ಬ್ರೇಕಿಂಗ್ ನ್ಯೂಸ್
22-07-21 03:45 pm Headline Karnataka News Network ಕರ್ನಾಟಕ
ಬೆಂಗಳೂರು, ಜುಲೈ 22: ಲಿಂಗಾಯತ, ವೀರಶೈವ ಮಠಾಧೀಶರ ಬೆಂಬಲ, ಒಕ್ಕೊರಳ ಒತ್ತಾಯದ ನಡುವಲ್ಲೇ ಸಿಎಂ ಯಡಿಯೂರಪ್ಪ ಪದತ್ಯಾಗ ಮಾಡಲು ನಿರ್ಧರಿಸಿದ್ದಾರೆ ಎನ್ನುವ ಸುಳಿವು ಲಭಿಸಿದೆ. ಸ್ವಾಮೀಜಿಗಳ ಚಳವಳಿ, ಪ್ರತಿಭಟನೆಯ ಮಧ್ಯೆಯೇ ಇಂದು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಸಿಎಂ ಯಡಿಯೂರಪ್ಪ ರಾಜಿನಾಮೆಗೆ ಸಿದ್ಧನಾಗಿರುವ ರೀತಿ ಮಾತನಾಡಿದ್ದು ಕುತೂಹಲ ಮೂಡಿಸಿದೆ.
ಪ್ರಧಾನಿ ಮೋದಿ ಮತ್ತು ಅಮಿತ್ ಷಾರವರು ನನಗೆ ಸಿಎಂ ಆಗಲು ಅವಕಾಶ ನೀಡಿದ್ದಾರೆ. ನನಗೆ 78 ವರ್ಷ ಪೂರ್ತಿಯಾಗಿ 79 ವರ್ಷದಲ್ಲಿದ್ದೇನೆ. ಪಕ್ಷದ ನಿಯಮದ ಪ್ರಕಾರ 75ರ ವರೆಗೆ ಮಾತ್ರ ಸಾಂವಿಧಾನಿಕ ಹುದ್ದೆ ಪಡೆಯಲು ಅವಕಾಶ ಇದೆ. ಆದರೆ, ನನಗೆ ಈವರೆಗೂ ಅಧಿಕಾರ ನಡೆಸಲು ಅನುಮತಿ ನೀಡಿದ್ದಾರೆ. ಅವರನ್ನು ಅಭಿನಂದಿಸುತ್ತೇನೆ. ಅಲ್ಲದೆ, ಜುಲೈ 26ರಂದು ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೇರಿ ಎರಡು ವರ್ಷ ತುಂಬಿದ ಹಿನ್ನೆಲೆಯಲ್ಲಿ ಶಾಸಕರನ್ನು ಕರೆದು ಸಭೆ ಮಾಡುತ್ತೇನೆ.
ಎರಡು ವರ್ಷದ ಸಾಧನೆಯ ಬಗ್ಗೆ ಸಭೆಯಲ್ಲಿ ಹೇಳುತ್ತೇನೆ. ಯಾರು ಕೂಡ ನನ್ನ ಪರವಾಗಿ ಚಳವಳಿ, ಪ್ರತಿಭಟನೆ ಇತ್ಯಾದಿ ಮಾಡದಂತೆ ನಾನು ರಾಜ್ಯದ ಜನರಲ್ಲಿ ಮತ್ತು ಕಾರ್ಯಕರ್ತರಲ್ಲಿ ಮನವಿ ಮಾಡುತ್ತೇನೆ ಎಂದು ಹೇಳಿದರು. ಮಠಾಧೀಶರು ನೀವೇ ಮುಂದುವರಿಯಬೇಕು ಎಂದು ಒತ್ತಾಯಿಸುತ್ತಿದ್ದಾರಲ್ಲಾ ಎಂಬ ಪ್ರಶ್ನೆಗೆ, ವಿವಿಧ ಕಡೆಯ ಮಠಾಧೀಶರು ಬಂದು ಬೆಂಬಲ, ಆಶೀರ್ವಾದ ನೀಡಿದ್ದಾರೆ. ಅವರಿಗೆ ನಾನು ಆಭಾರಿಯಾಗಿದ್ದೇನೆ. ಪಕ್ಷವನ್ನು ಮುಂದಿನ ಬಾರಿ ಅಧಿಕಾರಕ್ಕೆ ತರುವ ಜವಾಬ್ದಾರಿಯನ್ನು ರಾಷ್ಟ್ರೀಯ ನಾಯಕರು ನೀಡಿದ್ದಾರೆ. ಆ ಕೆಲಸವನ್ನೂ ಮಾಡುತ್ತೇನೆ ಎಂದರು.
