ಬ್ರೇಕಿಂಗ್ ನ್ಯೂಸ್
13-07-21 10:01 pm Headline Karnataka News Network ಕರ್ನಾಟಕ
Photo credits : Roshan Bhat
ಕಾರವಾರ, ಜುಲೈ 13: ಪಶ್ಚಿಮ ಘಟ್ಟಗಳ ಸೌಂದರ್ಯಕ್ಕೆ ಎಣೆಯಿಲ್ಲ. ಘಟ್ಟಗಳ ನಿಸರ್ಗ ಸಿರಿಯ ಮಧ್ಯೆ ಇರುವ ಕಾರವಾರದ ರೈಲು ನಿಲ್ದಾಣ ಈಗ ವಿದೇಶದಲ್ಲೂ ಆಕರ್ಷಣೆಗೆ ಕಾರಣವಾಗಿದೆ. ಅದಕ್ಕೆ ಕಾರಣವಾಗಿರುವುದು, ಅಚ್ಚ ಹಸಿರಿನ ಮಧ್ಯದಲ್ಲಿರುವ ಕಾರವಾರ ರೈಲು ನಿಲ್ದಾಣದ ವಿಹಂಗಮ ನೋಟ.
ಕಾರವಾರ ರೈಲು ನಿಲ್ದಾಣದ ಫೋಟೊ ನೋಡಿ ಆಕರ್ಷಿತರಾದ ನಾರ್ವೆ ದೇಶದ ಸಚಿವರೊಬ್ಬರು ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿ ಅದನ್ನು ಅದ್ಭುತ ಎಂದು ಕೊಂಡಾಡಿದ್ದಾರೆ. ನಾರ್ವೆಯ ಅಂತಾರಾಷ್ಟ್ರೀಯ ಅಭಿವೃದ್ಧಿ ಖಾತೆಯ ಸಚಿವ ಎಲಿನ್ ಸೊಲ್ಹೀಮ್ ಅವರು, ಕಾರವಾರ ರೈಲು ನಿಲ್ದಾಣದ ಫೋಟೊ ಪೋಸ್ಟ್ ಮಾಡಿ, ಅದ್ಭುತ ಹಸಿರು. ಇದು ಭಾರತದ ಅತ್ಯಂತ ಹಚ್ಚ ಹಸಿರಿನ ನಿಲ್ದಾಣಗಳಲ್ಲಿ ಒಂದಾಗಿರಬೇಕು ಎಂದು ಉದ್ಗರಿಸಿದ್ದಾರೆ.
ಸಚಿವರು ಟ್ವೀಟ್ ಮಾಡಿರುವ ಫೋಟೋ ಅಂತಾರಾಷ್ಟ್ರೀಯ ಮಟ್ಟದಲ್ಲಿ ವೈರಲ್ ಆಗಿದ್ದು, ಭಾರೀ ಕಮೆಂಟ್ ಮತ್ತು ಮೆಚ್ಚುಗೆ ವ್ಯಕ್ತವಾಗಿದೆ. ವೈರಲ್ ಆಗಿರುವ ಚಿತ್ರವನ್ನು ಸೆರೆಹಿಡಿದಿರುವವರು ರೋಶನ್ ಕಾನಡೆ. ಬೆಟ್ಟದ ನಡುವಿನ ಸುರಂಗ ಮಾರ್ಗದಿಂದ ಹೊರಬರುವ ರೈಲು ಮತ್ತು ಮೇಲ್ಭಾಗದ ಹಸಿರ ಸಿರಿಯನ್ನು ಹೊದ್ದಂತಿರುವ ಬೆಟ್ಟದ ಸಹಿತ ಇರುವ ಈ ಚಿತ್ರ ವಿಶ್ವ ಮಟ್ಟದಲ್ಲಿ ಮೆಚ್ಚುಗೆ ಗಳಿಸಿದೆ. ಒಂದು ವರ್ಷದ ಹಿಂದೆ ತೆಗೆದಿದ್ದ ಚಿತ್ರ ಈಗಿನ ಮಳೆಗಾಲದಲ್ಲಿ ಆಕರ್ಷಣೆಗೆ ಪಾತ್ರವಾಗಿದೆ.
Amazing green!
— Erik Solheim (@ErikSolheim) July 6, 2021
This must be One of the greenest Railway Stations in India 🇮🇳 and the world?
Karwar in Karnataka pic.twitter.com/RKldvGcWNl
Karwar railway station highly praised by Norway Minister Erik Solheim for its Green beauty. The Minister tweets, Amazing green! This must be One of the greenest Railway Stations in India and the world? Karwar in Karnataka
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
26-07-26 01:32 pm
HK News Staffer
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
26-07-26 09:57 pm
HK News Desk
ಕದ್ರಿ ಯುದ್ಧ ಸ್ಮಾರಕದ ಬಳಿ ಟಿ-55 ಯುದ್ಧ ಟ್ಯಾಂಕರ್...
26-07-26 09:14 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಹವಾಮಾನ ಇಲಾಖೆಯ ಅವೈಜ್ಞಾನಿಕ ವರದಿ, ತರಾತುರಿಯ ರಜೆ ಘ...
25-07-26 02:42 pm
26-07-26 04:30 pm
HK News Staffer
ಶಾಲಾ ಬಸ್ಸಿಗೆ ಮರ ಬಿದ್ದು ಮಗು ಸಾವು ಪ್ರಕರಣ ; ಬಸ್ಸ...
25-07-26 07:36 pm
Vikky Bappal, Mangalore Crime: ಕುಖ್ಯಾತ ರೌಡಿ ವ...
25-07-26 03:50 pm
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಯುವತಿಯಿಂದ ಬ್ಲ...
24-07-26 08:57 pm
ಪಿಡಿಓ ಹುದ್ದೆ ಕೊಡಿಸುವುದಾಗಿ ಹೇಳಿ 26 ಲಕ್ಷ ಪೀಕಿಸಿ...
24-07-26 08:31 pm