ಜಾರಕಿಹೊಳಿಯೇ ಸಿಡಿ ಮಾಡಿದ್ದು ; ಸಂಚಲನ ಮೂಡಿಸಿದ ಸಂತ್ರಸ್ತ ಯುವತಿ

13-03-21 10:46 pm       Headline Karnataka News Network   ಕರ್ನಾಟಕ

ಸಿಡಿ ಪ್ರಕರಣದಲ್ಲಿ ಸಿಕ್ಕಿಬಿದ್ದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಜಕೀಯ ತೊಳಲಾಟಕ್ಕೆ ಕಾರಣವಾಗಿರುವಾಗಲೇ ಸಂತ್ರಸ್ತೆ ಎನ್ನಲಾದ ಯುವತಿ ವಿಡಿಯೋ ಬಿಡುಗಡೆ ಮಾಡಿ, ಮತ್ತೆ ಸಂಚಲನ ಮೂಡಿಸಿದ್ದಾರೆ. ‌

ಬೆಂಗಳೂರು, ಮಾ.13: ಸಿಡಿ ಪ್ರಕರಣದಲ್ಲಿ ಸಿಕ್ಕಿಬಿದ್ದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಜಕೀಯ ತೊಳಲಾಟಕ್ಕೆ ಕಾರಣವಾಗಿರುವಾಗಲೇ ಸಂತ್ರಸ್ತೆ ಎನ್ನಲಾದ ಯುವತಿ ವಿಡಿಯೋ ಬಿಡುಗಡೆ ಮಾಡಿ, ಮತ್ತೆ ಸಂಚಲನ ಮೂಡಿಸಿದ್ದಾರೆ. ‌

 ನನಗೆ ಯಾವುದೇ ರಾಜಕೀಯ ನಾಯಕರ ಬೆಂಬಲವಿಲ್ಲ. ರಮೇಶ್ ಜಾರಕಿಹೊಳಿಯವರಿಂದಲೇ ಸಿಡಿ ರಿಲೀಸ್ ಆಗಿದೆ. ಈ ವಿಡಿಯೋದಿಂದಾಗಿ ನನ್ನ ಮಾನ ಹರಾಜಾಗಿದೆ. ಇದರಿಂದ ನನ್ನ ತಂದೆ, ತಾಯಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನಾನೂ ಕೂಡ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದೇನೆ ಎಂದು ಸಿಡಿಯಲ್ಲಿ ಕಾಣಿಸಿಕೊಂಡಿರುವ ಸಂತ್ರಸ್ತೆ ಹೇಳಿಕೆ ನೀಡಿದ್ದಾರೆ. 

ಸಂತ್ರಸ್ತ ಯುವತಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು ತನ್ನ ಮುಖವನ್ನು ಬ್ಲರ್​ ಮಾಡದೇ ಹಾಗೆಯೇ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಯಾರದೋ ಕೈಗೊಂಬೆ; ರಮೇಶ್ 

ramesh jarkiholi: BJP MLA Ramesh Jarkiholi says CD is fake, aimed at  ruining his career - The Economic Times

ಇತ್ತ, ಸಂತ್ರಸ್ತ ಯುವತಿಯ ವಿಡಿಯೋ ಬಿಡುಗಡೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಮೇಶ್​ ಜಾರಕಿಹೊಳಿ, ಯುವತಿ ಯಾರದೋ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ದೂರು ನೀಡಿದ ಅರ್ಧ ಗಂಟೆಯಲ್ಲೇ ಯುವತಿ ಹೇಳಿಕೆ ಕೊಟ್ಟಿದ್ದಾರೆ. 12 ದಿನ ಏನೂ ಹೇಳದೆ ದೂರು ನೀಡಿದ ಬಳಿಕ ಪ್ರತ್ಯಕ್ಷವಾಗಿದ್ದಾರೆ ಎಂದು ಹೇಳಿದರು.

