ಬ್ರೇಕಿಂಗ್ ನ್ಯೂಸ್
29-05-21 12:30 pm Bangalore Correspondent ಕರ್ನಾಟಕ
ಬೆಂಗಳೂರು, ಮೇ 29: ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿರುವ ಬಾಂಗ್ಲಾದೇಶಿ ಯುವತಿಯನ್ನು ನ್ಯಾಯಧೀಶರ ಮುಂದೆ ಹಾಜರು ಪಡಿಸಿ ಹೇಳಿಕೆ ದಾಖಲಿಸಲು ರಾಮಮೂರ್ತಿನಗರ ಪೊಲೀಸರು ತಯಾರಿ ನಡೆಸಿದ್ದಾರೆ.
ಕೇರಳದಲ್ಲಿದ್ದ ಸಂತ್ರಸ್ತ ಯುವತಿಯನ್ನು ಶುಕ್ರವಾರ ಸಂಜೆ ಕರೆತರಲಾಗಿದೆ. ಡಿಸಿಪಿ ಶರಣಪ್ಪ ನೇತೃತ್ವದಲ್ಲಿ ಸಂತ್ರಸ್ತ ಯುವತಿಯನ್ನು ವಿಚಾರಣೆ ನಡೆಸಿ ಹೇಳಿಕೆ ಪಡೆದುಕೊಂಡಿದ್ದಾರೆ. ಇದೀಗ ಅಜ್ಞಾತ ಸ್ಥಳದಿಂದ ವಿಡಿಯೋ ಕಾನ್ಪರೆನ್ಸ್ ಮೂಲಕ ವಸಂತನಗರದಲ್ಲಿರುವ ವಿಶೇಷ ಕೋರ್ಟ್ ಮುಂದೆ ಹಾಜರು ಪಡಿಸಲು ಪೊಲೀಸರು ಮುಂದಾಗಿದ್ದಾರೆ.
ವೈದ್ಯಕೀಯ ಪರೀಕ್ಷೆ : ಕೇರಳದಲ್ಲಿದ್ದ ಸಂತ್ರಸ್ತ ಯುವತಿಯನ್ನು ಬೆಂಗಳೂರಿನ ಪೊಲೀಸರು ಪತ್ತೆ ಮಾಡಿ ಬೆಂಗಳೂರಿಗೆ ಕರೆತಂದಿದ್ದಾರೆ. ಆ ಬಳಿಕ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಸಂತ್ರಸ್ತ ಯುವತಿಗೆ ಐವರು ಯುವಕರು ಹಾಗೂ ಒಬ್ಬ ಮಹಿಳೆ ವಿಕೃತ ರೀತಿಯಲ್ಲಿ ಕಿರುಕುಳ ನೀಡಿದ್ದರು. ಈ ಕುರಿತ ವಿಡಿಯೋ ವೈರಲ್ ಆದ ಕೂಡಲೇ ರಾಷ್ಟ್ರ ಮಟ್ಟದಲ್ಲಿ ಪ್ರಕರಣ ಸದ್ದು ಮಾಡಿತ್ತು.
ಕೂಡಲೇ ಎಚ್ಚೆತ್ತ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದರು. ತಪ್ಪಿಸಿಕೊಳ್ಳಲು ಯತ್ನಿಸಿದ ಇಬ್ಬರ ಮೇಲೆ ಗುಂಡು ಹಾರಿಸಿ ರಾಮಮೂರ್ತಿನಗರ ಪೊಲೀಸರು ಬಂಧಿಸಿದ್ದರು. ಇದೀಗ ಸಂತ್ರಸ್ತ ಯುವತಿ ವೈದ್ಯಕೀಯ ಪರೀಕ್ಷೆ ನಡೆಸಿ ನ್ಯಾಯಾಧೀಶರ ಸಮ್ಮುಖದಲ್ಲಿ ಹೇಳಿಕೆ ದಾಖಲಿಸಲು ಪೊಲೀಸರು ಮುಂದಾಗಿದ್ದಾರೆ.
