ಬ್ರೇಕಿಂಗ್ ನ್ಯೂಸ್
08-07-21 11:54 am Giridhar Shetty, Correspondent ಕರ್ನಾಟಕ
ಬೆಂಗಳೂರು, ಜುಲೈ 8: ಕೇಂದ್ರದಲ್ಲಿ ಮಹತ್ವದ ರಸಗೊಬ್ಬರ ಮತ್ತು ರಾಸಾಯನಿಕ ಖಾತೆ ಹೊಂದಿದ್ದ ಡಿ.ವಿ. ಸದಾನಂದ ಗೌಡ ಸಚಿವ ಸ್ಥಾನ ಕಳೆದುಕೊಳ್ಳಲು ಸ್ವಯಂಕೃತ ಅಪರಾಧಗಳೇ ಕಾರಣ ಎನ್ನುವ ಮಾತು ಕೇಳಿಬರುತ್ತಿದೆ. ವಾರದ ಹಿಂದಷ್ಟೇ ತಮ್ಮ ವಿರುದ್ಧ ಮಾನಿಹಾನಿಕರ ಸುದ್ದಿ ಪ್ರಕಟಿಸದಂತೆ ಮಾಧ್ಯಮಗಳ ವಿರುದ್ಧ ಅವರು ತಂದಿದ್ದ ತಡೆಯಾಜ್ಞೆಯೇ ದಿಢೀರ್ ಸಚಿವ ಸ್ಥಾನ ತಪ್ಪಲು ಕಾರಣ ಎನ್ನುವ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದೆ.
2011 ರಲ್ಲಿ ಆಕಸ್ಮಿಕ ರಾಜಕೀಯ ಸನ್ನಿವೇಶ ಉಂಟಾಗಿ ಕರ್ನಾಟಕ ಮುಖ್ಯಮಂತ್ರಿ ಹುದ್ದೆಗೇರಿದ್ದ ಸದಾನಂದ ಗೌಡ, ತಮ್ಮನ್ನು ಮುಖ್ಯಮಂತ್ರಿ ಮಾಡಿದ್ದ ಬಿ.ಎಸ್. ಯಡಿಯೂರಪ್ಪ ವಿರುದ್ಧವೇ ನಡೆದುಕೊಂಡಿದ್ದರಿಂದ ಒಂದೇ ವರ್ಷದಲ್ಲಿ ಅಧಿಕಾರ ತ್ಯಜಿಸುವಂತಾಗಿತ್ತು.
ಬಳಿಕ 2014ರಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ ಅವರಿಗೆ, ರಾಜ್ಯದಲ್ಲಿ ಒಕ್ಕಲಿಗ- ಗೌಡರಿಗೆ ಪ್ರಾತಿನಿಧ್ಯ ನೀಡುವ ಕಾರಣಕ್ಕಾಗಿ ಆಯಕಟ್ಟಿನ ಸಚಿವ ಸ್ಥಾನಗಳೇ ಸಿಕ್ಕಿದ್ದವು. ಆದರೆ, ಅಲ್ಲಿಯೂ ನಿರೀಕ್ಷಿತ ದಕ್ಷತೆ, ಚುರುಕುತನ ತೋರದೇ ಕಳಪೆ ನಿರ್ವಹಣೆಯಿಂದಾಗಿ ಅತ್ಯಂತ ಪ್ರಭಾವಿ ಎನ್ನಲಾದ ರೈಲ್ವೆ ಖಾತೆಯು ಕೇವಲ ಆರು ತಿಂಗಳಲ್ಲೇ ಕೈತಪ್ಪಿ ಹೋಗಿತ್ತು. ಅದಾದ ಬಳಿಕ ಕಾನೂನು ಸಚಿವರಾಗಿ ಅವರನ್ನು ನೇಮಕ ಮಾಡಲಾಗಿತ್ತು. ಆದರೆ ಅಲ್ಲಿಯೂ ಸೂಕ್ತ ನಿರ್ವಹಣೆ ತೋರದ ಕಾರಣ ಕೈಬಿಡಲಾಗಿತ್ತು. ಆನಂತರ ಅವರನ್ನು ಕಾರ್ಯಕ್ರಮಗಳ ಅನುಷ್ಠಾನ ಮತ್ತು ಅಂಕಿಅಂಶ ಖಾತೆ ಸಚಿವರನ್ನಾಗಿ ಮಾಡಲಾಗಿತ್ತು.
