ಬ್ರೇಕಿಂಗ್ ನ್ಯೂಸ್
08-03-21 07:16 pm Headline Karnataka News Network ಕರ್ನಾಟಕ
ಬೆಂಗಳೂರು, ಮಾ.8: ಕೋವಿಡ್ ಸಂಕಷ್ಟ ಮತ್ತು ಆರ್ಥಿಕ ಹಿಂಜರಿತದ ನಡುವೆ ಬಿ.ಎಸ್ ಯಡಿಯೂರಪ್ಪ 2021-22ರ ಸಾಲಿನ ಬಜೆಟ್ ಮಂಡಿಸಿದ್ದಾರೆ. ಯಾವುದಕ್ಕೂ ಹೆಚ್ಚುವರಿ ತೆರಿಗೆ ಏರಿಸದೆ, ಅಳೆದು ತೂಗಿ ಸಮತೂಕದ ಬಟೆಜ್ ಮಂಡಿಸಿದ್ದಾರೆ. ಮಹಿಳಾ ದಿನಾಚರಣೆಯಂದು ಬಜೆಟ್ ಮಂಡಿಸಿದ್ದರಿಂದಲೋ ಏನೋ ಮಹಿಳೆಯರಿಗಾಗಿ ಕೆಲವು ಯೋಜನೆಗಳನ್ನೂ ಪ್ರಕಟಿಸಿದ್ದಾರೆ.
ಈಗಾಗ್ಲೇ ಇರುವ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡುವ ಜೊತೆಗೆ ಕರಾವಳಿಯಲ್ಲಿ ಉಪ್ಪು ನೀರು ಹಿಮ್ಮುಖವಾಗಿ ನುಗ್ಗುವುದನ್ನು ತಡೆಯಲು ಯೋಜನೆ ಪ್ರಕಟಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಖ್ಯವಾಗಿ ಉಪ್ಪು ನೀರು ನುಗ್ಗುವುದನ್ನು ಫ್ಲಾಪ್ ಗೇಟ್ ಮೂಲಕ ತಡೆಯಲು ಖಾರ್ ಲ್ಯಾಂಡ್ ಹೆಸರಲ್ಲಿ 300 ಕೋಟಿ ರೂ. ಯೋಜನೆ ಘೋಷಿಸಿದ್ದಾರೆ.
ಮೀನುಗಾರರಿಗೆ ಸುಂಕರಹಿತ ಡೀಸೆಲ್
ಕರಾವಳಿಯ ಮೀನುಗಾರಿಕೆ ಮತ್ತು ಮೀನು ಮಾರಾಟ ಕ್ಷೇತ್ರಕ್ಕೂ ಆದ್ಯತೆ ನೀಡಿದ್ದಾರೆ. ಯಾಂತ್ರೀಕೃತ ದೋಣಿಗಳಿಗೆ ಡೀಸೆಲ್ ಅನ್ನು ಡೆಲಿವರಿ ಪಾಯಿಂಟ್ ನಲ್ಲೇ ಸುಂಕ ರಹಿತವಾಗಿ ವಿತರಿಸಲು ಕ್ರಮ, ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರಕಾರದಿಂದ 62 ಕೋಟಿ ರೂ., ರಾಜ್ಯದಾದ್ಯಂತ ಮೀನು ಮಾರಾಟ ಘಟಕ, ಮತ್ಸ್ಯ ದರ್ಶಿನಿ ನಿರ್ಮಾಣಕ್ಕೆ 30 ಕೋಟಿ ರೂ. ನೀಡಲಾಗಿದೆ.
ಕೃಷಿ ಮತ್ತು ಪೂರಕ ಚಟುವಟಿಕೆಗಳಿಗಾಗಿ 31,028 ಕೋಟಿ ರೂ, ಮಹಿಳೆಯರ ಉತ್ತೇಜನಕ್ಕಾಗಿ 37,188 ಕೋಟಿ ರೂ., ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ ಯೋಜನೆಗಳಿಗಾಗಿ 62150 ಕೋಟಿ, ಆರ್ಥಿಕ ಅಭಿವೃದ್ಧಿಗೆ ಪ್ರಚೋದನೆ ನೀಡಲು 53,529 ಕೋಟಿ, ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗಾಗಿ 7795 ಕೋಟಿ ರೂ, ಸಂಸ್ಕೃತಿ, ಪರಂಪರೆ, ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಗಾಗಿ 2645 ಕೋಟಿ ಮೀಸಲು ಇಡಲಾಗಿದೆ.
ಪ್ರತಿ ಜಿಲ್ಲೆಯಲ್ಲಿ ಗೋಶಾಲೆ ಸ್ಥಾಪನೆ
ಕಳೆದ ಬಾರಿ ಗೋವಿನ ಸಂರಕ್ಷಣೆಗಾಗಿ ಕಾನೂನು ಜಾರಿ ಮಾಡಿದ್ದ ಬಿಜೆಪಿ ಸರಕಾರ ಈ ಬಾರಿ ಪ್ರತೀ ಜಿಲ್ಲೆಯಲ್ಲಿ ಗೋಶಾಲೆ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿದೆ. ಇದಕ್ಕಾಗಿ 50 ಕೋಟಿ ರೂ. ತೆಗೆದಿರಿಸಲಾಗಿದೆ. ಕರಾವಳಿಯ ಕೃಷಿಕರಿಗೆ ಪೂರಕವಾಗಿ ಅಡಿಕೆ ತೋಟದಲ್ಲಿ ಕಂಡುಬರುವ ಎಲೆರೋಗದ ಬಗ್ಗೆ ಅಧ್ಯಯನ ನಡೆಸಲು ಮತ್ತು ಪರ್ಯಾಯ ಬೆಳೆಗಳ ಪ್ರೋತ್ಸಾಹಕ್ಕಾಗಿ 25 ಕೋಟಿ ರೂ. ನಿಗದಿಪಡಿಸಲಾಗಿದೆ.
