ಬ್ರೇಕಿಂಗ್ ನ್ಯೂಸ್
24-07-21 11:07 pm Headline Karnataka News Network ಕರ್ನಾಟಕ
ಚಿತ್ರದುರ್ಗ, ಜುಲೈ 25: ತಾಕತ್ತಿದ್ದರೆ ದಲಿತ ಸಿಎಂ ಮಾಡಲಿ ಎಂದ ಸಿದ್ಧರಾಮಯ್ಯಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ತಿರುಗೇಟು ನೀಡಿದ್ದಾರೆ. ಅತಿ ಹೆಚ್ಚು ಅಂಬೇಡ್ಕರ್ ಗೆ ಅವಮಾನ ಮಾಡಿದ್ದು ಕಾಂಗ್ರೆಸ್ ಪಕ್ಷ. ಮೊದಲ ಸಚಿವ ಸಂಪುಟದಲ್ಲಿ ನೋವಾಗಿ ಅಂಬೇಡ್ಕರ್ ರಾಜೀನಾಮೆ ನೀಡಿದ್ದರು. ಬಳಿಕ ಲೋಕಸಭೆ ಚುನಾವಣೆಗೆ ನಿಂತಾಗ ಅಂಬೇಡ್ಕರ್ ಅವರನ್ನು ಕಾಂಗ್ರೆಸಿಗರೇ ಸೇರಿ ಸೋಲಿಸಿದರು. 2ನೇ ಬಾರಿ ಅವರ ಸಹಾಯಕನನ್ನೇ ಎದುರು ನಿಲ್ಲಿಸಿ ಸೋಲಿಸಿದರು. ಕೊನೆಗೆ ಎಷ್ಟು ಪೀಡಿಸಿದ್ದರು ಎಂದ್ರೆ ಅಂಬೇಡ್ಕರ್ ಅಂತ್ಯ ಸಂಸ್ಕಾರಕ್ಕೂ ಸರಕಾರ ಜಾಗ ಕೊಡಲಿಲ್ಲ. ಇಂಥವರು ದಲಿತ ಸಿಎಂ ಬಗ್ಗೆ ಬಿಜೆಪಿಗೆ ಹೇಳುವುದೇ.. ಕೊನೆಗೆ ಸಂವಿಧಾನ ಬರೆದವರಿಗೆ ಭಾರತ ರತ್ನವನ್ನೂ ಇವರು ಕೊಡಲಿಲ್ಲ, ಅಂಬೇಡ್ಕರ್ ಗೆ ಭಾರತ ರತ್ನ ಕೊಟ್ಟಿದ್ದು ಬಿಜೆಪಿ. ಕಾಂಗ್ರೆಸಿಗರು ದಲಿತ ನಾಯಕ ಜಗಜೀವನ್ ರಾಮ್ ಅವರನ್ನು ಅವಕಾಶ ಬಂದರೂ ಪ್ರಧಾನಿ ಮಾಡಲಿಲ್ಲ.
ಇದೇ ಸಿದ್ಧರಾಮಣ್ಣನ ದಲಿತ ವಿರೋಧಿ ಇತಿಹಾಸ ಹೇಳಬೇಕೆಂದರೆ ಕಾಂಗ್ರೆಸ್ ಗೆ ಬಂದು ಸಿಎಂ ಆಗಿದ್ದರು. ಪರಮೇಶ್ವರ್ ಗೆ ಡಿಸಿಎಂ ಮಾಡಲಿಲ್ಲ, ಬದಲಿಗೆ ತನ್ನ ಜಾಗಕ್ಕೆ ಅಡ್ಡಗಾಲು ಆಗುತ್ತಾರೆಂದು ಅವರನ್ನೇ ಚುನಾವಣೆಯಲ್ಲಿ ಸೋಲಿಸಿದರು. ಖರ್ಗೆ, ಚಂದ್ರಪ್ಪ, ದೃವನಾರಾಯಣ ಸೇರಿ ದಲಿತ ಮುಖಂಡರನ್ನು ಸೋಲಿಸಿದ್ದೇ ಸಿದ್ದರಾಮಯ್ಯ. ಈವತ್ತಿಗೂ ಖರ್ಗೆ, ಪರಮೇಶ್ವರ್ ಕಾಂಗ್ರೆಸ್ ಪಕ್ಷದಲ್ಲಿ ಮುಂದಕ್ಕೆ ಬರಲು ಬಿಡಲ್ಲ. ಬಿಜೆಪಿ ಕಡಿಮೆ ಸಮಯ ಅಧಿಕಾರ ನಡೆಸಿದ್ದರೂ ದಲಿತ, ಮುಸ್ಲಿಮರಿಗೆ ಹೆಚ್ಚು ಅವಕಾಶಗಳನ್ನು ಕೊಟ್ಟಿದೆ.
