ಬ್ರೇಕಿಂಗ್ ನ್ಯೂಸ್
24-07-21 10:02 pm Bangalore Correspondent ಕರ್ನಾಟಕ
ಬೆಂಗಳೂರು, ಜುಲೈ 24: ಕಳ್ಳತನ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕುವ ದೃಷ್ಟಿಯಿಂದ ನಗರದಲ್ಲಿ ಗಸ್ತು ತಿರುಗುವ ಹೊಯ್ಸಳ ಪೊಲೀಸ್ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ನಗರ ಪೊಲೀಸರು ಮುಂದಾಗಿದ್ದು ಪ್ರತ್ಯೇಕ ಮಾರ್ಗಸೂಚಿ ಸಿದ್ಧಪಡಿಸುತ್ತಿದ್ದಾರೆ. ಹೊಯ್ಸಳ ವ್ಯವಸ್ಥೆಯನ್ನು ಎಷ್ಟರ ಮಟ್ಟಿಗೆ ಪ್ರಭಾವಿಯಾಗಿ ಬಳಸಬೇಕೆಂಬ ಬಗ್ಗೆ ನಿಯಮ ರೂಪಿಸುತ್ತಿದ್ದಾರೆ.
ಸಾರ್ವಜನಿಕರಿಂದ ದೂರುಗಳು ಬಂದಾಗ ಮಾತ್ರ ಹೊಯ್ಸಳ ಪೊಲೀಸರು ಸ್ಥಳಕ್ಕೆ ತೆರಳುತ್ತಾರೆ ಎನ್ನುವ ಆರೋಪಗಳಿವೆ. ಉಳಿದಂತೆ ಒಂದೇ ಕಡೆ ವಾಹನ ನಿಲ್ಲಿಸಿ ಕಾಲಹರಣ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿದ್ದವು. ಈ ಹಿನ್ನೆಲೆ ಅಪರಾಧ ಘಟನೆಗಳ ಸಂದರ್ಭದಲ್ಲಿ ಹೊಯ್ಸಳ ಪೊಲೀಸರನ್ನು ಕೂಡ ಹೊಣೆಗಾರರನ್ನಾಗಿಸಲು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೊಸ ವ್ಯವಸ್ಥೆಗೆ ಮುಂದಾಗಿದ್ದಾರೆ.
ಪ್ರತಿದಿನ ವರದಿ ನೀಡಲು ಬರಲಿದೆ ಸಾಫ್ಟ್‌ವೇರ್
ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿ ಬೆಂಗಳೂರು ನಗರದಲ್ಲಿ 110 ಪೊಲೀಸ್ ಠಾಣೆಗಳಿವೆ. ಇದಲ್ಲದೆ ಒಟ್ಟು 272 ಹೊಯ್ಸಳ ವಾಹನಗಳು, 232 ಚೀತಾ ಬೈಕ್ಗಳು ಗಸ್ತು ತಿರುಗುವುದಕ್ಕಾಗಿಯೇ ಇವೆ. ಮುಂದಿನ ದಿನಗಳಲ್ಲಿ ಇನ್ನೂ 40 ಹೊಯ್ಸಳ ವಾಹನ ಸೇರ್ಪಡೆ ಆಗಲಿದೆ. ಈ ವ್ಯವಸ್ಥೆಯನ್ನು ಆಯಾ ಪೊಲೀಸ್ ಠಾಣೆ ಅಧಿಕಾರಿಗಳೇ ನಿಯಂತ್ರಿಸುತ್ತಿದ್ದರು. ಹೊಸ ವ್ಯವಸ್ಥೆಯಲ್ಲಿ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಕಮಾಂಡ್ ಸೆಂಟರ್ ಬರಲಿದ್ದು ಅವರೇ ಸಂಪೂರ್ಣ ನಿಗಾ ಇಡಲಿದ್ದಾರೆ.
ಗಸ್ತಿನಲ್ಲಿರುವಾಗ ಸಿಬ್ಬಂದಿ ಏನೆಲ್ಲ ಕೆಲಸ ಮಾಡಿದ್ದರು ಎಂಬುದರ ಬಗ್ಗೆ ಪ್ರತಿದಿನ ವರದಿ ನೀಡಲು ಸಾಫ್ಟ್‌ವೇರ್ ಬರಲಿದೆ. ಹೊಯ್ಸಳ ವಾಹನದಲ್ಲಿ ಈಗಾಗಲೇ ಜಿಪಿಆರ್ಎಸ್ ಅಳವಡಿಸಲಾಗಿದೆ. ಭೌಗೋಳಿಕ ಆಧಾರದಲ್ಲಿ ಆಯಾ ಠಾಣೆಯ ಸರಹದ್ದು ಗುರುತಿಸಲು ಜಿಯೋ ಫೆನ್ಸಿಂಗ್ ಮಾಡಿ ಸಾಫ್ಟ್‌ವೇರ್ ಅಳವಡಿಸಲು ಚಾಲನೆ ನೀಡಿದ್ದಾರೆ.
ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಫುಲ್ ಅಲರ್ಟ್ !
ಬಾರ್, ಕ್ಲಬ್, ಬಸ್ ನಿಲ್ದಾಣ ಸೇರಿ ಜನಸಂದಣಿ ಇರುವ ಹಾಗೂ ಅಪರಾಧ ಘಟನೆಗಳು ನಡೆಯುವ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಈ ಏರಿಯಾಗಳಲ್ಲಿ ಹೊಯ್ಸಳ ಪೊಲೀಸರು ಕರ್ತವ್ಯ ನಿರ್ವಹಿಸುವ ಕ್ರಮ ಕೈಗೊಳ್ಳಲಾಗುತ್ತಿದೆ. ಬೆಳಗ್ಗಿನ ಅವಧಿಯಲ್ಲಿ ಶಾಲಾ-ಕಾಲೇಜುಗಳ ಅಸುಪಾಸಿನಲ್ಲಿ, ಸಂಜೆ ವೇಳೆ ಪಾರ್ಕ್ ಬಳಿ, ರಾತ್ರಿ ಬಾರ್ ಅಂಡ್ ರೆಸ್ಟೋರೆಂಟ್ ಹಾಗೂ ವಸತಿ ಪ್ರದೇಶಗಳಲ್ಲಿ ಹೊಯ್ಸಳ ಗಸ್ತು ತಿರುಗಬೇಕೆಂದು ಸೂಚಿಸಲಾಗಿದೆ.
10 ನಿಮಿಷಕ್ಕಿಂತ ಹೆಚ್ಚು ಒಂದೇ ಕಡೆ ಇರುವಂತಿಲ್ಲ !
ತಮಗೆ ನೀಡಿರುವ ಏರಿಯಾಗಳಲ್ಲಿ ಸದಾ ಕಾಲ ಗಸ್ತು ತಿರುಗಬೇಕು. ತುರ್ತು ಸಂದರ್ಭ ಹೊರತುಪಡಿಸಿ 10 ನಿಮಿಷಕ್ಕಿಂತ ಒಂದೇ ಕಡೆ ಹೊಯ್ಸಳ ವಾಹನ ಇರುವಂತಿಲ್ಲ. ನೀಡಿರುವ ಬೀಟ್ನಲ್ಲಿ ಏನಾದರೂ ಅಪರಾಧ ಘಟನೆ ನಡೆದರೆ ಆಯಾ ಪೊಲೀಸರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು. ಏರಿಯಾದಲ್ಲಿ ನಡೆಯುವ ಕ್ರೈಂ ಸ್ಪಾಟ್ಗಳಲ್ಲಿ ನಿರಂತರ ಗಸ್ತು ಕಾಯಬೇಕು. ಸರಗಳ್ಳತನ, ಸುಲಿಗೆ, ಕಳ್ಳತನ ಪ್ರಕರಣಗಳಿಗೆ ಬೀಟ್ ಪೊಲೀಸರನ್ನೇ ಜವಾಬ್ದಾರಿ ಮಾಡುವ ಮಾರ್ಗಸೂಚಿ ಸಿದ್ಧಪಡಿಸಲಾಗುತ್ತಿದೆ ಎಂದು ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
The City Police Commissioner, Kamal Pant wanted to bring the old system back and monitor all the Hoysalas from the Command Centre. Therefore all the police beat vehicles will be strictly monitored so that they are not used for unofficial purposes.
17-05-25 01:44 pm
Bangalore Correspondent
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
16-05-25 04:45 pm
HK News Desk
ಮುಸ್ಲಿಂ ವ್ಯಕ್ತಿಗೆ ಕುರಾನ್ ಪ್ರಕಾರ ನಾಲ್ಕು ಮದುವೆ...
15-05-25 09:09 pm
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
17-05-25 01:01 pm
Mangalore Correspondent
CM Siddaramaiah, New Dc Office Mangalore Inau...
16-05-25 10:27 pm
Siddaramaiah, Cm Mangalore, BJP black flag: ಸ...
16-05-25 06:05 pm
Mangalore, Dinesh Gundurao: ಇಡಿ ದೇಶದಲ್ಲಿ ಅತೀ...
16-05-25 02:47 pm
Mangalore Cargo Ship, Lakshadweep: ಲಕ್ಷದ್ವೀಪಕ...
16-05-25 10:06 am
16-05-25 11:06 pm
Mangalore Correspondent
Belagavi Protest, Quran Burnt, Police, Crime:...
16-05-25 09:20 pm
Davanagere Crime, Gold Robbery: ಆನ್ಲೈನ್ ಗೇಮಿಂ...
15-05-25 11:06 pm
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm