karresults.nic.in and on pue.kar.nic.in. Students can check their 2nd PUC hall ticket or registration number on the official website pue.kar.nic.in.

">

ಇಂದು ಸಂಜೆ ಪಿಯುಸಿ ಫಲಿತಾಂಶ, ಎಲ್ಲರೂ ಪಾಸ್ ; ನಾಲ್ಕು ಗಂಟೆ ಬಳಿಕ ರಿಸಲ್ಟ್ ತಿಳಿಯಬಹುದು

20-07-21 01:28 pm       Headline Karnataka News Network   ಕರ್ನಾಟಕ

ಪಿಯು ಪರೀಕ್ಷೆ ಇಲ್ಲದೇ ಈ ಬಾರಿ 6 ಲಕ್ಷ 66 ಸಾವಿರದ 497 ವಿದ್ಯಾರ್ಥಿಗಳನ್ನೂ ಪಾಸ್ ಮಾಡಲಾಗಿದೆ. ‌ಪಿಯು ಬೋರ್ಡಿನ NIC ವೈಬ್ ಸೈಟ್ ಮೂಲಕ ಫಲಿತಾಂಶ ತಿಳಿಯಬಹುದು.

ಬೆಂಗಳೂರು, ಜುಲೈ 20: ಅತ್ತ ಅಬ್ಜೆಕ್ವಿವ್ ಪರೀಕ್ಷೆ ಮುಗಿಯುತ್ತಿದ್ದಂತೆ ಇತ್ತ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶವೂ ಪ್ರಕಟವಾಗಿದೆ. ಪರೀಕ್ಷೆ ಇಲ್ಲದೇ ಎಲ್ಲ ವಿದ್ಯಾರ್ಥಿಗಳನ್ನೂ ಪಾಸ್ ಮಾಡಿದ್ದು ಇಂದು ಸಂಜೆ 4 ಗಂಟೆ ಬಳಿಕ ಆನ್ಲೈನಲ್ಲಿ ಫಲಿತಾಂಶ ಪ್ರಕಟಗೊಳ್ಳಲಿದೆ. 

ಪಿಯು ಪರೀಕ್ಷೆ ಇಲ್ಲದೇ ಈ ಬಾರಿ 6 ಲಕ್ಷ 66 ಸಾವಿರದ 497 ವಿದ್ಯಾರ್ಥಿಗಳನ್ನೂ ಪಾಸ್ ಮಾಡಲಾಗಿದೆ. ‌ಪಿಯು ಬೋರ್ಡಿನ NIC ವೈಬ್ ಸೈಟ್ ಮೂಲಕ ಫಲಿತಾಂಶ ತಿಳಿಯಬಹುದು. Know my register numbar ಮೂಲಕ ರಿಸಲ್ಟ್ ನಂಬರ್ ಹಂಚಿಕೆ ಮಾಡಲಾಗಿದೆ.

ಈ ಬಾರಿ ಫ್ರೆಶರ್ಸ್ ವಿದ್ಯಾರ್ಥಿಗಳು 5 ಲಕ್ಷ 90 ಸಾವಿರದ 153 ಮಂದಿ ಇದ್ದಾರೆ. 76 ಸಾವಿರ 344 ಮಂದಿ ವಿದ್ಯಾರ್ಥಿಗಳು ರಿಪೀಟರ್ಸ್ ವಿದ್ಯಾರ್ಥಿಗಳು. ಒಟ್ಟು 6 ಲಕ್ಷ 66 ಸಾವಿರದ 497 ವಿದ್ಯಾರ್ಥಿಗಳಿದ್ದು ಎಲ್ಲರನ್ನೂ ಪಾಸ್ ಮಾಡಲಾಗಿದೆ. ಅಲ್ಲದೆ
ವಿಷಯವಾರು ಅಂಕವನ್ನೂ ನೀಡಲಾಗಿದೆ. 

ಸುಮಾರು 17 ಸಾವಿರ ವಿದ್ಯಾರ್ಥಿಗಳು ಮುಂದಿನ ತಿಂಗಳು ಪರೀಕ್ಷೆ ಬರೆಯಲಿದ್ದಾರೆ. ಇಂದಿನ ಫಲಿತಾಂಶ ಒಪ್ಪಿಗೆ ಇಲ್ಲವಾದ್ರೆ ಆಗಸ್ಟ್ ನಲ್ಲಿ ಪರೀಕ್ಷೆ ಬರೆಯಲು ಅವಕಾಶ ಇದೆ. ಇಂದಿನ ಪಿಯು ಪರೀಕ್ಷೆಯ ಫಲಿತಾಂಶವನ್ನು ಚಾಲೆಂಜ್ ಅಥವಾ ತಿರಸ್ಕೃತ ಮಾಡುವ ವಿದ್ಯಾರ್ಥಿಗಳಿಗೆ ಆಗಸ್ಟ್ ನಲ್ಲಿ ಎಕ್ಸಾಂ ಅವಕಾಶ ಇರುತ್ತದೆ.‌ ಆದರೆ, ಈಗಿನ ಪರೀಕ್ಷಾ ಫಲಿತಾಂಶವನ್ನು ತಿರಸ್ಕರಿಸುವ ವಿದ್ಯಾರ್ಥಿಗಳು ಮತ್ತೆ ಹಳೆ ಅಂಕ ಪಡೆಯಲು ಅವಕಾಶ ಇರುವುದಿಲ್ಲ. 

ಕಳೆದ ನಾಲ್ಕೈದು ದಿನಗಳ‌ ಹಿಂದೆಯೇ ಎಲ್ಲಾ ಪಿಯುಸಿ ವಿದ್ಯಾರ್ಥಿಗಳಿಗೆ ಇಲಾಖೆಯಿಂದ ರಿಜಿಸ್ಟರ್ ನಂಬರ್ ನೀಡಿದೆ. ರಿಜಿಸ್ಟರ್ ನಂಬರ್ ಗೊತ್ತಿಲ್ಲದ ವಿದ್ಯಾರ್ಥಿಗಳು ನೇರವಾಗಿ ಕಾಲೇಜು ಆಡಳಿತಕ್ಕೆ ಕರೆ ಮಾಡಿ ಮಾಹಿತಿ ಪಡೆಯಬಹುದು. 
ಅಥವಾ https://dpue-exam.karnataka.gov.in/iipu2021_registrationnumber/regnumber

Pre-University Examination Board of Karnataka would be releasing the Class 12 or 2nd PUC Result 2021 today – July 20, 2021. The result would be announced online and released on the official website at 4 pm. Results would be available on the official website karresults.nic.in and on pue.kar.nic.in. Students can check their 2nd PUC hall ticket or registration number on the official website pue.kar.nic.in.