ಬ್ರೇಕಿಂಗ್ ನ್ಯೂಸ್
19-03-21 04:09 pm Headline Karnataka News Network ಕರ್ನಾಟಕ
ಬೆಂಗಳೂರು, ಮಾ.19 : ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮನೆ ಮುಂದೆ ಗನ್ ಮ್ಯಾನ್ ಮತ್ತು ವಾಹನ ಚಾಲಕ ಕಿತ್ತಾಡಿಕೊಂಡಿದ್ದು ಇಬ್ಬರು ಸಿಬ್ಬಂದಿಗಳ ಹೊಡೆದಾಟ ಬಿಡಿಸಲು ಪೊಲೀಸ್ ಸಿಬ್ಬಂದಿ ಹರಸಾಹಸ ಪಟ್ಟಿರುವ ವಿಡಿಯೋ ಈಗ ವೈರಲ್ ಆಗಿದೆ.
ಸಚಿವ ಸುಧಾಕರ್ ಮನೆಯ ಖಾಸಗಿ ಚಾಲಕ ಸೋಮಶೇಖರ್ ಮತ್ತು ಗನ್‌ಮ್ಯಾನ್ ತಿಮ್ಮಯ್ಯ ಪರಸ್ಪರ ಬೀದಿಯಲ್ಲಿ ಹೊಡೆದಾಡಿದವರು. ನಿನ್ನೆ ಡಾ.ಕೆ.ಸುಧಾಕರ್ ಅವರು ತನ್ನ ಮನೆ ಬಳಿ ಬರುವ ವೇಳೆಗೆ ಟೀ ಮಾರುತ್ತಿದ್ದ ಅಂಗವಿಕಲ ವ್ಯಕ್ತಿಯೋರ್ವರು ಅಡ್ಡ ಬಂದಿದ್ದಾರೆ. ಇದರಿಂದ ಸಿಟ್ಟಿಗೆದ್ದ ಸಚಿವರ ಗನ್‌ಮ್ಯಾನ್ ತಿಮ್ಮಯ್ಯ, ಟೀ ಮಾರುವ ವಿಶೇಷಚೇತನ ವ್ಯಕ್ತಿಗೆ ಹೊಡೆದಿದ್ದಾರೆ. ಗನ್ ಮ್ಯಾನ್ ಒಬ್ಬ ವಿಶೇಷಚೇತನ ವ್ಯಕ್ತಿಯ ಮೇಲೆ ಕೈಮಾಡಿದ್ದು ಅಲ್ಲಿದ್ದ ಎಲ್ಲರಿಗೂ ಬೇಸರ ತರಿಸಿದೆ.
ಘಟನೆ ಬಳಿಕ ಈ ವಿಚಾರದಲ್ಲಿ ಸ್ಥಳೀಯರು ತಿಮ್ಮಯ್ಯನನ್ನು ಪ್ರಶ್ನೆ ಮಾಡಿದ್ದರು. ಘಟನೆ ನೋಡಿದ್ದ ಖಾಸಗಿ ವಾಹನ ಚಾಲಕ ಸೋಮಶೇಖರ್ ಸಚಿವರಿಗೆ ಈ ಬಗ್ಗೆ ದೂರು ನೀಡಿರಬಹುದು ಎಂಬ ಅನುಮಾನದಲ್ಲಿ ಇಂದು ಬೆಳಗ್ಗೆ ಸೋಮಶೇಖರ್ ನನ್ನು ಪ್ರಶ್ನೆ ಮಾಡಿದ್ದಾನೆ. ‘ನಾನು ಟೀ ಮಾರಾಟಗಾರನಿಗೆ ಹಲ್ಲೆ ನಡೆಸಿದ್ದನ್ನು ನೀನು ಸಚಿವರಿಗೆ ಹೇಳಿದ್ದೀಯಾ’ ಎಂದು ಕೂಗುತ್ತಾ ಸೋಮಶೇಖರ್ ಮೇಲೆ ತಿಮ್ಮಯ್ಯ ಕೈಎತ್ತಿದ್ದಾನೆ. ಈ ಘಟನೆ ಸಚಿವ ಸುಧಾಕರ್ ಮನೆ ಮುಂದಿನ ರಸ್ತೆಯಲ್ಲೇ ನಡೆದಿದ್ದು ರಸ್ತೆಯಲ್ಲಿ ಇಬ್ಬರೂ ತಾವು ಸಚಿವರ ಸಿಬಂದಿ ಅನ್ನುವ ಪರಿವೇ ಇಲ್ಲದೆ ಹೊರಳಾಡಿದ್ದಾರೆ. ಸಿಬಂದಿಗಳಿಬ್ಬರು ಹೊಡೆದಾಟ, ಹೊರಳಾಡಿರುವ ಘಟನೆಯ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು ವ್ಯಾಪಕ ಟೀಕೆ ಕೇಳಿಬಂದಿದೆ.
ಡಾ.ಕೆ.ಸುಧಾಕರ್ ಅವರ ಮನೆ ಸಮೀಪವೇ ರಮೇಶ್ ಜಾರಕಿಹೊಳಿ ಅವರ ಮನೆಯಿದೆ. ಸೀಡಿ ಪ್ರಕರಣದ ಬಳಿಕ ಮಾಧ್ಯಮ ಸಿಬ್ಬಂದಿಗಳು ಅವರ ಮನೆ ಮುಂದೆ ಇರುವುದು ವಾಡಿಕೆಯಾಗಿದ್ದರೆ, ಕೊರೊನಾ ಸೋಂಕಿನ ಆತಂಕದಿಂದಾಗಿ ಡಾ.ಕೆ.ಸುಧಾಕರ್ ಮನೆ ಬಳಿಯೂ ವಿವರ ಪಡೆಯಲು ಮಾಧ್ಯಮ ಪ್ರತಿನಿಧಿಗಳು ಇರುತ್ತಾರೆ. ಇದೆಲ್ಲ ಗೊತ್ತಿದ್ದರೂ, ಹೀಗೆ ನಡುರಸ್ತೆಯಲ್ಲಿ ಸಚಿವರ ಸಿಬಂದಿ ಹೊಡೆದಾಡಿರುವುದು ಮಾಧ್ಯಮ ವಲಯದಲ್ಲಿ ನಗೆಪಾಟಲು ಮತ್ತು ಸಾರ್ವಜನಿಕರ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
Minister Sudhakar gunman and driver fight in front of his residence in Bangalore video goes viral on social media.
15-09-25 03:39 pm
HK News Desk
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
14-09-25 10:49 pm
HK News Desk
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
15-09-25 02:08 pm
Mangalore Correspondent
ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್ಐಟಿ ಸಿ...
15-09-25 01:58 pm
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
Mangalore Protest: ರಸ್ತೆ ನಮ್ಮ ಹಕ್ಕು, ಭಿಕ್ಷೆಯಲ...
14-09-25 10:34 pm
14-09-25 06:01 pm
HK News Desk
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm