ಬ್ರೇಕಿಂಗ್ ನ್ಯೂಸ್
09-07-21 03:31 pm Headline Karnataka News Network ಕರ್ನಾಟಕ
ಭಟ್ಕಳ, ಜುಲೈ 9: 2010ರ ಪುಣೆಯ ಜರ್ಮನ್ ಬೇಕರಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಪುಣೆಯ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಅಧಿಕಾರಿಗಳು ಭಟ್ಕಳಕ್ಕೆ ಆಗಮಿಸಿದ್ದು ಇಲ್ಲಿನ ವಿವಿಧ ಸರ್ಕಾರಿ ಇಲಾಖೆಗಳಿಗೆ ತೆರಳಿ ಭಟ್ಕಳ್ ಬ್ರದರ್ಸ್ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.
ಪುಣೆಯಿಂದ ಬಂದಿದ್ದ ಇಬ್ಬರು ಅಧಿಕಾರಿಗಳು ಹಾಗೂ ಮೂವರು ಸಿಬ್ಬಂದಿಯನ್ನು ಒಳಗೊಂಡ ಈ ತಂಡ ಮೊದಲು ಕಾರವಾರದಲ್ಲಿ ಎಸ್ಪಿಯನ್ನು ಭೇಟಿ ಮಾಡಿ ತನಿಖೆಗೆ ಅನುಮತಿ ಪಡೆದು ಭಟ್ಕಳ ಪಟ್ಟಣಕ್ಕೆ ತೆರಳಿತ್ತು. ಪಟ್ಟಣದಲ್ಲಿ ಕಂದಾಯ ಇಲಾಖೆ, ಪುರಸಭೆ ಸೇರಿದಂತೆ ವಿವಿಧ ಸರಕಾರಿ ಕಚೇರಿಗಳಿಗೆ ತೆರಳಿ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ.
ಜರ್ಮನ್ ಬೇಕರಿ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಯಾಗಿರುವ ರಿಯಾಜ್ ಭಟ್ಕಳ ಹಾಗೂ ಇಕ್ಬಾಲ್ ಭಟ್ಕಳನ ಜನ್ಮ ದಾಖಲೆಗೆ ಸಂಬಂಧಿಸಿ ದಾಖಲೆಗಳನ್ನು ಸಂಗ್ರಹಿಸಲು ತಂಡ ಇಲ್ಲಿಗೆ ಭೇಟಿ ನೀಡಿತ್ತು. ಅಲ್ಲದೆ, ಆರೋಪಿಗಳಿಬ್ಬರ ಕೆಲ ಸಂಬಂಧಿಕರ ಮನೆಗಳಿಗೂ ಭೇಟಿ ನೀಡಿ ಮಾಹಿತಿಗಳನ್ನು ಪಡೆದಿದ್ದಾರೆ.
ರಿಯಾಜ್ ಮತ್ತು ಇಕ್ಬಾಲ್ ಮುಂಬೈನಲ್ಲಿ ಹುಟ್ಟಿ ಬೆಳೆದರೂ ಅವರ ಕುಟುಂಬಸ್ಥರ ಮೂಲ ಭಟ್ಕಳ. ಸಂಬಂಧಿಕರು ಇಲ್ಲೇ ನೆಲೆಸಿದ್ದು, ಮುಂಬೈನಿಂದ ಬಂದು ಇದೇ ಕಾರಣಕ್ಕೆ ಭಟ್ಕಳದಲ್ಲಿ ನೆಲೆಸಿದ್ದರು. ಆದರೆ ಇವರು ಪಾಸ್‌ಪೋರ್ಟ್ ಅನ್ನು ಬೆಂಗಳೂರಿನಲ್ಲಿ ಪಡೆದಿದ್ದರು. ಒಂದು ರಾಜ್ಯದಲ್ಲಿ ಹುಟ್ಟಿ ಇನ್ನೊಂದು ರಾಜ್ಯದ ರಾಜಧಾನಿಯಲ್ಲಿ ಪಾಸ್‌ಪೋರ್ಟ್ ಪಡೆದಿದ್ದು ಹೇಗೆ ಎನ್ನುವ ನೆಲೆಯಲ್ಲಿ ತನಿಖೆ ನಡೆಸಲಾಗಿದೆ.