ಹೆಣ್ಣು ಮಗಳಾಗಿಯೂ ಇಷ್ಟೊಂದು ಷಡ್ಯಂತ್ರ ಮಾಡ್ತಿದ್ದಾರೆ. ನಾನು ನಿರಪರಾಧಿ. ಎಷ್ಟು ಸಿಡಿ ಬೇಕಾದ್ರೂ ಅವರು ಬಿಡುಗಡೆ ಮಾಡಲಿ. ಕೆಲವರಿಗೆ ನನಗಿಂತ ಹೆಚ್ಚಿನ ವಿಷಯ ಗೊತ್ತಿದೆ. ಎಸ್‌ಐಟಿಯವರು ಸೂಕ್ತ ತನಿಖೆ ನಡೆಸಲಿ. ಕಾನೂನು ಪ್ರಕಾರ ಯುವತಿಗೆ ರಕ್ಷಣೆ ಕೊಡಲಿ. ಕೇಸ್ ತನಿಖೆ ಬಗ್ಗೆ ಗೃಹಸಚಿವರಿಂದ ಮಾಹಿತಿ ಪಡೆದಿದ್ದೇನೆ ಎಂದು ಗೃಹ ಸಚಿವರ ಭೇಟಿ ಬಳಿಕ ರಮೇಶ್ ಜಾರಕಿಹೊಳಿ ಹೇಳಿದರು.

‘ಸಂತ್ರಸ್ತೆಯ ವಿಡಿಯೋ ಹೇಳಿಕೆ ಗಮನಿಸಿಲ್ಲ’ 

Karnataka Home Minister Basavaraj Bommai tests COVID-19 positive

ಸಂತ್ರಸ್ತೆ ಬಿಡುಗಡೆ ಮಾಡಿರುವ ವಿಡಿಯೋ ಗಮನಿಸಿಲ್ಲ ಎಂದು ಗೃಹಸಚಿವ ಬೊಮ್ಮಾಯಿ ಹೇಳಿದ್ದಾರೆ. ಸಂತ್ರಸ್ತೆ ಕುಟುಂಬಕ್ಕೆ ಜೀವ ಭಯವಿದೆ ಎಂಬುದು ಗಮನಕ್ಕೆ ಬಂದಿದೆ. ಸಂತ್ರಸ್ತೆ ಕುಟುಂಬಕ್ಕೆ ಸೂಕ್ತ ಭದ್ರತೆ ಒದಗಿಸಲು ಸೂಚನೆ ಕೊಟ್ಟಿದ್ದೇನೆ ಎಂದು ಹೇಳಿದರು.

ಸಿಡಿ ವಿಷಯದಲ್ಲಿ ವೈಯಕ್ತಿಕ ಅಭಿಪ್ರಾಯ ಮುಖ್ಯವಾಗಲ್ಲ. ತನಿಖೆಗೆ ವಹಿಸಿರುವುದರಿಂದ ಸತ್ಯಾಂಶ ಹೊರಬೀಳುತ್ತೆ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಯುವತಿಯ ರಕ್ಷಣೆಗೆ ಬದ್ಧ ; ನಾಯ್ಡು 

KSCW plans committees to save life of rape survivors | Deccan Herald

ರಮೇಶ್ ಸಿಡಿಯಲ್ಲಿರುವ ಯುವತಿಯ ರಕ್ಷಣೆಗೆ ಬದ್ಧ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಆತ್ಮಹತ್ಯೆಗೆ ಯತ್ನ ಬೇಡ. ಸಂತ್ತ್ರಸ್ತೆ ಖಿನ್ನತೆಗೊಳಗಾಗಿ ಭಯಪಡುವುದು ಬೇಡ. ಯುವತಿಗೆ ರಕ್ಷಣೆ ನೀಡಲು ಪೊಲೀಸರಿಗೂ ಸೂಚನೆ ಕೊಡುತ್ತೇವೆ. ಡಿಜಿ & ಐಜಿಪಿ, ಪೊಲೀಸ್ ಆಯುಕ್ತರಿಗೂ ಸೂಚನೆ ನೀಡಲಾಗುವುದು ಎಂದು ಪ್ರಮೀಳಾ ನಾಯ್ಡು ಹೇಳಿದ್ದಾರೆ.

Ramesh Jarkiholi sex cd women in the Video alleges that minister was sexually exploiting her in the name of job. She also said she attempted for suicde thrice