ಬ್ರೇಕಿಂಗ್ ನ್ಯೂಸ್
20-07-21 05:45 pm Headline Karnataka News Network ಕರ್ನಾಟಕ
ಬೆಂಗಳೂರು, ಜುಲೈ 20: ಸಿಎಂ ಯಡಿಯೂರಪ್ಪ ಪದಚ್ಯುತಿ ವಿಚಾರ ರಾಜ್ಯದಲ್ಲಿ ಲಿಂಗಾಯತರು ಸಿಡಿದೇಳುವಂತೆ ಮಾಡಿದೆ. ಇಂದು ಬೆಂಗಳೂರಿಗೆ ಆಗಮಿಸಿದ ವಿವಿಧ ಕಡೆಯ ಲಿಂಗಾಯತ ಮತ್ತು ವೀರಶೈವ ಮಠಗಳ ಮಠಾಧೀಶರು, ಯಡಿಯೂರಪ್ಪ ಅವರನ್ನು ಭೇಟಿಯಾಗಿ ತಮ್ಮ ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ. ಮುರುಘಾ ಶರಣರು, ಜಂಗಮ ಮಠಗಳ ಸ್ವಾಮೀಜಿಗಳು ಕೂಡ ಇದೇ ವೇಳೆ ಯಡಿಯೂರಪ್ಪ ಪರವಾಗಿ ತೊಡೆ ತಟ್ಟಿದ್ದಾರೆ.
ಮಾಧ್ಯಮದ ಜೊತೆ ಮಾತನಾಡಿದ ದಿಂಗಾಲೇಶ್ವರ ಶ್ರೀಗಳು, ಲಿಂಗಾಯತರನ್ನು ಯಾವುದೇ ಪಕ್ಷ ಸರಿಯಾಗಿ ನಡೆಸಿಕೊಂಡಿಲ್ಲ. ಯಡಿಯೂರಪ್ಪ ಇದ್ದರೆ ಮಾತ್ರ ಬಿಜೆಪಿ. ಇಲ್ಲಾಂದ್ರೆ ಬಿಜೆಪಿ ರಾಜ್ಯದಲ್ಲಿ ಸರ್ವನಾಶ ಆಗುತ್ತೆ. ಯಡಿಯೂರಪ್ಪ ನನ್ನ ಕೈಯಲ್ಲಿ ಏನೂ ಇಲ್ಲವೆಂದು ಹೇಳಿದ್ದಾರೆ. ಹೈಕಮಾಂಡ್ ಹೇಳಿದರೆ ನಾನು ಕೇಳಬೇಕಾಗುತ್ತೆ ಎಂದಿದ್ದಾರೆ. ನಾವು ಬಿಜೆಪಿ ಹೈಕಮಾಂಡಿಗೆ ವಾರ್ನ್ ಮಾಡುತ್ತೇವೆ. ಈಗಲೂ ಕಾಲ ಮಿಂಚಿಲ್ಲ. ಯಡಿಯೂರಪ್ಪ ಅವರನ್ನೇ ಸಿಎಂ ಸ್ಥಾನದಲ್ಲಿ ಮುಂದುವರಿಸಿ, ಇಲ್ಲಾಂದ್ರೆ ಪರಿಣಾಮ ನೆಟ್ಟಗಿರಲ್ಲ ಎಂದು ಗುಡುಗಿದ್ದಾರೆ.
ಯಡಿಯೂರಪ್ಪ ಅವರು ಬೇರೆ ಪಕ್ಷದ ಶಾಸಕರನ್ನು ಜೊತೆಗೂಡಿಸಿ ಸರಕಾರ ರಚಿಸಿದ್ದಾರೆ. ನೆರೆ ಪರಿಸ್ಥಿತಿ ಮತ್ತು ಕೊರೊನಾ ಸಂಕಷ್ಟವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಹಾಗಿದ್ದರೂ, ಯಡಿಯೂರಪ್ಪ ಅವರನ್ನು ಬದಲಿಸಲು ತೆರೆಮರೆಯ ಕಸರತ್ತು ನಡೆಸುತ್ತಿದ್ದಾರೆ. ಲಿಂಗಾಯತರನ್ನು ತುಳಿದು ಈ ಹಿಂದೆ ಏನಾಗಿತ್ತು ಅನ್ನೋದನ್ನು ಬಿಜೆಪಿ ನೋಡಿದೆ. ಅದು ಮತ್ತೆ ಮರುಕಳಿಸಬಾರದು. ಹೈಕಮಾಂಡ್ ಏನಾದ್ರೂ ತನ್ನ ನಿರ್ಧಾರ ತಗೊಂಡರೆ ಮುಂದೆ ಏನಾಗುತ್ತೆ ನೋಡಿ ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ.