ಪುರಸಭೆ, ತಹಶೀಲ್ದಾರ್ ಕಚೇರಿ, ಕಂದಾಯ ಇಲಾಖೆ, ಆಹಾರ ನಿರೀಕ್ಷಕರ ಕಚೇರಿ, ಮಿನಿ ವಿಧಾನಸೌದದಲ್ಲಿರುವ ಚುನಾವಣಾ ವಿಭಾಗದ ಕಚೇರಿ, ಡಿವೈಎಸ್‌ಪಿ ಕಚೇರಿಗಳಿಗೆ ತೆರಳಿ, ಸಹೋದರರಿಬ್ಬರ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಸೇರಿದಂತೆ ಅವಶ್ಯಕ ದಾಖಲೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿದೆ.
1993ರ ವರೆಗೆ ಭಟ್ಕಳದಲ್ಲಿ ವಾಸಿಸುತ್ತಿದ್ದ ರಿಯಾಜ್ ಮತ್ತು ಇಕ್ಬಾಲ್ ಸೋದರರ ಕುಟುಂಬ, ಇಲ್ಲಿನ ಗಲಭೆ ಘಟನೆಗಳ ನಂತರ ಪುಣೆಗೆ ತೆರಳಿ ವಾಸ್ತವ್ಯ ಹೂಡಿತ್ತು. ಸಹೋದರರಿಬ್ಬರೂ ಪುಣೆಯಲ್ಲಿ ವಿದ್ಯಾವಂತ ಯುವಕರನ್ನು ಒಗ್ಗೂಡಿಸಿ ದೇಶ ವಿರೋಧಿ ಚಟುವಟಿಕೆಗೆ ಎತ್ತಿಕಟ್ಟುತ್ತಿದ್ದರು.
ಇನ್ನೊಬ್ಬ ಸಂಬಂಧಿ ಯಾಸೀನ್ ಭಟ್ಕಳನ ಜೊತೆಗೂಡಿ ಸ್ಥಾಪಿಸಿದ್ದ ಇಂಡಿಯನ್ ಮುಜಾಹಿದೀನ್ ಉಗ್ರ ಸಂಘಟನೆಯ ಮೂಲಕ ಸಹೋದರರಿಬ್ಬರು ಸೇರಿ ಜರ್ಮನ್ ಬೇಕರಿ (2010), ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ (2010) ಮುಂಭಾಗದ ಸ್ಫೋಟ, ಜಾಮಿಯಾ ಮಸೀದಿ (2010), ಶೀತಲ್‌ಘಾಟ್ (2010) ಮತ್ತು ಮುಂಬಯಿ (2011), ಜೈಪುರ ಸರಣಿ ಸ್ಫೋಟ (2008), ದೆಹಲಿ ಸರಣಿ ಸ್ಫೋಟ (2008), ಅಹ್ಮದಾಬಾದ್ ಮತ್ತು ಸೂರತ್ ಸರಣಿ ಸ್ಫೋಟ (2008)ಗಳನ್ನು ನಡೆಸಿದ್ದರು. ಭಟ್ಕಳ ಬ್ರದರ್ಸ್ ಪಾತ್ರದ ಬಗ್ಗೆ ರಾಷ್ಟ್ರೀಯ ತನಿಖಾ ದಳಕ್ಕೆ ಅನುಮಾನ ಬಂದು ದೇಶಾದ್ಯಂತ ಇವರ ವಿರುದ್ಧ ಲುಕೌಟ್ ನೋಟೀಸ್ ಜಾರಿಯಾಗಿತ್ತು. ಇದಾಗುತ್ತಿದ್ದಂತೆ ಇಬ್ಬರು ಕೂಡ ಪಾಕಿಸ್ತಾನಕ್ಕೆ ಪರಾರಿಯಾಗಿದ್ದಾರೆ ಎನ್ನಲಾಗುತ್ತಿದ್ದು ಪ್ರಸ್ತುತ ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.