ಮುಸ್ಲಿಂ ಆಗಿದ್ದ ಅಬ್ದುಲ್ ಕಲಾಂರನ್ನು ರಾಷ್ಟ್ರಪತಿ ಮಾಡಿದ್ದು ಬಿಜೆಪಿ. ದಲಿತರಾದ ಕೋವಿಂದ್ ಅವರನ್ನು ಈ ಬಾರಿ ರಾಷ್ಟ್ರಪತಿ ಮಾಡಿದ್ದೇವೆ. ಅವರು ಕೇಳದೇ ಇದ್ದರೂ ಗೋವಿಂದ ಕಾರಜೋಳರನ್ನು ರಾಜ್ಯದಲ್ಲಿ ಡಿಸಿಎಂ ಮಾಡಿದ್ದೇವೆ. ಆನೇಕಲ್ ವಿಧಾನಸಭೆಯಲ್ಲಿ ಸೋತ ಎ.ನಾರಾಯಣಸ್ವಾಮಿ ಅವರನ್ನು ಚಿತ್ರದುರ್ಗದಲ್ಲಿ ಸಂಸದರನ್ನಾಗಿಸಿದ್ದೇವೆ. ಸಂಸದ ಎ.ನಾರಾಯಣಸ್ವಾಮಿಗೆ ಈ ಬಾರಿ ಮಂತ್ರಿಯನ್ನಾಗಿ ಮಾಡಿದ್ದೇವೆ ಎಂದು ಸಿದ್ದರಾಮಯ್ಯ ದಲಿತ ದಾಳಕ್ಕೆ ಕಟುವಾದ ಪ್ರತಿಕ್ರಿಯೆ ನೀಡಿದ್ದಾರೆ.
ಭ್ರಷ್ಟಾಚಾರದ ಬಗ್ಗೆ ಕೇಳಿದ ಪ್ರಶ್ನೆಗೆ, ಸಿದ್ಧರಾಮಯ್ಯ ಸರ್ಕಾರ ಮಾಡಿದಷ್ಟು ಭ್ರಷ್ಟಾಚಾರ ಯಾರು ಮಾಡಲು ಸಾಧ್ಯ. ಸಿದ್ಧರಾಮಣ್ಣ ಅರ್ಕಾವತಿ ಪ್ರಕರಣವನ್ನೇ ಮುಚ್ಚಿ ಹಾಕಿದ್ದಾರೆ. ತಮ್ಮದು ಹೊರಬರುತ್ತೆ ಅಂತ ಲೋಕಾಯುಕ್ತ ತೆಗೆದು ಎಸಿಬಿ ಮಾಡಿದ್ದೇ ಸಿದ್ದರಾಮಯ್ಯ ಸರಕಾರ ಎಂದರು ನಳಿನ್.
