ಬ್ರೇಕಿಂಗ್ ನ್ಯೂಸ್
10-05-21 11:02 pm Satish, Bengaluru Correspondent ಕರ್ನಾಟಕ
ಬೆಂಗಳೂರು, ಮೇ 10: ಶುಭ ಸುದ್ದಿಯೆಂದರೆ ಕೊರೊನಾದಿಂದ ರಾಜ್ಯದಲ್ಲಿ ಗುಣಮುಖರಾಗುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಿದೆ. ಸೋಮವಾರ 32,188 ಸೋಂಕಿತರು ಕೊರೊನಾದಿಂದ ಗುಣಮುಖರಾಗಿದ್ದಾರೆ. ಇಲ್ಲಿಯವರೆಗೆ ಕೊರೊನಾದಿಂದ ಗುಣಮುಖರಾದವ ಸಂಖ್ಯೆ 13,83,285ಕ್ಕೆ ಹೆಚ್ಚಳವಾಗಿದೆ.
ಹೀಗಿದ್ದೂ ಕೊರೊನಾದಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಹೊಸ ಪ್ರಕರಣಗಳ ಸಂಖ್ಯೆಯನ್ನು ಮೀರಿಲ್ಲ. ಹೀಗಾಗಿ ಆಕ್ಟಿವ್ ಕೇಸ್‌ಗಳ ಸಂಖ್ಯೆ 5,71,006ಕ್ಕೆ ಏರಿಕೆಯಾಗಿದೆ. ಈಗಾಗಲೇ ಮಹಾರಾಷ್ಟ್ರ, ಕೇರಳದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಕೆಯಾಗಲು ಆರಂಭವಾಗಿವೆ. ಆದರೆ ಕರ್ನಾಟಕದಲ್ಲಿ ಮಾತ್ರ ಇನ್ನೂ ಸಕ್ರಿಯ ಪ್ರಕರಣಗಳು ಏರುತ್ತಲೇ ಇವೆ. ಪರಿಣಾಮ ಸಕ್ರಿಯ ಪ್ರಕರಣಗಳಲ್ಲಿ ಕರ್ನಾಟಕ ಈಗ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಮಹಾರಾಷ್ಟ್ರದಲ್ಲಿ 5,56,896 ಆಕ್ಟೀವ್ ಕೇಸ್‌ಗಳಿವೆ.
ಇನ್ನು ಲಸಿಕೆ ಅಭಿಯಾನವೂ ಸ್ವಲ್ಪ ಮಟ್ಟಿಗೆ ಚುರುಕು ಪಡೆದುಕೊಂಡಿದೆ. ಸೋಮವಾರ 80,823 ಡೋಸ್ ಲಸಿಕೆ ನೀಡಲಾಗಿದೆ. ಇವರಲ್ಲಿ ಎರಡನೇ ಡೋಸ್ ಲಸಿಕೆ ಪಡೆದವರೇ ಹೆಚ್ಚು (65,353). 18 ವರ್ಷ ಮೇಲ್ಪಟ್ಟ 44 ವರ್ಷ ಒಳಗಿನ 6,737 ಜನರು ಲಸಿಕೆ ಹಾಕಿಸಿಕೊಂಡಿದ್ದಾರೆ. ಇಲ್ಲಿಯವರೆಗೆ ಕರ್ನಾಟಕದಲ್ಲಿ ಒಟ್ಟು 1,06,08,,539 ಡೋಸ್ ಲಸಿಕೆ ನೀಡಲಾಗಿದೆ.
ಸೋಮವಾರ ಒಂದೇ ದಿನ ಬರೋಬ್ಬರಿ 596 ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ. ಇದು ರಾಜ್ಯದಲ್ಲಿ ದಿನವೊಂದರಲ್ಲಿ ಕೋವಿಡ್-19ನಿಂದ ಸಂಭವಿಸಿದ ಗರಿಷ್ಠ ಸಾವಿನ ಪ್ರಮಾಣವಾಗಿದೆ.
