ಬ್ರೇಕಿಂಗ್ ನ್ಯೂಸ್
16-07-21 12:20 pm Headline Karnataka News Network ಕರ್ನಾಟಕ
ಬೆಂಗಳೂರು, ಜುಲೈ 16: ಐಷಾರಾಮಿ ಕಾರುಗಳ ಮಾಲೀಕರನ್ನು ನಂಬಿಸಿ ಕಾರುಗಳನ್ನು ಬಾಡಿಗೆಗೆ ಪಡೆದು ಬೇರೆಯವರಿಗೆ ಅಡವು ಇಡುತ್ತಿದ್ದದ್ದಲ್ಲದೆ ಮಾರಾಟ ಮಾಡಿ ವಂಚಿಸುತ್ತಿದ್ದ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು ಮೂರು ಕೋಟಿ ಮೌಲ್ಯದ 19 ಐಷಾರಾಮಿ ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ನಸೀಬ್, ಮಹಮ್ಮದ್ ಆಜಂ ಹಾಗೂ ಮಹೀರ್ ಖಾನ್ ಎಂದು ಗುರುತಿಸಲಾಗಿದೆ. ಆರೋಪಿಗಳು ಚಿತ್ರದುರ್ಗ, ದಾವಣಗೆರೆ, ಭಟ್ಕಳ, ಮೈಸೂರು ಹಾಗೂ ಇನ್ನಿತರ ಕಡೆಗಳಲ್ಲಿ ಮಾರಾಟ ಮಾಡಿದ್ದ ಐಷಾರಾಮಿ ಕಾರುಗಳಾದ ಕ್ಯಾರವೆಲ್, ಫಾರ್ಚುನರ್, ಕಿಯಾ ಸೆಲ್ಟೊಸ್, ಎಂಡೀವರ್, ಫೋಕ್ಸ್ ವ್ಯಾಗನ್, ಸ್ಕೋಡಾ ರ್ಯಾಪಿಡ್, ಎಕ್ಸ್ ಯುವಿ -100 ಕಾರು ಸೇರಿದಂತೆ ರೂ. 3 ಕೋಟಿ ಮೌಲ್ಯದ ಒಟ್ಟು 19 ಐಷಾರಾಮಿ ಕಾರುಗಳನ್ನು ಹಾಗೂ ರೂ.2.25 ಮೌಲ್ಯದ 58 ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಾರುಗಳನ್ನು ಮಾರಾಟ, ಬಾಡಿಗೆ ನೆಪದಲ್ಲಿ ಪಡೆಯುತ್ತಿದ್ದ ಆರೋಪಿಗಳು ನಂತರ ಮಾಲೀಕರ ಗಮನಕ್ಕೆ ತರದೆ ಅವುಗಳನ್ನು ಮಾರಾಟ ಇಡುತ್ತಿದ್ದರು. ಬಳಿಕ ಕಾರು ಮರಳಿ ಕೇಳಿದಾಗ ಅವರ ಮೇಲೆ ಆರೋಪಿಗಳು ಹಲ್ಲೆ ನಡೆಸುತ್ತಿದ್ದರು. ಈ ಕುರಿತು ಜ್ಞಾನಭಾರತಿ, ವಯ್ಯಾಲಿಕಾವಲ್ ಹಾಗೂ ಪುಲಕೇಶಿ ನಗರ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದ್ದವು. ಹೀಗಾಗಿ ಆರೋಪಿಗಳ ಬಂಧನಕ್ಕೆ ತಂಡವನ್ನು ರಚನೆ ಮಾಡಲಾಗಿತ್ತು. ಇದರಂತೆ ಮೈಸೂರು, ಭಟ್ಕಳ, ದಾವಣಗೆರೆ ಹಾಗೂ ಚಿತ್ರದುರ್ಗದಲ್ಲಿ ಆರೋಪಿಗಳು ಮಾರಾಟ ಮಾಡಿದ್ದ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಎಟಿಎಂ ಕಳವು ನೀಡಿತ್ತು ಸುಳಿವು !
ಕೆಜಿ ಹಳ್ಳಿ ಠಾಣೆ ವ್ಯಾಪ್ತಿಯ ಎಕ್ಸಿಸ್ ಬ್ಯಾಂಕ್ ಎಟಿಎಂಗಳಿಗೆ ಹಣ ತುಂಬಲು ಬಂದಿದ್ದ ವೇಳೆ 75 ಲಕ್ಷ ಹಣ ಎಗರಿಸಿದ ಘಟನೆ ನಡೆದಿತ್ತು. ಪ್ರಕರಣದ ಆರೋಪಿಗಳನ್ನು ಪೊಲೀಸರು ಪತ್ತೆ ಮಾಡಿ ಹಣ ವಶಕ್ಕೆ ಪಡೆದಿದ್ದರು. ಆದರೆ ಕೃತ್ಯಕ್ಕೆ ಬಳಸಲಾಗಿದ್ದ ವಾಹನ ಪತ್ತೆಯಾಗಿರಲಿಲ್ಲ. ಈ ನಿಟ್ಟಿನಲ್ಲಿ ಗೋವಿಂದಪುರ ಪೊಲೀಸ್ ಠಾಣೆ ಅಧಿಕಾರಿ ಮತ್ತು ಸಿಬ್ಬಂದಿ ತಂಡ ತನಿಖೆ ಕೈಗೊಂಡಿತ್ತು. ಟಯೋಟಾ ಇನೋವಾ ಕಾರು ಚಾಲಕ ಶಬ್ಬೀರ್ ಖಾನ್ ಎಂಬಾತನನ್ನು ವಿಚಾರಣೆ ಮಾಡಿದಾಗ ಅಸಮರ್ಪಕ ಮಾಹಿತಿ ನೀಡಿದ್ದ. ವಿಚಾರಣೆ ನಡೆಸಿದಾಗ ತನ್ನ ಸ್ನೇಹಿತರಾದ ಶರಣ್ ಮತ್ತು ಶಕ್ತಿವೇಲು ಎಂಬವರೊಂದಿಗೆ ಸೇರಿ ಕಾರುಗಳನ್ನು ಕಳವು ಮಾಡಿ ಮಾರಾಟ ಮಾಡುತ್ತಿದ್ದುದಾಗಿ ತಿಳಿಸಿದ್ದಾನೆ. ಪ್ರಕರಣದಲ್ಲಿ ಶಬ್ಬೀರ್ ಖಾನ್‍ನನ್ನು ಬಂಧಿಸಿದ್ದು, ಆತನಿಂದ ರೂ.1.8 ಕೋಟಿ ಮೌಲ್ಯದ 20 ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ.
