ಬ್ರೇಕಿಂಗ್ ನ್ಯೂಸ್
17-03-21 12:28 pm Bangalore Correspondent ಕರ್ನಾಟಕ
ಬೆಂಗಳೂರು, ಮಾ.17: ಆರೆಸ್ಸೆಸ್ ರಾಷ್ಟ್ರೀಯ ಅಧಿವೇಶನವಾದ ಅಖಿಲ ಭಾರತ ಪ್ರತಿನಿಧಿ ಸಭಾ ಈ ಬಾರಿಯೂ ಬೆಂಗಳೂರಿನಲ್ಲೇ ಆಯೋಜಿಸಲಾಗಿದೆ. ಮಾರ್ಚ್ 19 ಹಾಗೂ 20ರಂದು ಅಧಿವೇಶನ ನಡೆಯಲಿದೆ.
ಕಳೆದ ವರ್ಷ ಬೆಂಗಳೂರಿನಲ್ಲಿ ಸಭೆ ಆಯೋಜನೆಯಾಗಿತ್ತಾದರೂ ಕೊರೊನಾ ಸೋಂಕಿನ ಕಾರಣ ಕೊನೆಕ್ಷಣದಲ್ಲಿ ರದ್ದುಪಡಿಸಲಾಗಿತ್ತು. ಪ್ರತಿ ಮೂರು ವರ್ಷಕ್ಕೊಮ್ಮೆ ಮಹಾರಾಷ್ಟ್ರದ ನಾಗಪುರದಲ್ಲಿ ಅಧಿವೇಶನ ನಡೆಯುವುದು ಹಿಂದಿನಿಂದ ಬಂದ ಸಂಪ್ರದಾಯವಾಗಿತ್ತು. ಕಳೆದ ಬಾರಿ ಬೆಂಗಳೂರಿನಲ್ಲಿ ಮಹತ್ವದ ಅಧಿವೇಶನ ನಡೆಸಲು ತಯಾರಿ ನಡೆದಿತ್ತು. ಕೊನೆಯ ಹಂತದಲ್ಲಿ ರದ್ದುಗೊಂಡಿದ್ದ ಅಧಿವೇಶನವನ್ನು ಈ ಬಾರಿ ಮತ್ತೆ ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ.
ಈ ಅಧಿವೇಶನದಲ್ಲಿ ಪ್ರತಿ ಬಾರಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಚುನಾವಣೆ ನಡೆಯುತ್ತದೆ. ಸದ್ಯ ಕಾರ್ಯವಾಹರಾಗಿ ಸುರೇಶ್ ಜೋಷಿ ಇದ್ದಾರೆ. ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಈ ಬಾರಿಯೂ ಚುನಾವಣೆ ನಡೆದಲ್ಲಿ ಮೊದಲ ಬಾರಿ ಬೆಂಗಳೂರಿನಲ್ಲಿ ಮಹತ್ವದ ನಿರ್ಧಾರ ಕೈಗೊಂಡಂತೆ ಆಗಲಿದೆ. ಜೋಶಿ ಅವರು 12 ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. ಅವರೇ ಮತ್ತೆ ಅಧಿಕಾರ ಬಯಸಿದರೆ ಆರ್ ಎಸ್ಎಸ್ ಮುಖ್ಯಸ್ಥರೇ ನಿರ್ಧರಿಸುತ್ತಾರೆ. 72 ವರ್ಷದ ಜೋಶಿ ಅವರು ಅದೇ ಸ್ಥಾನದಲ್ಲಿ ಮುಂದುವರಿದರೆ ಮತ್ತೆ ಮೂರು ವರ್ಷಕ್ಕೆ ಅವರ ಅವಧಿಯಿರುತ್ತದೆ.
ಸುರೇಶ್ ಭೈಯಾಜಿ ಜೋಷಿ ಅಧಿಕಾರದಿಂದ ಕೆಳಗಿಳಿಯಲು ಬಯಸಿದರೇ, ಅದನ್ನು ಪಡೆಯಲು ಆರು ಮಂದಿ ಸರದಿಯಲ್ಲಿದ್ದಾರೆ. ದತ್ತಾತ್ರೇಯ ಹೊಸಬಾಳೆ, ವಿ. ಭಾಗಯ್ಯ, ಸುರೇಶ್ ಸೋನಿ, ಕೃಷ್ಣ ಗೋಪಾಲ್, ಮನಮೋಹನ್ ವೈದ್ಯ ಮತ್ತು ಮುಕುಂದ ಸಿ.ಆರ್ ಕೂಡ ರೇಸ್ ನಲ್ಲಿದ್ದಾರೆ ಎನ್ನುವ ಮಾಹಿತಿಯಿದೆ.