ಇದರೊಂದಿಗೆ ರಾಜ್ಯದಲ್ಲಿ ಇಲ್ಲಿಯವರೆಗೆ ಕೋವಿಡ್-19ನಿಂದ ಅಸುನೀಗಿದವರ ಸಂಖ್ಯೆ 19,372ಕ್ಕೆ ತಲುಪಿದ್ದು, 20 ಸಾವಿರದತ್ತ ಮುನ್ನುಗ್ಗುತ್ತಿದೆ. ಬೆಂಗಳೂರು ನಗರವೊಂದರಲ್ಲೇ ಸೋಮವಾರ 374 ಸೋಂಕಿತರು ಸಾವನ್ನಪ್ಪಿದ್ದಾರೆ. ಬಳ್ಳಾರಿಯಲ್ಲಿ 26, ಹಾಸನದಲ್ಲಿ 22, ಬಾಗಲಕೋಟೆಯಲ್ಲಿ 15, ತುಮಕೂರಿನಲ್ಲಿ 15, ಹಾವೇರಿಯಲ್ಲಿ 12, ಮಂಡ್ಯದಲ್ಲಿ 12, ಶಿವಮೊಗ್ಗದಲ್ಲಿ 11, ಉತ್ತರ ಕನ್ನಡದಲ್ಲಿ 11 ಜನರು ಒಂದೇ ದಿನ ಕೊರೊನಾದಿಂದ ಅಸುನೀಗಿದ್ದಾರೆ.
ಉಳಿದೆಲ್ಲಾ ಜಿಲ್ಲೆಗಳಲ್ಲಿ 10ಕ್ಕಿಂತ ಕಡಿಮೆ ಸೋಂಕಿತರು ಸಾವನ್ನಪ್ಪಿದ್ದಾರೆ. ಆದರೆ ಕೊರೊನಾದಿಂದ ಸಾವೇ ಸಂಭವಿಸದ ಜಿಲ್ಲೆ ಕೊಪ್ಪಳ ಮಾತ್ರ. ಜಿಲ್ಲೆಗಳಲ್ಲಿ ಸೋಂಕು ವೇಗವಾಗಿ ಪಸರಿಸುತ್ತಿರುವುದು ಮತ್ತು ಇದರಿಂದ ಸಾವು ಸಂಭವಿಸುತ್ತಿರುವುದನ್ನು ಇದು ಹೇಳುತ್ತಿದೆ.
ಸೋಮವಾರ ರಾಜ್ಯದಲ್ಲಿ ಹೊಸ ಸೋಂಕಿನ ಪ್ರಕರಣಗಳ ಸಂಖ್ಯೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. 39,305 ಹೊಸ ಪ್ರಕರಣಗಳು ಕಳೆದ 24 ಗಂಟೆಯಲ್ಲಿ ವರದಿಯಾಗಿವೆ. ಆದರೆ ಇದೇನು ಶುಭ ಸುದ್ದಿಯಂತೂ ಅಲ್ಲ. ಕಾರಣ ಪರೀಕ್ಷೆಗಳ ಸಂಖ್ಯೆಯನ್ನೂ ಕಡಿಮೆ ಮಾಡಲಾಗಿದೆ.
ಕಳೆದ 24 ಗಂಟೆಯಲ್ಲಿ ಕರ್ನಾಟಕದಲ್ಲಿ 1,24,110 ಸ್ಯಾಂಪಲ್‌ಗಳನ್ನಷ್ಟೆ ಪರೀಕ್ಷೆಗೊಳಪಡಿಸಲಾಗಿದೆ. ಪರಿಣಾಮ ಕಡಿಮೆ ಸಂಖ್ಯೆಯ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಸ್ಯಾಂಪಲ್‌ಗಳಿಗೆ ಹೋಲಿಸಿದರೆ ಪಾಸಿಟಿವಿ ದರ ಇನ್ನೂ ಶೇ. 30ಕ್ಕಿಂತ (31.66%) ಹೆಚ್ಚೇ ಇದೆ. ಹೀಗಾಗಿ ಸೋಂಕು ಕಡಿಮೆಯಾಗಿದೆ ಎನ್ನುವಂತಿಲ್ಲ. ಆದರೆ ಇನ್ನೂ ಆತಂಕದ ಸಂಗತಿಯೆಂದರೆ ಪಾಸಿಟಿವ್ ಪ್ರಕರಣಗಳಿಗೆ ಹೋಲಿಸಿದರೆ ಸಾವಿನ ಪ್ರಮಾಣ ಶೇ. 1.51ರಷ್ಟಿದೆ. ಇದು ಬಹುಶಃ ಈವರೆಗಿನ ಗರಿಷ್ಠ ಪ್ರಮಾಣವಾಗಿದೆ.
