ಆರೆಸ್ಸೆಸ್ ಸರಕಾರ್ಯವಾಹ ಹುದ್ದೆಗೆ ದತ್ತಾತ್ರೇಯ ಹೊಸಬಾಳೆ ; ಪ್ರತಿನಿಧಿ ಸಭಾ ಘೋಷಣೆ

20-03-21 02:50 pm       Headline Karnataka News Network   ಕರ್ನಾಟಕ

ಅಖಿಲ ಭಾರತೀಯ ಪ್ರತಿನಿಧಿ ಸಭಾದಲ್ಲಿ ಸರಕಾರ್ಯವಾಹರ ಹುದ್ದೆಗೆ ಚುನಾವಣೆ ನಡೆದಿದ್ದು ಕರ್ನಾಟಕ ಮೂಲದ ದತ್ತಾತ್ರೇಯ ಹೊಸಬಾಳೆ ಅವರನ್ನು ಆಯ್ಕೆ ಮಾಡಲಾಗಿದೆ.

ಬೆಂಗಳೂರು, ಮಾ.20: ರಾಷ್ಟ್ರೀಯ ಸ್ವಯಂಸೇವಕ ಸಂಘದ ನೂತನ ಸರಕಾರ್ಯವಾಹರಾಗಿ ದತ್ತಾತ್ರೇಯ ಹೊಸಬಾಳೆ ಅವರನ್ನು ನೇಮಕ ಮಾಡಲಾಗಿದೆ. 

ಬೆಂಗಳೂರಿನಲ್ಲಿ ನಡೆದ ಅಖಿಲ ಭಾರತೀಯ ಪ್ರತಿನಿಧಿ ಸಭಾದಲ್ಲಿ ಸರಕಾರ್ಯವಾಹರ ಹುದ್ದೆಗೆ ಚುನಾವಣೆ ನಡೆದಿದ್ದು ಕರ್ನಾಟಕ ಮೂಲದ ದತ್ತಾತ್ರೇಯ ಹೊಸಬಾಳೆ ಅವರನ್ನು ಆಯ್ಕೆ ಮಾಡಲಾಗಿದೆ. ಅವರು 2009ರಿಂದ ಸಹ ಸರಕಾರ್ಯವಾಹರಾಗಿ ಇದ್ದರು. 

ಕಳೆದ 12 ವರ್ಷಗಳಲ್ಲಿ ಸುರೇಶ್ ಭೈಯಾಜಿ ಜೋಷಿ ಸಹ ಸರಕಾರ್ಯವಾಹರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಮೂರು ವರ್ಷಗಳಿಗೊಮ್ಮೆ ನಡೆಯುವ ಅಖಿಲ ಭಾರತೀಯ ಪ್ರತಿನಿಧಿ ಸಭಾದಲ್ಲಿ ಈ ಮಹತ್ವದ ಹುದ್ದೆಯ ಆಯ್ಕೆ ನಡೆಯುತ್ತದೆ. 

ಪ್ರತಿ ಬಾರಿ ನಾಗಪುರದಲ್ಲಿ ಪ್ರತಿನಿಧಿ ಸಭಾ ನಡೆಯುತ್ತದೆ. ಇದೇ ಮೊದಲ ಬಾರಿ ಬೆಂಗಳೂರಿನಲ್ಲಿ ಈ ಮಹತ್ವದ ಸಮಾವೇಶ ಆಯೋಜನೆ ಆಗಿತ್ತು. ಇಲ್ಲಿ ನಡೆದ ಪ್ರತಿನಿಧಿ ಸಭಾ ಸಮಾವೇಶದಲ್ಲಿ ದೇಶದ ವಿವಿಧೆಡೆಯಿಂದ ಆಗಮಿಸಿದ್ದ 400 ಪ್ರತಿನಿಧಿಗಳು ಸರಕಾರ್ಯವಾಹರ ಹುದ್ದೆಗೆ ಆಯ್ಕೆ ನಡೆಸುತ್ತಾರೆ. ಈ ಬಾರಿ ಮನಮೋಹನ್ ವೈದ್ಯ, ಸಿ.ಆರ್ ಮುಕುಂದ್ ಸರಕಾರ್ಯವಾಹ ಹುದ್ದೆಗೇರುವಲ್ಲಿ ರೇಸಿನಲ್ಲಿದ್ದರು ಎನ್ನಲಾಗಿತ್ತು.

The Rashtriya Swayamsevak Sangh (RSS) on Saturday saw a change of guard with Dattatreya Hosabale being elected as its ‘Sarkaryavah’.