ಸ್ಫೋಟ ಪ್ರಕರಣ ; ಮುಖ್ಯಮಂತ್ರಿ ದುರಾಡಳಿತಕ್ಕೆ ಅಮಾಯಕರು ಬಲಿ : ಸಿದ್ದರಾಮಯ್ಯ ಆಕ್ರೋಶ

23-02-21 12:48 pm       Headline Karnataka News Network   ಕರ್ನಾಟಕ

ಚಿಕ್ಕಬಳ್ಳಾಪುರದ ಜಿಲೆಟಿನ್ ಸ್ಫೋಟ ಪ್ರಕರಣದ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು, ಫೆ.23: ಚಿಕ್ಕಬಳ್ಳಾಪುರದ ಜಿಲೆಟಿನ್ ಸ್ಫೋಟ ಪ್ರಕರಣದ ಬಗ್ಗೆ ಪ್ರತಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಲ್ಲು ಕ್ವಾರಿಯಲ್ಲಿ ಆರು ಮಂದಿ ಬಲಿಯಾಗಿರುವುದು ಜಿಲೆಟಿನ್ ಸ್ಫೋಟದಿಂದ ಅಲ್ಲ. ಅಕ್ರಮ ಗಣಿಗಳನ್ನು ಸಕ್ರಮ ಮಾಡಲು ಹೊರಟಿರುವ ಮುಖ್ಯಮಂತ್ರಿಗಳ ದುರಾಡಳಿತಕ್ಕೆ ಅಮಾಯಕ ಕಾರ್ಮಿಕರು ಬಲಿಯಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ, ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಶಿವಮೊಗ್ಗದಲ್ಲಿ ಸ್ಫೋಟ ನಡೆದು ತಿಂಗಳು ತುಂಬುವ ಮುನ್ನವೇ ಚಿಕ್ಕಬಳ್ಳಾಪುರದಲ್ಲಿ ಸ್ಫೋಟ ನಡೆದಿರುವುದು ರಾಜ್ಯ ಸರಕಾರದ ಬೇಜವಾಬ್ದಾರಿತನ, ನಿಷ್ಕ್ರಿಯ ಸರಕಾರ ಹಾಗೂ ಭ್ರಷ್ಟ ವ್ಯವಸ್ಥೆಗೆ ಸಾಕ್ಷಿ. ಮುಖ್ಯಮಂತ್ರಿಗಳೇ ನೀವು ಯಾರನ್ನು ರಕ್ಷಿಸುತ್ತಿದ್ದೀರಿ..? ಭ್ರಷ್ಟರನ್ನೇ ಅಥವಾ ಸಾಮಾನ್ಯ ಜನರನ್ನೇ ಎಂದು ಪ್ರಶ್ನೆ ಮಾಡಿದ್ದಾರೆ.

ಅಮಾಯಕ ಜೀವ ಹಾನಿಗೆ ಕಾರಣವಾದ ಜಿಲೆಟಿನ್ ಸ್ಫೋಟ ಘಟನೆ ಆಘಾತಕಾರಿ. ಮೃತರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಜೊತೆಗೆ ನೊಂದ ಕುಟುಂಬಗಳಿಗೆ ಸರಕಾರ ತಕ್ಷಣ ಪರಿಹಾರ ಘೋಷಿಸುವಂತೆ ಆಗ್ರಹಿಸುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. 

ಶಿವಮೊಗ್ಗ ದುರಂತ ಮಾಸುವ ಮುನ್ನವೇ ಮತ್ತೊಂದು ಗಣಿ ಸ್ಫೋಟ! ಆರು ಸಾವು, ಸಚಿವ ಸುಧಾಕರ್ ವಿರುದ್ಧ ಆಕ್ರೋಶ

ಮಲೆನಾಡನ್ನೇ ಕಂಪಿಸಿದ ಭಾರೀ ಸ್ಪೋಟ ; ಕ್ರಷರ್ ಗೆ ತಂದಿದ್ದ ಡೈನಮೈಟ್ ಲೋಡ್ ಲಾರಿಯಲ್ಲೇ ಬ್ಲಾಸ್ಟ್ !! ಹತ್ತಕ್ಕೂ ಹೆಚ್ಚು ಸಾವು

ಶಿವಮೊಗ್ಗದಲ್ಲಿ ಸ್ಫೋಟ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಎಂದ ಸಿಎಂ, ಮೃತಪಟ್ಟವರಿಗೆ ಸಂತಾಪ ಸೂಚಿಸಿದ ಮೋದಿ

Chikkaballapur guillotine blast Siddaramaiah slams at BJP govt for showing negligence in not stopping illegal stone quarry centres.