ಈ ನಡುವೆ, ಕರ್ನಾಟಕದ ಎಚ್.ಎನ್. ಅನಂತಕುಮಾರ್ ಅಕಾಲಿಕ ನಿಧನದಿಂದ ತೆರವಾದ ರಸಗೊಬ್ಬರ ಮತ್ತು ರಾಸಾಯನಿಕ ಖಾತೆಯನ್ನು ಸದಾನಂದ ಗೌಡರಿಗೆ ವಹಿಸಲಾಗಿತ್ತು. ಎನ್‌ಡಿಎ ಎರಡನೇ ಅವಧಿಯಲ್ಲಿ ಅದೇ ಖಾತೆಯೇ ಮುಂದುವರಿಯಿತು. ಆದರೆ, ಖಾತೆಯಲ್ಲಿನ ಕಾರ್ಯ ನಿರ್ವಹಣೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತೃಪ್ತಿ ಇರಲಿಲ್ಲ ಎನ್ನಲಾಗಿತ್ತು. ರಸಗೊಬ್ಬರ ಖಾತೆಯಲ್ಲಿ ರಾಜ್ಯ ಖಾತೆ ಹೊಂದಿದ್ದ ಮನ್ಸುಖ್ ಮಾಂಡವಿಯಾ, ಸದಾನಂದ ಗೌಡರಿಗಿಂತ ಹೆಚ್ಚು ದಕ್ಷತೆ ತೋರಿದ್ದರು. ಕೇಂದ್ರ ಮಟ್ಟದಲ್ಲಿ ಮನ್ಸುಖ್ ಮಾತುಗಳೇ ಹೆಚ್ಚು ನಡೆಯುತ್ತಿದ್ದವು.
ಇವೆಲ್ಲ ಇದ್ದರೂ, ಕರ್ನಾಟಕದಲ್ಲಿ ಪ್ರಭಾವಿ ಒಕ್ಕಲಿಗರಿಗೆ ಪ್ರಾತಿನಿಧ್ಯ ನೀಡುವ ನೆಪದಲ್ಲಿ ಸದಾನಂದ ಗೌಡರನ್ನು (ಸುಳ್ಯದ ಅರೆಭಾಷೆ ಗೌಡರು) ಸಚಿವ ಸ್ಥಾನದಲ್ಲಿ ಉಳಿಸಿಕೊಳ್ಳಲಾಗಿತ್ತು. ಆದರೆ, ಖಾತೆ ನಿರ್ವಹಣೆಯ ಜೊತೆಗೆ ಅವರ ಪಾಲಿಗೆ ದೊಡ್ಡ ಮೈನಸ್ ಆಗಿದ್ದು ಇತ್ತೀಚೆಗೆ ಇವರು ಕೋರ್ಟ್ ಮೆಟ್ಟಿಲೇರಿದ ಪ್ರಕರಣ. ಇತ್ತೀಚೆಗೆ ಸದ್ದು ಮಾಡತೊಡಗಿದ್ದ ವಿಡಿಯೊ ಪ್ರಕರಣ ಅವರನ್ನು ಸಂಪುಟದಿಂದ ಕೈಬಿಡಬೇಕಾಗಿ ಬಂದಿತ್ತು. ಈ ವಿಡಿಯೊ ಬಹಿರಂಗಗೊಂಡರೆ ಮುಜುಗರಕ್ಕೆ ಒಳಗಾಗಬೇಕಾಗುತ್ತದೆ ಎಂಬ ಕಾರಣಕ್ಕೆ, ತಮ್ಮ ವಿರುದ್ಧ ಯಾವುದೇ ರೀತಿಯ ಮಾನಿಹಾನಿಕಾರಕ ಸುದ್ದಿ ಪ್ರಕಟಿಸಬಾರದು ಎಂದು ಸದಾನಂದಗೌಡರು ಕಳೆದ ವಾರವಷ್ಟೇ ತಡೆಯಾಜ್ಞೆ ತಂದಿದ್ದರು. ಈ ಪ್ರಕರಣವೇ ಸಚಿವ ಸ್ಥಾನ ದಿಢೀರ್ ಕೈತಪ್ಪಲು ಕಾರಣ ಎಂದು ಬಿಜೆಪಿ ನಾಯಕರ ಮಧ್ಯೆ ಚರ್ಚೆ ನಡೆಯುತ್ತಿದೆ.