A team of the Pune Anti-Terrorist Squad (ATS) on Wednesday visited Bhatkal in Karnataka to investigate the German Bakery blast case. Two of the main accused in the blast, Riyaz Bhatkal and Iqbal are natives of Bhatkal. According to the officials, relatives of Riyaz and Iqbal, who run a bakery in Bhatkal were questioned in connection with the case.
30-10-24 12:18 pm
HK News Desk
Actor Darshan Bail, Released, Murder: ಕೊನೆಗೂ...
30-10-24 11:55 am
ರೈತರ ಜಮೀನಿಗೆ ವಕ್ಫ್ ನೋಟಿಸ್ ; ವಿಜಯಪುರದಲ್ಲಿ ತೀವ್...
29-10-24 11:02 pm
ರೈತರ ಜಮೀನಿಗೆ ವಕ್ಫ್ ನೋಟಿಸ್ ; ಬೇಲಿಯೇ ಎದ್ದು ಹೊಲ...
29-10-24 10:09 pm
Pratap Simha, waqf board: ಮುಸ್ಲಿಮರಿಗೆ ವಕ್ಫ್ ಆ...
29-10-24 02:43 pm
29-10-24 08:23 pm
HK News Desk
ಕಾಞಂಗಾಡ್ ; ತೈಯ್ಯಂ ಉತ್ಸವಕ್ಕೂ ಮುನ್ನ ಪಟಾಕಿ ದುರಂತ...
29-10-24 12:01 pm
ಕೇರಳದ ಯೂಟ್ಯೂಬರ್ ದಂಪತಿ ಸಾವಿಗೆ ಶರಣು ; ಕೊನೆಯ ವಿ...
28-10-24 08:38 pm
ಇಸ್ರೇಲಿಗೆ ನಮ್ಮ ಸಾಮರ್ಥ್ಯ ತೋರಿಸುತ್ತೇವೆ ಎಂದು ಪೋಸ...
28-10-24 05:56 pm
Cyber fraud, Digital arrest, Modi: "ಡಿಜಿಟಲ್ ಅ...
28-10-24 11:47 am
28-10-24 10:51 pm
Giridhar Shetty, Headline Karnataka, Mangalore
Leopard, pilar, Deralakatte; ದೇರಳಕಟ್ಟೆ ಪ್ರದೇಶ...
28-10-24 03:53 pm
MLA Harish Poonja, B K Harishprasad: ಪುಡಿ ರಾಜ...
28-10-24 01:00 pm
Pejawar Seer, Caste Census: ಪ್ರಜಾಪ್ರಭುತ್ವದಲ್ಲ...
27-10-24 10:37 pm
Ashok Rai Puttur, Mangalore; ನಾನೊಬ್ಬ ಹಿಂದು, ದ...
27-10-24 02:41 pm
29-10-24 01:01 pm
Mangalore Correspondent
Mangalore Murder, Crime, Kateel: ಕಟೀಲು ಬಳಿ ಮನ...
29-10-24 12:38 pm
Mangalore Crime, Drugs: ಪಣಂಬೂರಿನಲ್ಲಿ ಡ್ರಗ್ಸ್...
28-10-24 11:12 pm
Bangalore Crime, Blackmail: ಪತ್ನಿ ಮತ್ತು ಆಕೆಯ...
28-10-24 02:47 pm
Mangalore News, Cyber Fraud: ಮಹಾರಾಷ್ಟ್ರದ ಎಸ್ಐ...
27-10-24 08:57 pm