ಫ್ಲಾಟ್ ಮುದ್ರಾಂಕ ಶುಲ್ಕ ಇಳಿಕೆ
ಇದೇ ವೇಳೆ, ರಿಯಲ್ ಎಸ್ಟೇಟ್ ಕ್ಷೇತ್ರ ಚಿಗುರುವಂತಾಗಲು ಫ್ಲ್ಯಾಟ್ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಇಳಿಕೆ ಮಾಡಿ ಅಚ್ಚರಿ ಮೂಡಿಸಿದೆ. ಶುಲ್ಕ ಇಳಿಸಿ ಮಧ್ಯಮ ವರ್ಗದ ಜನರು ಫ್ಲಾಟ್ ಖರೀದಿಸುವಂತೆ ಉತ್ತೇಜನ ನೀಡಿದೆ. ಫ್ಲಾಟ್ ನೋಂದಣಿಯ ಶುಲ್ಕವನ್ನು ಸರಕಾರ ಶೇ.5ರಿಂದ 3ಕ್ಕೆ ಇಳಿಸಿದೆ.
ಸರಕಾರಿ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ 150 ಕೋಟಿ ಇರಿಸಲಾಗಿದೆ. ಸರಕಾರಿ ಶಾಲೆಗಳಿಗೆ ಪೀಠೋಪಕರಣ ಒದಗಿಸಲು 50 ಕೋಟಿ ನೀಡಲಾಗಿದೆ. ಜಿಲ್ಲಾ ಕೇಂದ್ರಗಳಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗಾಗಿ ರೂ. 50 ಕೋಟಿ ವೆಚ್ಚದಲ್ಲಿ 50 ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ.
ಅಯೋಧ್ಯೆಯಲ್ಲಿ ಯಾತ್ರಿ ನಿವಾಸ
ಅಯೋಧ್ಯೆಗೆ ಭೇಟಿ ನೀಡುವ ಕರ್ನಾಟಕದ ನಿವಾಸಿಗಳಿಗಾಗಿ ಸುಸಜ್ಜಿತ ಯಾತ್ರಿ ನಿವಾಸ ನಿರ್ಮಿಸಲು ರೂ. 10 ಕೋಟಿ ಇಡಲಾಗಿದೆ. ಅಯೋಧ್ಯೆ ನಿರ್ಮಾಣವಾಗುತ್ತಿರುವ ಹೊತ್ತಲ್ಲೇ ಉತ್ತರ ಪ್ರದೇಶ ಸರಕಾರದಿಂದ ಈ ಬಗ್ಗೆ ಜಾಗ ಕೇಳಿದ್ದು, ಅಲ್ಲಿ ಪ್ರತ್ಯೇಕ ಭವನ ನಿರ್ಮಾಣಕ್ಕೆ ಸರಕಾರ ಮುಂದಾಗಿದೆ.
Karnataka chief minister BS Yediyurappa on Monday presented a budget allotment of Rs 24,6207 crore as against the state budget of Rs 22,9925 crore, registering an increase of over 7%.
24-02-25 01:36 pm
HK News Desk
Kumar Bangarappa, BJP President: ಬಿಜೆಪಿ ರಾಜ್ಯ...
23-02-25 06:38 pm
Telangana Model, Pramod Muthalik, CM Siddaram...
21-02-25 10:47 pm
Rohini Sindhuri, Roopa moudgil, latest news:...
21-02-25 10:12 pm
Santosh Lad, Modi, Nitin Gadkari: ಬಿಜೆಪಿ ಅಧಿಕ...
21-02-25 04:36 pm
24-02-25 10:14 pm
HK News Desk
India Pak Match 2025 Live: ಪಾಕ್ ತಂಡವನ್ನು ಚಾಂಪ...
23-02-25 11:22 pm
ಗಂಗಾ ನದಿಗಿದೆ ಸ್ವಯಂ ಶುದ್ಧೀಕರಣದ ಶಕ್ತಿ ; ಕೋಟ್ಯಂತ...
23-02-25 09:52 pm
ದುಬೈನಲ್ಲಿ ಕ್ರಿಮಿನಲ್ ಇನ್ವೆಸ್ಟಿಗೇಶನ್ ಅಧಿಕಾರಿಗಳ...
22-02-25 09:48 pm
ದುಬೈ ಉದ್ಯಮಿ ಬಿ.ಆರ್ ಶೆಟ್ಟಿಗೆ ದುಬೈ ಕೋರ್ಟಿನಿಂದ ಮ...
22-02-25 07:51 pm
24-02-25 02:50 pm
Mangalore Correspondent
Mangalore accident, Surathkal, Raichur: ಸುರತ್...
23-02-25 03:20 pm
Rani Abbakka, Mamata Ballal, Mangalore: ಐನೂರು...
23-02-25 01:12 pm
Siddaramaiah, Priyank Kharge Mangalore, D K S...
22-02-25 05:21 pm
Singari Beedi Robbery, IPS, crime: ಸಿಂಗಾರಿ ಬೀ...
21-02-25 08:22 pm
24-02-25 10:51 pm
HK News Desk
Illegal drug supply, Mangalore: ಮಂಗಳೂರು ಜೈಲಿಗ...
24-02-25 09:43 pm
Bangalore crime, Police constable, Rape, Bomm...
24-02-25 07:08 pm
Sirsi Murder, KSRTC Bus, crime: ಶಿರಸಿ ; ಹತ್ತು...
23-02-25 03:42 pm
Visa fraud, Bangalore crime, Arrest: ವಿದೇಶಿ ವ...
22-02-25 10:36 pm