ಪ್ರಕರಣದಲ್ಲಿ ಒಟ್ಟಾರೆ 5 ಇನೋವಾ ಕಾರು, 2 ಟೆಂಫೋ ಟ್ರಾವೆಲರ್, ಮಹೀಂದ್ರ ಎಕ್ಸ್‍ಯುವಿ ವಾಹನ, ಮಹೀಂದ್ರಾ ವೆರಿಟ್ಟೋ, ಟಯೋಟಾ ಟಯೋಸ್ 5, ಶಿಫ್ಟ್ ಡಿಸೈರ್ 3, ಹೋಂಡಾ ಅಸೆಟ್ 1, ಟಾಟಾ ವಿಸ್ತಾ 1, ಮಾರುತಿ ಜೆನ್ 1 ಸೇರಿ ಒಟ್ಟು 1 ಕೋಟಿ 80 ಲಕ್ಷ ಮೌಲ್ಯದ 20 ಕಾರುಗಳನ್ನು ಶಬೀರ್ ಬಳಿಯಿಂದ ವಶಪಡಿಸಿಕೊಳ್ಳಲಾಗಿದೆ. ಶಬೀರ್ ನೀಡಿದ ಮಾಹಿತಿಯಂತೆ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಐಷಾರಾಮಿ ಕಾರು ಮಾರಾಟ ಜಾಲವನ್ನು ಬಯಲಿಗೆಳೆದಿದ್ದಾರೆ.
CCB police arrested three men who allegedly cheated car owners by promising to help them sell their expensive cars, and escaped with the vehicles. They recovered 19 cars worth Rs 3 crore. East division police also recovered 20 cars and 58 two-wheelers worth Rs 2.25 crore, in a special drive against vehicle theft cases.
25-11-24 05:51 pm
Bangalore Correspondent
ಮನೆಯೊಂದು ಮೂರು ಬಾಗಿಲು, ಗೆಲುವು ಕಸಿದ ಬಿಜೆಪಿ ಒಳಜಗ...
25-11-24 03:28 pm
Bjp, D K Shivakumar : ಚನ್ನಪಟ್ಟಣ ಗೆಲ್ಲಲು ಬಿಜೆಪ...
24-11-24 08:39 pm
CM Siddaramaiah, BJP, Congress ಆರ್. ಅಶೋಕ್ ಕಾ...
23-11-24 07:43 pm
B Y Vijayendra, DK Shivkumar: ವಿಜಯೇಂದ್ರಗೆ ತೀವ...
23-11-24 02:15 pm
23-11-24 11:07 pm
HK News Desk
ಬಿಜೆಪಿ ‘ಗ್ಯಾರಂಟಿ’ಗೆ ಕೈಹಿಡಿಯದ ಜಾರ್ಖಂಡ್ ಮತದಾರ,...
23-11-24 05:34 pm
ಮಹಾರಾಷ್ಟ್ರದಲ್ಲಿ ಕೇಸರಿ ಕಮಾಲ್ ; ನಿರೀಕ್ಷೆಗೂ ಮೀರಿ...
23-11-24 04:33 pm
ಭಾರೀ ವಿವಾದ ಸೃಷ್ಟಿಸಿದ್ದ 'ಎಮರ್ಜೆನ್ಸಿ' ಚಿತ್ರ ಬಿಡ...
18-11-24 03:54 pm
ಶ್ರದ್ಧಾ ವಾಳ್ಕರ್ ಹತ್ಯೆಗೆ ಸೇಡು ತೀರಿಸಲು ಬಿಷ್ಣೋಯಿ...
18-11-24 01:09 pm
25-11-24 11:14 pm
Mangalore Correspondent
Vithoba Rukumai temple case, Mangalore: ವಿಠೋಬ...
25-11-24 10:39 pm
Ullal Dargah, Mangalore: ಎಪ್ರಿಲ್ 24 ರಿಂದ ಮೇ...
25-11-24 02:44 pm
Kukke Subrahmanya Temple, Mangalore: ನ.27ರಿಂದ...
24-11-24 09:13 pm
Hariprasad, Mangalore, Congress: ಮಹಾರಾಷ್ಟ್ರದಲ...
24-11-24 05:16 pm
25-11-24 06:17 pm
HK News Desk
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm
Rowdy sheeter Dawood, Mangalore Crime, Police...
23-11-24 10:49 am
ಟ್ರಾಯ್ ಕಂಪನಿ ಸೋಗಿನಲ್ಲಿ ಕರೆ ; ಅಮೆರಿಕಾದ ಸಾಫ್ಟ್...
22-11-24 10:47 pm
Mangalore crime, Sexual Harrasment, Police: ಮ...
22-11-24 09:37 pm