ಒಬ್ಬ ಆರೋಪಿಗೆ ಕೋವಿಡ್ ಪಾಸಿಟಿವ್ : ಬಾಂಗ್ಲಾ ಯುವತಿ ಅತ್ಯಾಚಾರ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಐವರು ಆರೋಪಿಗಳಿಗೆ ಕೊರೊನಾ ಸೋಂಕು ದೃಢಪಡಿಸಲು ಪರೀಕ್ಷೆಗೆ ಒಳಪಡಿಸಲಾಗಿದೆ. ಒರ್ವ ಆರೋಪಿಗೆ ಕೊರೊನಾ ಸೋಂಕು ಪಾಸಿಟೀವ್ ಇರುವುದು ಬೆಳಕಿಗೆ ಬಂದಿದ್ದು, ಆತನನ್ನು ಪ್ರತ್ಯೇಕ ಸೆಲ್ ನಲ್ಲಿ ಇಡಲಾಗಿದೆ. ಉಳಿದಂತೆ ಈ ಪ್ರಕರಣದಲ್ಲಿ ಶಾಮೀಲಾಗಿರುವ ಇತರೆ ಇಬ್ಬರು ಮಹಿಳೆಯರನ್ನು ಕೂಡ ಪೊಲೀಸರು ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.
Read: ಬಾಂಗ್ಲಾ ಮತಾಂಧರಿಂದ ಬೆಂಗಳೂರಿನಲ್ಲಿ ಮೃಗೀಯ ಕೃತ್ಯ ; ಚಿತ್ರಹಿಂಸೆ ವಿಡಿಯೋ ಹಿಂದಿತ್ತು ಕರಾಳ ವೇಶ್ಯಾವಾಟಿಕೆ ದಂಧೆ !
The Bengaluru police on Thursday arrested seven persons, including two women, in connection with a case of alleged rape and torture of a woman in Ramamurthy Nagar in Bengaluru.
20-03-25 10:48 pm
Bangalore Correspondent
Honey Trapped, Minister, Probe: ಅಧಿವೇಶನದಲ್ಲಿ...
20-03-25 09:52 pm
Bangalore Marriage case, Srikanth Bindushree:...
20-03-25 01:07 pm
Kalaburagi police suspended, playing cards: ಇ...
20-03-25 12:18 pm
Raichur Accident, Bike Lorry: ಬೈಕ್ಗೆ ಡಿಕ್ಕಿ...
19-03-25 04:42 pm
20-03-25 10:40 pm
HK News Desk
ಹೆದ್ದಾರಿ ಬಳಕೆದಾರರಿಗೆ ಸಿಹಿಸುದ್ದಿ ; ಟೋಲ್ ಶುಲ್ಕ...
20-03-25 07:19 pm
ಕೊಂಕಣ ರೈಲ್ವೇ ಭಾರತೀಯ ರೈಲ್ವೇಯಲ್ಲಿ ವಿಲೀನಕ್ಕೆ ಮಹಾ...
20-03-25 06:07 pm
Kollam Suicide: ಸಾಲಗಾರರ ಕಾಟ ; ಎರಡು ವರ್ಷದ ಮಗುವ...
19-03-25 07:39 pm
ಕೊನೆಗೂ ಭುವಿಗಿಳಿದ ಸುನಿತಾ ವಿಲಿಯಮ್ಸ್ ; 9 ತಿಂಗಳ ತ...
19-03-25 02:10 pm
20-03-25 02:05 pm
HK News Desk
ಮೀನು ಕದ್ದ ಆರೋಪದಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿ ಥ...
19-03-25 10:13 pm
ಪವಾಡಕ್ಕೆ ಸಾಕ್ಷಿಯಾಗಿದೆ ತಲಪಾಡಿ ದುರ್ಗಾಪರಮೇಶ್ವರೀ...
18-03-25 10:09 pm
Electricity, Malekudiya Tribal, Belthangady:...
18-03-25 08:53 pm
Mangalore accident, Kinnigoli, Bike, Vidoe: ಕ...
18-03-25 03:15 pm
20-03-25 05:29 pm
HK News Staff
Mangalore crime, Kukkeshree PG, Kadri: ಪಿಜಿ ಚ...
20-03-25 04:13 pm
Bidadi pro Pak graffiti; ಬಿಡದಿ ಫ್ಯಾಕ್ಟರಿಯಲ್ಲಿ...
20-03-25 03:22 pm
Mangalore Crime, Pachanady, Compound wall: ರಸ...
19-03-25 08:27 pm
Mangalore drugs, NCB: ಅತಿ ದೊಡ್ಡ ಡ್ರಗ್ಸ್ ಬೇಟೆ...
18-03-25 06:31 pm