ನಿಮ್ಮ ನಿರ್ಧಾರ ಏನು ಎಂದು ಕೇಳಿದ್ದಕ್ಕೆ, ಪಕ್ಷದ ಹೈಕಮಾಂಡ್ ಏನು ಹೇಳುತ್ತೋ ಅದನ್ನು ಪಾಲಿಸುತ್ತೇನೆ ಎನ್ನುತ್ತಾ ಮಾಧ್ಯಮದಿಂದ ವಿಮುಖರಾಗಿ ಹೊರನಡೆದಿದ್ದಾರೆ. ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು, ಇಲ್ಲದಿದ್ದರೆ ಬಿಜೆಪಿ ರಾಜ್ಯದಲ್ಲಿ ಸರ್ವನಾಶ ಆಗಲಿದೆ ಎಂಬ ಎಚ್ಚರಿಕೆಯ ನಡುವೆಯೂ ಹೈಕಮಾಂಡ್ ಮಾತನ್ನು ಪಾಲಿಸುವುದಾಗಿ ಹೇಳುತ್ತಾ ತಾವು ಸ್ಥಾನ ತ್ಯಜಿಸಲು ಸಿದ್ಧನಾಗಿರುವುದಾಗಿ ಹೇಳಿಕೊಂಡಿದ್ದಾರೆ. ಈ ಮೂಲಕ ಜುಲೈ 26ರಂದು ಶಾಸಕಾಂಗ ಸಭೆಯೇ ಯಡಿಯೂರಪ್ಪ ಅವರ ಬಾಳಿನ ಕೊನೆಯ ಸಭೆ ಆಗಲಿದೆ ಎನ್ನುವ ಮಾತು ಕೇಳಿಬಂದಿದೆ.
Read: ಸಿಡಿದೆದ್ದ ಮಠಾಧೀಶರು, ಯಡಿಯೂರಪ್ಪ ಬದಲಿಸಿದ್ರೆ ಪರಿಣಾಮ ನೆಟ್ಟಗಿರಲ್ಲ ; ಬಿಜೆಪಿ ಹೈಕಮಾಂಡಿಗೆ ವಾರ್ನ್
Video:
Amid weeks of speculation about a change of guard in Karnataka, Chief Minister BS Yediyurappa Thursday hinted at stepping down after July 26. Yediyurappa, who has so far dug in his heels over the chief ministership, told reporters in Bengaluru, “I will know the next step only after July 25, and will abide by the BJP high command’s decision. I will work to strengthen the party and bring the party back to power in Karnataka.”
25-11-24 05:51 pm
Bangalore Correspondent
ಮನೆಯೊಂದು ಮೂರು ಬಾಗಿಲು, ಗೆಲುವು ಕಸಿದ ಬಿಜೆಪಿ ಒಳಜಗ...
25-11-24 03:28 pm
Bjp, D K Shivakumar : ಚನ್ನಪಟ್ಟಣ ಗೆಲ್ಲಲು ಬಿಜೆಪ...
24-11-24 08:39 pm
CM Siddaramaiah, BJP, Congress ಆರ್. ಅಶೋಕ್ ಕಾ...
23-11-24 07:43 pm
B Y Vijayendra, DK Shivkumar: ವಿಜಯೇಂದ್ರಗೆ ತೀವ...
23-11-24 02:15 pm
23-11-24 11:07 pm
HK News Desk
ಬಿಜೆಪಿ ‘ಗ್ಯಾರಂಟಿ’ಗೆ ಕೈಹಿಡಿಯದ ಜಾರ್ಖಂಡ್ ಮತದಾರ,...
23-11-24 05:34 pm
ಮಹಾರಾಷ್ಟ್ರದಲ್ಲಿ ಕೇಸರಿ ಕಮಾಲ್ ; ನಿರೀಕ್ಷೆಗೂ ಮೀರಿ...
23-11-24 04:33 pm
ಭಾರೀ ವಿವಾದ ಸೃಷ್ಟಿಸಿದ್ದ 'ಎಮರ್ಜೆನ್ಸಿ' ಚಿತ್ರ ಬಿಡ...
18-11-24 03:54 pm
ಶ್ರದ್ಧಾ ವಾಳ್ಕರ್ ಹತ್ಯೆಗೆ ಸೇಡು ತೀರಿಸಲು ಬಿಷ್ಣೋಯಿ...
18-11-24 01:09 pm
25-11-24 11:14 pm
Mangalore Correspondent
Vithoba Rukumai temple case, Mangalore: ವಿಠೋಬ...
25-11-24 10:39 pm
Ullal Dargah, Mangalore: ಎಪ್ರಿಲ್ 24 ರಿಂದ ಮೇ...
25-11-24 02:44 pm
Kukke Subrahmanya Temple, Mangalore: ನ.27ರಿಂದ...
24-11-24 09:13 pm
Hariprasad, Mangalore, Congress: ಮಹಾರಾಷ್ಟ್ರದಲ...
24-11-24 05:16 pm
25-11-24 06:17 pm
HK News Desk
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm
Rowdy sheeter Dawood, Mangalore Crime, Police...
23-11-24 10:49 am
ಟ್ರಾಯ್ ಕಂಪನಿ ಸೋಗಿನಲ್ಲಿ ಕರೆ ; ಅಮೆರಿಕಾದ ಸಾಫ್ಟ್...
22-11-24 10:47 pm
Mangalore crime, Sexual Harrasment, Police: ಮ...
22-11-24 09:37 pm