ಚುನಾವಣೆ ನಡೆಸುವುದು ಸಂಘದ ವರಿಷ್ಠರಿಗೆ ಬಿಟ್ಟ ವಿಷಯವಾಗಿದ್ದು, ಒಟ್ಟು 11 ವಿಭಾಗದ 500 ಮಂದಿ ಪ್ರತಿನಿಧಿಗಳು ಚುನಾವಣೆಯಲ್ಲಿ ಭಾಗವಹಿಸಲಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ನಾಗಪುರದಿಂದ ಹೊರಗೆ ಚುನಾವಣೆ ನಡೆಯುತ್ತಿರುವುದು ಬಹಶಃ ಇದೇ ಮೊದಲು ಎನ್ನಲಾಗಿದೆ. ಚನ್ನೇನಹಳ್ಳಿಯ ಜನಸೇವಾ ಕೇಂದ್ರದಲ್ಲೇ ಈ ಬಾರಿಯೂ ಅಧಿವೇಶನ ನಡೆಯಲಿದೆ. ಸಾಮಾನ್ಯವಾಗಿ 1400 ಪ್ರತಿನಿಧಿಗಳು ದೇಶದ ವಿವಿಧ ಭಾಗಗಳಿಂದ ಆಗಮಿಸುತ್ತಾರೆ. ಆದರೆ ಕೊರೊನಾ ಸೋಂಕು ಇರುವುದರಿಂದ ಈ ಸಲ ಎಷ್ಟು ಮಂದಿ ಪಾಲ್ಗೊಳ್ಳಲಿದ್ದಾರೆಂದು ಖಚಿತವಾಗಿಲ್ಲ.
Bengaluru is again set to host the annual conclave of the Rashtriya Swayamsevak Sangh’s (RSS) highest decision-making body for the first time.
24-02-25 01:36 pm
HK News Desk
Kumar Bangarappa, BJP President: ಬಿಜೆಪಿ ರಾಜ್ಯ...
23-02-25 06:38 pm
Telangana Model, Pramod Muthalik, CM Siddaram...
21-02-25 10:47 pm
Rohini Sindhuri, Roopa moudgil, latest news:...
21-02-25 10:12 pm
Santosh Lad, Modi, Nitin Gadkari: ಬಿಜೆಪಿ ಅಧಿಕ...
21-02-25 04:36 pm
24-02-25 10:14 pm
HK News Desk
India Pak Match 2025 Live: ಪಾಕ್ ತಂಡವನ್ನು ಚಾಂಪ...
23-02-25 11:22 pm
ಗಂಗಾ ನದಿಗಿದೆ ಸ್ವಯಂ ಶುದ್ಧೀಕರಣದ ಶಕ್ತಿ ; ಕೋಟ್ಯಂತ...
23-02-25 09:52 pm
ದುಬೈನಲ್ಲಿ ಕ್ರಿಮಿನಲ್ ಇನ್ವೆಸ್ಟಿಗೇಶನ್ ಅಧಿಕಾರಿಗಳ...
22-02-25 09:48 pm
ದುಬೈ ಉದ್ಯಮಿ ಬಿ.ಆರ್ ಶೆಟ್ಟಿಗೆ ದುಬೈ ಕೋರ್ಟಿನಿಂದ ಮ...
22-02-25 07:51 pm
24-02-25 02:50 pm
Mangalore Correspondent
Mangalore accident, Surathkal, Raichur: ಸುರತ್...
23-02-25 03:20 pm
Rani Abbakka, Mamata Ballal, Mangalore: ಐನೂರು...
23-02-25 01:12 pm
Siddaramaiah, Priyank Kharge Mangalore, D K S...
22-02-25 05:21 pm
Singari Beedi Robbery, IPS, crime: ಸಿಂಗಾರಿ ಬೀ...
21-02-25 08:22 pm
24-02-25 10:51 pm
HK News Desk
Illegal drug supply, Mangalore: ಮಂಗಳೂರು ಜೈಲಿಗ...
24-02-25 09:43 pm
Bangalore crime, Police constable, Rape, Bomm...
24-02-25 07:08 pm
Sirsi Murder, KSRTC Bus, crime: ಶಿರಸಿ ; ಹತ್ತು...
23-02-25 03:42 pm
Visa fraud, Bangalore crime, Arrest: ವಿದೇಶಿ ವ...
22-02-25 10:36 pm