ಬೆಂಗಳೂರಿನಲ್ಲಿ 16,747 ಹೊಸ ಪ್ರಕರಣಗಳು ವರದಿಯಾಗಿವೆ. ತುಮಕೂರಿನಲ್ಲಿ 2,168, ಹಾಸನದಲ್ಲಿ 1800, ಮೈಸೂರಿನಲ್ಲಿ 1537, ದಕ್ಷಿಣ ಕನ್ನಡದಲ್ಲಿ 1175, ಮಂಡ್ಯದಲ್ಲಿ 1133, ಧಾರವಾಡದಲ್ಲಿ 1006 ಹೊಸ ಕೇಸ್‌ಗಳು ದೃಢಪಟ್ಟಿವೆ. ಉಳಿದ ಜಿಲ್ಲೆಗಳಲ್ಲಿ ಸಾವಿರಕ್ಕಿಂತ ಕಡಿಮೆ ಪ್ರಕರಣಗಳು ಪತ್ತೆಯಾಗಿವೆ. ಪರೀಕ್ಷೆಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡಿದ್ದರೂ, 500ಕ್ಕಿಂತ ಕಡಿಮೆ ಪ್ರಕರಣಗಳು ದೃಢಪಟ್ಟ ಜಿಲ್ಲೆಗಳು 8 ಮಾತ್ರ.
Karnataka reports 39,305 new positive cases, 32,188 recoveries and 596 deaths in the last 24 hours. Total active cases at 5,71,006 and total positive cases at 19,73,683.
30-10-24 07:54 pm
Bangalore Correspondent
ರಾಕಿ ಭಾಯ್ ಸಿನಿಮಾ 'ಟಾಕ್ಸಿಕ್'ಗಾಗಿ ನೂರಾರು ಮರಗಳ ಮ...
30-10-24 02:02 pm
Chikkamagaluru accident, Hassan: ಚಿಕ್ಕಮಗಳೂರು...
30-10-24 12:18 pm
Actor Darshan Bail, Released, Murder: ಕೊನೆಗೂ...
30-10-24 11:55 am
ರೈತರ ಜಮೀನಿಗೆ ವಕ್ಫ್ ನೋಟಿಸ್ ; ವಿಜಯಪುರದಲ್ಲಿ ತೀವ್...
29-10-24 11:02 pm
29-10-24 08:23 pm
HK News Desk
ಕಾಞಂಗಾಡ್ ; ತೈಯ್ಯಂ ಉತ್ಸವಕ್ಕೂ ಮುನ್ನ ಪಟಾಕಿ ದುರಂತ...
29-10-24 12:01 pm
ಕೇರಳದ ಯೂಟ್ಯೂಬರ್ ದಂಪತಿ ಸಾವಿಗೆ ಶರಣು ; ಕೊನೆಯ ವಿ...
28-10-24 08:38 pm
ಇಸ್ರೇಲಿಗೆ ನಮ್ಮ ಸಾಮರ್ಥ್ಯ ತೋರಿಸುತ್ತೇವೆ ಎಂದು ಪೋಸ...
28-10-24 05:56 pm
Cyber fraud, Digital arrest, Modi: "ಡಿಜಿಟಲ್ ಅ...
28-10-24 11:47 am
30-10-24 06:32 pm
Mangalore Correspondent
Mangalore Fire, Pilikula: ಪಿಲಿಕುಳ ನಿಸರ್ಗಧಾಮದಲ...
30-10-24 04:28 pm
Mangalore Rajyotsava Award 2024: ಜಿಲ್ಲಾ ರಾಜ್ಯ...
28-10-24 10:51 pm
Leopard, pilar, Deralakatte; ದೇರಳಕಟ್ಟೆ ಪ್ರದೇಶ...
28-10-24 03:53 pm
MLA Harish Poonja, B K Harishprasad: ಪುಡಿ ರಾಜ...
28-10-24 01:00 pm
30-10-24 10:43 pm
HK News Desk
IIFL Securities, share market, Mangalore cybe...
29-10-24 01:01 pm
Mangalore Murder, Crime, Kateel: ಕಟೀಲು ಬಳಿ ಮನ...
29-10-24 12:38 pm
Mangalore Crime, Drugs: ಪಣಂಬೂರಿನಲ್ಲಿ ಡ್ರಗ್ಸ್...
28-10-24 11:12 pm
Bangalore Crime, Blackmail: ಪತ್ನಿ ಮತ್ತು ಆಕೆಯ...
28-10-24 02:47 pm