ಒಕ್ಕಲಿಗರ ಸ್ಥಾನ ತುಂಬಿದ ಶೋಭಾ
ಇದೇ ವೇಳೆ, ಸದಾನಂದ ಗೌಡರ ಬದಲಿಗೆ ಮತ್ತೊಬ್ಬ ಒಕ್ಕಲಿಗರಿಗೆ ಕೇಂದ್ರದಲ್ಲಿ ಸ್ಥಾನ ನೀಡುವುದಕ್ಕಾಗಿ ಯಾರಿಗೆ ಸಚಿವ ಸ್ಥಾನ ಕೊಡಬಹುದು ಎನ್ನುವ ಲೆಕ್ಕಾಚಾರದಲ್ಲಿ ಶೋಭಾ ಕರಂದ್ಲಾಜೆ ಹೆಸರು ಮುಂಚೂಣಿಗೆ ಬಂದಿದೆ. ಈ ನಡುವೆ, ಒಕ್ಕಲಿಗ ಜನಾಂಗದ ಯುವ ಸಂಸದ ಮೈಸೂರಿನ ಪ್ರತಾಪಸಿಂಹ ಹೆಸರೂ ಕೇಳಿಬಂದಿತ್ತು. ಆದರೆ, ಹಿಂದೆ ಸಚಿವರಾಗಿದ್ದ ಅನುಭವ ಮತ್ತು ಎರಡನೇ ಬಾರಿ ಸಂಸದರಾಗಿದ್ದ ಶೋಭಾರನ್ನು ಸೀನಿಯಾರಿಟಿ ಮೇಲೆ ಫೈನಲ್ ಮಾಡಲಾಗಿತ್ತು. ಸದಾನಂದ ಗೌಡರ ಸ್ವಯಂಕೃತ ಅಪರಾಧಗಳ ಕಾರಣ ಆ ಸ್ಥಾನವನ್ನು ಅದೇ ಊರಿನ ಮಗಳು ಶೋಭಾ ತುಂಬಿದ್ದಾರೆ. ಕಳೆದ ಬಾರಿ ಸಚಿವರಾಗಲು ಲಾಬಿ ನಡೆಸಿದ್ದ ಶೋಭಾಗೆ ಸ್ಥಾನ ಸಿಕ್ಕಿರಲಿಲ್ಲ. ಈಗ ಮತ್ತೊಬ್ಬರ ಅಸಾಮರ್ಥ್ಯ ಈಕೆಯನ್ನು ಮೇಲೇರಿಸಿದೆ. ಸಾಮರ್ಥ್ಯ - ಅಸಾಮರ್ಥ್ಯಗಳ ಮೇಲಾಟದಲ್ಲಿ ಜಾತಿ ಲೆಕ್ಕಾಚಾರ, ಯಡಿಯೂರಪ್ಪ ಕೃಪೆ ಕೈಮೇಲಾಗಿದ್ದು ಶೋಭಾರನ್ನು ಕೇಂದ್ರ ಮಟ್ಟಕ್ಕೆ ಒಯ್ಯುವಂತಾಗಿದೆ.
Did CD issue land DV Sadananda in trouble for the decline in the political career of a veteran. The dropping of senior Minister D. V. Sadananda Gowda from the Union Ministry on Wednesday marks the constant decline in the political career of a veteran who was once the Chief Minister of Karnataka.
30-10-24 12:18 pm
HK News Desk
Actor Darshan Bail, Released, Murder: ಕೊನೆಗೂ...
30-10-24 11:55 am
ರೈತರ ಜಮೀನಿಗೆ ವಕ್ಫ್ ನೋಟಿಸ್ ; ವಿಜಯಪುರದಲ್ಲಿ ತೀವ್...
29-10-24 11:02 pm
ರೈತರ ಜಮೀನಿಗೆ ವಕ್ಫ್ ನೋಟಿಸ್ ; ಬೇಲಿಯೇ ಎದ್ದು ಹೊಲ...
29-10-24 10:09 pm
Pratap Simha, waqf board: ಮುಸ್ಲಿಮರಿಗೆ ವಕ್ಫ್ ಆ...
29-10-24 02:43 pm
29-10-24 08:23 pm
HK News Desk
ಕಾಞಂಗಾಡ್ ; ತೈಯ್ಯಂ ಉತ್ಸವಕ್ಕೂ ಮುನ್ನ ಪಟಾಕಿ ದುರಂತ...
29-10-24 12:01 pm
ಕೇರಳದ ಯೂಟ್ಯೂಬರ್ ದಂಪತಿ ಸಾವಿಗೆ ಶರಣು ; ಕೊನೆಯ ವಿ...
28-10-24 08:38 pm
ಇಸ್ರೇಲಿಗೆ ನಮ್ಮ ಸಾಮರ್ಥ್ಯ ತೋರಿಸುತ್ತೇವೆ ಎಂದು ಪೋಸ...
28-10-24 05:56 pm
Cyber fraud, Digital arrest, Modi: "ಡಿಜಿಟಲ್ ಅ...
28-10-24 11:47 am
28-10-24 10:51 pm
Giridhar Shetty, Headline Karnataka, Mangalore
Leopard, pilar, Deralakatte; ದೇರಳಕಟ್ಟೆ ಪ್ರದೇಶ...
28-10-24 03:53 pm
MLA Harish Poonja, B K Harishprasad: ಪುಡಿ ರಾಜ...
28-10-24 01:00 pm
Pejawar Seer, Caste Census: ಪ್ರಜಾಪ್ರಭುತ್ವದಲ್ಲ...
27-10-24 10:37 pm
Ashok Rai Puttur, Mangalore; ನಾನೊಬ್ಬ ಹಿಂದು, ದ...
27-10-24 02:41 pm
29-10-24 01:01 pm
Mangalore Correspondent
Mangalore Murder, Crime, Kateel: ಕಟೀಲು ಬಳಿ ಮನ...
29-10-24 12:38 pm
Mangalore Crime, Drugs: ಪಣಂಬೂರಿನಲ್ಲಿ ಡ್ರಗ್ಸ್...
28-10-24 11:12 pm
Bangalore Crime, Blackmail: ಪತ್ನಿ ಮತ್ತು ಆಕೆಯ...
28-10-24 02:47 pm
Mangalore News, Cyber Fraud: ಮಹಾರಾಷ್ಟ್ರದ ಎಸ್ಐ...
27-10-24 08:57 pm