ಯಡಿಯೂರಪ್ಪ ಇದ್ದಾಗ ಮಾತ್ರ ಯಾಕೆ ಬದಲಾವಣೆ ಪ್ರಶ್ನೆ ಉದ್ಭವ ಆಗೋದು. ಯಡಿಯೂರಪ್ಪ ಬದಲಾವಣೆ ಮಾಡೋ ಅಗತ್ಯ ಏನಿದೆ.. ಬದಲಾವಣೆ ಮಾಡೋ ಹಾಗಿದ್ರೆ ಮೊದಲೇ ಮಾಡಬೇಕಿತ್ತು. ಈಗ ರಾಜ್ಯದಲ್ಲಿ ಎಲ್ಲ ಸಮಸ್ಯೆ ಬಗೆಹರಿದ ಮೇಲೆ ಬದಲಾವಣೆ ಮಾಡುವ ಅಗತ್ಯ ಏನಿದೆ. ಇಲ್ಲಿ ಲಿಂಗಾಯತರ ಪ್ರಶ್ನೆ ಬರಲ್ಲ. ಯಡಿಯೂರಪ್ಪ ಪಕ್ಷಕ್ಕಾಗಿ ತ್ಯಾಗ ಮಾಡಿದ್ದಾರೆ, ಪರಿಶ್ರಮ ಪಟ್ಟಿದ್ದಾರೆ. ಅಂಥವರನ್ನು ನಡುವಿನಲ್ಲಿ ತೆಗೆದು ಹಾಕಿ ಅವಮಾನಿಸುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ.
ಈಗ ಮಾಧ್ಯಮಗಳ ಮೂಲಕ ನಮ್ಮ ನಿರ್ಣಯ ತಿಳಿಸಿದ್ದೇವೆ. ಬಿಜೆಪಿ ಹೈಕಮಾಂಡಿಗೆ ಸ್ಪಷ್ಟ ಸೂಚನೆ ನೀಡುತ್ತಿದ್ದೇವೆ. ಎರಡು ದಿನಗಳಲ್ಲಿ ಮಠಾಧೀಶರ ಸಭೆ ಕರೆದು ತೀರ್ಮಾನ ತೆಗೆದುಕೊಳ್ಳುತ್ತೇವೆ. ಅದರಲ್ಲಿ ಐದಾರು ನೂರು ಮಠಾಧೀಶರು ಸಭೆ ಸೇರಲಿದ್ದಾರೆ. ನಾವು ನಮ್ಮ ತೀರ್ಮಾನ ಮಾಡ್ತೀವಿ. ಮುಂದಿನದ್ದನ್ನು ಅವರೇ ಅನುಭವಿಸುತ್ತಾರೆ, ನಾವೇನು ಮಾಡೋಕ್ಕಾಗಲ್ಲ ಎಂದು ಹೇಳಿದ್ದಾರೆ.
Prominent Lingayat leaders of the Congress and pontiffs have thrown their weight behind Chief Minister B S Yediyurappa whose exit is looking imminent. The Veerashaiva-Lingayat community is estimated to form about 16% of the state’s population and is considered to be the BJP’s core support base. Yediyurappa belongs to this community.
11-02-25 10:34 pm
HK News Desk
Mysuru Fight, Crime Update: ಉದಯಗಿರಿ ಠಾಣೆಗೆ ಖಾ...
11-02-25 03:40 pm
NAACbribery case: ನ್ಯಾಕ್ ಮಾನ್ಯತೆಗಾಗಿ ಭ್ರಷ್ಟಾಚ...
11-02-25 02:21 pm
Mysuru stone pelting, Rahul Gandhi: ದೆಹಲಿ ಫಲಿ...
11-02-25 12:37 pm
Mandya suicide crime, Gym: ಗಂಡನ ಅನೈತಿಕ ಸಂಬಂಧಕ...
10-02-25 10:51 pm
11-02-25 04:19 pm
HK News Desk
Wedding, Cibil Score: ಸಿಬಿಲ್ ಸ್ಕೋರ್ ಚೆನ್ನಾಗಿಲ...
10-02-25 05:48 pm
CBI arrest, Tirupati laddu: ತಿರುಪತಿ ಲಡ್ಡಿನಲ್ಲ...
10-02-25 02:13 pm
ಮೆಕ್ಸಿಕೋ ; ಟ್ರಕ್ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ...
09-02-25 09:32 pm
Delhi Election Results 2025, BJP Win; ದೆಹಲಿಯಲ...
08-02-25 02:23 pm
11-02-25 07:44 pm
Mangalore Correspondent
Ashok Rai, Temple, Nalin Kateel : ನಳಿನ್ ಅವರೇ...
11-02-25 04:50 pm
Mangalore, Brijesh Chowta, Wenlock hospital:...
10-02-25 11:09 pm
Drone, Puttur Konark Rai, Indian Army: ಆಕಾಶದಿ...
10-02-25 10:34 pm
Mangalore News, Wenlock hospital, operation:...
09-02-25 11:03 pm
11-02-25 06:41 pm
HK News Desk
Mangalore Police, Crime: ಕೊಲೆ ಅಪರಾಧಿಗೆ ಆಶ್ರಯ...
09-02-25 07:35 pm
Bangalore, Udupi crime, Fraud: ಕ್ಯಾಸಿನೋ, ಬಿಟ್...
08-02-25 10:16 pm
ಕಲಬುರಗಿ | ಪರಸ್ತ್ರೀ ಜೊತೆ ಸುತ್ತಾಡುತ್ತಿದ್ದ ಪತಿಯ...
08-02-25 06:21 pm
Mangalore Mayor raid, slaughterhouse Kudroli:...
08-02-25 04:36 pm