ಯಾರೂ ಹರಿಶ್ಚಂದ್ರರಿಲ್ಲ, ಎಲ್ಲ ಮನೆ ದೋಸೇನೂ ತೂತೇ.. ; ಎಚ್ಡಿಕೆ ಟಾಂಗ್

24-03-21 04:43 pm       Headline Karnataka News Network   ಕರ್ನಾಟಕ

ಎಲ್ಲರ ನೈತಿಕತೆಯ ಬಗ್ಗೆಯೂ ತನಿಖೆಯಾಗಲಿ ಎಂಬ ಸಚಿವ ಸುಧಾಕರ್ ಹೇಳಿಕೆಗೆ ಟೀಕೆ ಟಿಪ್ಪಣಿಗಳು ಬಂದಿವೆ. ಮಾಜಿ ಸಿಎಂ ಕುಮಾರಸ್ವಾಮಿಯಂತೂ ಮಾರ್ಮಿಕವಾಗಿ ಉತ್ತರ ಕೊಟ್ಟಿದ್ದಾರೆ.

ಬೆಂಗಳೂರು, ಮಾ.24: ಇಲ್ಲಿ ಯಾರೂ ಸತ್ಯ ಹರಿಶ್ಚಂದ್ರರಿಲ್ಲ. ಎಲ್ಲರ ನೈತಿಕತೆಯ ಬಗ್ಗೆಯೂ ತನಿಖೆಯಾಗಲಿ ಎಂಬ ಸಚಿವ ಸುಧಾಕರ್ ಹೇಳಿಕೆಗೆ ಟೀಕೆ ಟಿಪ್ಪಣಿಗಳು ಬಂದಿವೆ. ಮಾಜಿ ಸಿಎಂ ಕುಮಾರಸ್ವಾಮಿಯಂತೂ ಮಾರ್ಮಿಕವಾಗಿ ಉತ್ತರ ಕೊಟ್ಟಿದ್ದಾರೆ.

ಇಲ್ಲಿ ಯಾರೂ ಸತ್ಯಹರಿಶ್ಚಂದ್ರರಿಲ್ಲ ಹೌದು.. ನನ್ನ ಹೆಸರನ್ನು ಯಾಕೆ ಎಳೆದು ತಂದ್ರು. ಜೀವನದಲ್ಲಿ ಒಂದು ಬಾರಿ ನಾನು ತಪ್ಪು ಮಾಡಿದ್ದೇನೆ. ಅದನ್ನು ಧೈರ್ಯವಾಗಿ ಹೇಳಿದ್ದೇನೆ. ಭೂಮಿ ಮೇಲಿರುವ ಪ್ರತಿಯೊಂದು ಜೀವಿಗಳಿಗೂ ಸಹಜವಾದ ಪ್ರಕ್ರಿಯೆ ಇರುತ್ತದೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಇದರಲ್ಲಿ ಯಾರು ಸತ್ಯಹರಿಶ್ಚಂದ್ರರು ಎನ್ನೋದನ್ನು ಕೇಳಿದರೆ, ಎಲ್ಲರ ಮನೆ ದೋಸೇನೂ ತೂತೇ ಎಂದು ಹೇಳಿದ ಎಚ್ಡಿಕೆ, ಜನರ ಮೇಲೆ ಒಂದು ದೃಷ್ಟಿ ಇರಲಿ. ಸದನದ ಕಲಾಪದಲ್ಲಿ ಭಾಗವಹಿಸದೆ ಕಲಾಪವನ್ನು ವ್ಯರ್ಥ ಮಾಡಲಾಗುತ್ತಿದೆ. ರಾಜ್ಯದಲ್ಲಿರುವ ಸಮಸ್ಯೆಗಳ ಬಗ್ಗೆ ಚರ್ಚೆಯಾಗುತ್ತಿಲ್ಲ. ಅದು ಬಿಟ್ಟು ಬೇರೆಲ್ಲಾ ಚರ್ಚೆ ಮಾಡುತ್ತಿದ್ದಾರೆ. ವಿರೋಧ ಪಕ್ಷದ ನಾಯಕರ ಭಾಷಣದಲ್ಲಿ ನೀವೆಲ್ಲ ಚುನಾವಣೆ ನಿಲ್ಲುತ್ತೀರಿ, ನಾನೆಲ್ಲಿ ನಿಲ್ಲುತ್ತೇನೆ, 90 ಜೊತೆ ಬಟ್ಟೆ ತೆಗೆದುಕೊಂಡಿದ್ದು ಎಂದಿತ್ತೇ ಹೊರತು ರಾಜ್ಯದ ಸಮಸ್ಯೆಗಳ ಗಮನಹರಿಸುವ ವಿಚಾರ ಇರಲಿಲ್ಲ ಎಂದು ಟೀಕಿಸಿದರು.