಂ ಯಡಿಯೂರಪ್ಪ, ಯಾರು ತಪ್ಪಿತಸ್ಥರಿದ್ದಾರೆ ಅವರ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದು , ಮಾಹಿತಿ ಪಡೆಯುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ. 

ಮಲೆನಾಡನ್ನೇ ಕಂಪಿಸಿದ ಭಾರೀ ಸ್ಪೋಟ ; ಕ್ರಷರ್ ಗೆ ತಂದಿದ್ದ ಡೈನಮೈಟ್ ಲೋಡ್ ಲಾರಿಯಲ್ಲೇ ಬ್ಲಾಸ್ಟ್ !! ಹತ್ತಕ್ಕೂ ಹೆಚ್ಚು ಸಾವು

ಶಿವಮೊಗ್ಗದಲ್ಲಿ ಸ್ಫೋಟ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಎಂದ ಸಿಎಂ, ಮೃತಪಟ್ಟವರಿಗೆ ಸಂತಾಪ ಸೂಚಿಸಿದ ಮೋದಿ

ಗಣಿ ಬ್ಲಾಸ್ಟ್ ತನಿಖೆಗೆ ಉನ್ನತ ಸಮಿತಿ ; 15 ಕಾರ್ಮಿಕರ ಪೈಕಿ ಸಿಕ್ಕಿದ್ದು ಐದೇ ಶವ !

Six workers were killed in an explosion of dynamites and guillotine sticks in a stone crusher unit at Chikkaballapur.