ನಮ್ಮಲ್ಲಿ ಮಿತ್ರ ಮಂಡಳಿ, ವಲಸಿಗ ಎಂಬ ಭೇದ ಸರಿಯಲ್ಲ. ಎಲ್ಲರೂ ಬಿಜೆಪಿಯಿಂದ ಶಾಸಕರಾಗಿದ್ದಾರೆ, ಪಕ್ಷವೇ ಒಂದು ಮಂಡಳಿ. ಯಡಿಯೂರಪ್ಪ ರಾಷ್ಟ್ರೀಯ ನಾಯಕರ ಸೂಚನೆ ಪಾಲಿಸುವುದಾಗಿ ಹೇಳಿದ್ದಾರೆ. ಮೇಲಿಂದ ಏನು ಸೂಚನೆ ಬರುತ್ತೋ ಅದನ್ನು ನಾವು ಪಾಲಿಸುತ್ತೇವೆ. ಸಿಎಂ ಈಗಾಗಲೇ ನೆರೆ ವೀಕ್ಷಣೆ, ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ. ಸಿಎಂ ಬದಲಾವಣೆ ಆಗುತ್ತೋ ಇಲ್ಲವೋ ಎಂಬುದನ್ನು ರಾಷ್ಟ್ರೀಯ ಅಧ್ಯಕ್ಷರು ಹೇಳುತ್ತಾರೆ ಎಂದು ನಳಿನ್ ಕುಮಾರ್ ಕಟೀಲು ಹೇಳಿದರು.
BJP President Nalin Kumar Kateel reacts in Chitradurga to Senior Congress leader Siddaramaiah's statement that Dalits should be made as CM of Karnataka.
11-02-25 03:40 pm
HK News Desk
NAACbribery case: ನ್ಯಾಕ್ ಮಾನ್ಯತೆಗಾಗಿ ಭ್ರಷ್ಟಾಚ...
11-02-25 02:21 pm
Mysuru stone pelting, Rahul Gandhi: ದೆಹಲಿ ಫಲಿ...
11-02-25 12:37 pm
Mandya suicide crime, Gym: ಗಂಡನ ಅನೈತಿಕ ಸಂಬಂಧಕ...
10-02-25 10:51 pm
BJ show cause notice, Yatnal; 'ಭಿನ್ನರ ಬಣ'ದ ನಾ...
10-02-25 10:19 pm
11-02-25 04:19 pm
HK News Desk
Wedding, Cibil Score: ಸಿಬಿಲ್ ಸ್ಕೋರ್ ಚೆನ್ನಾಗಿಲ...
10-02-25 05:48 pm
CBI arrest, Tirupati laddu: ತಿರುಪತಿ ಲಡ್ಡಿನಲ್ಲ...
10-02-25 02:13 pm
ಮೆಕ್ಸಿಕೋ ; ಟ್ರಕ್ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ...
09-02-25 09:32 pm
Delhi Election Results 2025, BJP Win; ದೆಹಲಿಯಲ...
08-02-25 02:23 pm
11-02-25 04:50 pm
Mangalore Correspondent
Mangalore, Brijesh Chowta, Wenlock hospital:...
10-02-25 11:09 pm
Drone, Puttur Konark Rai, Indian Army: ಆಕಾಶದಿ...
10-02-25 10:34 pm
Mangalore News, Wenlock hospital, operation:...
09-02-25 11:03 pm
ಸುಳ್ಯದಲ್ಲಿ ಬೈಕ್ ಅಪಘಾತ ; ತೀವ್ರ ಗಾಯಗೊಂಡಿದ್ದ ಕಂಕ...
09-02-25 10:31 pm
11-02-25 06:41 pm
HK News Desk
Mangalore Police, Crime: ಕೊಲೆ ಅಪರಾಧಿಗೆ ಆಶ್ರಯ...
09-02-25 07:35 pm
Bangalore, Udupi crime, Fraud: ಕ್ಯಾಸಿನೋ, ಬಿಟ್...
08-02-25 10:16 pm
ಕಲಬುರಗಿ | ಪರಸ್ತ್ರೀ ಜೊತೆ ಸುತ್ತಾಡುತ್ತಿದ್ದ ಪತಿಯ...
08-02-25 06:21 pm
Mangalore Mayor raid, slaughterhouse Kudroli:...
08-02-25 04:36 pm