ಬ್ರೇಕಿಂಗ್ ನ್ಯೂಸ್
29-08-20 05:31 pm Dhruthi Anchan - Correspondent ಕರ್ನಾಟಕ
ಬೆಂಗಳೂರು, ಆಗಸ್ಟ್ 29: ಚಂದನವನದ ಕೆಲವು ನಟ-ನಟಿಯರಿಗೆ ಡ್ರಗ್ಸ್ ನ ವ್ಯಸನ ಇದೆ ಎಂದು ಖ್ಯಾತ ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ. ಮಾಧ್ಯಮವೊಂದರ ಜೊತೆ ಮಾತನಾಡಿರುವ ಇಂದ್ರಜಿತ್, ಚಂದನವನದಲ್ಲಿ ಡ್ರಗ್ ಮಾಫಿಯಾ ಇರುವುದು ನಿಜ ನಾನೇ ಕಣ್ಣಾರೆ ನೋಡಿದ್ದೇನೆ' ಎಂದಿದ್ದಾರೆ.
ಹಲವು ಯುವ ನಟ-ನಟಿಯರು ಡ್ರಗ್ಸ್‌ನ ಹಿಂದೆ ಬಿದ್ದಿದ್ದು, ಸ್ಯಾಂಡಲ್‌ವುಡ್‌ನಲ್ಲಿ ರೇವ್ ಪಾರ್ಟಿ, ನೈಟ್ ಪಾರ್ಟಿಗಳು ನಡೆಯುವ ಸಂದರ್ಭಗಳಲ್ಲಿ ಡ್ರಗ್ಸ್ ಹರಿದಾಡುತ್ತದೆ ಹಾಗೂ ಹಲವು ಯುವ ನಟರು ಈ ಡ್ರಗ್ಸ್‌ನ ಚಟಕ್ಕೆ ಬಿದ್ದಿದ್ದಾರೆ ಎಂದು ನೇರವಾಗಿ ಹೇಳಿದ್ದಾರೆ.
ದೊಡ್ಡ ಸ್ಟಾರ್ ನಟರುಗಳು ಇಂಥಹುದರಲ್ಲಿ ಇಲ್ಲ. ಆದರೆ ಒಂದೆರಡು ಸಿನಿಮಾ ಮಾಡಿದ ಯುವ ನಟರು ಕೆಲವರು ಡ್ರಗ್ಸ್‌ಗೆ ದಾಸರಾಗಿದ್ದಾರೆ. ದುಡ್ಡಿನ ವ್ಯಾಮೋಹ, ಹಣದ ಆಸೆಗೆ ಬಿದ್ದು ಕೆಲವರು ಮಾಫಿಯಾದ ಒಳಕ್ಕೆ ಸೇರಿದ್ದಾರೆ. ಕೊಕೇನ್ ರೀತಿಯ ಅಪಾಯಕಾರಿ ಮಾದಕ ವಸ್ತು ಸಹ ಚಂದನವನ ನಟ-ನಟಿಯರ ಕೈಗೆ ಎಟುಕುತ್ತಿದೆ ಎಂದು ಶಾಕಿಂಗ್ ಅಂಶ ಬಹಿರಂಗಪಡಿಸಿದ್ದಾರೆ ಇಂದ್ರಜಿತ್.

ಇಷ್ಟೇ ಅಲ್ಲದೆ ಯಾರೆಲ್ಲಾ ಈ ಮಾಫಿಯಾದಲ್ಲಿದ್ದಾರೆ, ಯಾರೆಲ್ಲಾ ದಾಸರಾಗಿದ್ದಾರೆ ಎಂಬುದನ್ನು ನಾನು ಬೇಕಾದರೆ ಬಹಿರಂಗಪಡಿಸುತ್ತೇನೆ. ಆದರೆ ಪೊಲೀಸರು ನನಗೆ ಸೂಕ್ತ ರಕ್ಷಣೆ ಕೊಡುಬೇಕು ಎಂದಿದ್ದಾರೆ ಇಂದ್ರಜಿತ್ ಲಂಕೇಶ್.
ಇತ್ತೀಚಿಗೆ ನಿಧನರಾದ 35 ವರ್ಷ ವಯಸ್ಸಿನ ನಟನ ಸಾವಿನ ಬಗ್ಗೆ ಕೂಡ ಅನುಮಾನ ವ್ಯಕ್ತಪಡಿಸಿದ ಇಂದ್ರಜಿತ್, ಚಿಕ್ಕ ವಯಸ್ಸಿನಲ್ಲಿಯೇ ಸಾವನ್ನಪ್ಪುತ್ತಾರೆ ಎಂದರೆ ಏನು ಕಾರಣ?, ಆ ನಟನ ಸಾವಿನ ಬಳಿಕ ಮರಣೋತ್ತರ ಪರೀಕ್ಷೆ ಯಾಕೆ ಮಾಡಿಸಿಲ್ಲ? ಪರೀಕ್ಷೆ ಮಾಡಿಸಿದ್ದರೆ ಎಲ್ಲಾ ಬಯಲಾಗುತ್ತಿತ್ತು. ಮರಣೋತ್ತರ ಪರೀಕ್ಷೆ ನಡೆಸದಂತೆ ಪೊಲೀಸರಿಗೆ ರಾಜಕೀಯ ಒತ್ತಡವಿತ್ತು. ಯಾವ ರಾಜಕೀಯ ವ್ಯಕ್ತಿ ಒತ್ತಡ ಹಾಕಿದ್ದಾರೆ ಎನ್ನುವುದು ಗೊತ್ತಿದೆ" ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.
13-10-26 04:53 pm
HK News Staffer
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
12-10-26 05:22 pm
HK News Staffer
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
13-10-26 08:41 pm
HK News Desk
Agnes College Protest, MLA Bharath Shetty: ವಿ...
13-10-26 07:50 pm
Sullia News: ಸುಳ್ಯ ; ತಡರಾತ್ರಿ ಮೀನು ಹಿಡಿಯಲು ಹ...
13-10-26 02:54 pm
ಮೈಸೂರು ಕಂಬಳಕ್ಕೆ ಕೋಣ ತರಬೇಡಿ.. ಕುಡಿಯಲೇ ನೀರಿಲ್ಲ,...
12-10-26 10:01 pm
St Agnes College: ದಸರಾ ಸಂಭ್ರಮಕ್ಕೆ ಪರೀಕ್ಷೆ ಅಡ್...
12-10-26 11:30 am
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm