ಕೊನೆಗೂ ಸ್ಥಾನ ತ್ಯಜಿಸಿದ ಮಹಾನಾಯಕ ; ಐದು ದಶಕದ ಪಯಣಕ್ಕೆ ಭಾವುಕ ಇತಿಶ್ರೀ !

26-07-21 12:12 pm       Headline Karnataka News Network   ಕರ್ನಾಟಕ

ರಾಜ್ಯ ಬಿಜೆಪಿಯನ್ನು ಸುದೀರ್ಘ ಕಾಲದಿಂದ ಕಟ್ಟಿ ಬೆಳೆಸಿದ್ದ, ಬಿಜೆಪಿ ಅಂದ್ರೆ ಯಡಿಯೂರಪ್ಪ ಅನ್ನುವಷ್ಟರ ಮಟ್ಟಿಗೆ ಧೀಮಂತ ನಾಯಕನಾಗಿ ಬೆಳೆದು ನಿಂತಿದ್ದ ಬಿ.ಎಸ್. ಯಡಿಯೂರಪ್ಪ ಕೊನೆಗೂ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

ಬೆಂಗಳೂರು, ಜುಲೈ 26: ರಾಜ್ಯ ಬಿಜೆಪಿಯನ್ನು ಸುದೀರ್ಘ ಕಾಲದಿಂದ ಕಟ್ಟಿ ಬೆಳೆಸಿದ್ದ, ಬಿಜೆಪಿ ಅಂದ್ರೆ ಯಡಿಯೂರಪ್ಪ ಅನ್ನುವಷ್ಟರ ಮಟ್ಟಿಗೆ ಧೀಮಂತ ನಾಯಕನಾಗಿ ಬೆಳೆದು ನಿಂತಿದ್ದ ಬಿ.ಎಸ್. ಯಡಿಯೂರಪ್ಪ ಕೊನೆಗೂ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ವಿಧಾನಸೌಧದಲ್ಲಿ ಗದ್ಗದಿತರಾಗುತ್ತಲೇ ಯಡಿಯೂರಪ್ಪ , ಹೈಕಮಾಂಡ್ ಸಂದೇಶದಂತೆಯೇ ನಿರ್ಗಮಿಸುತ್ತಿರುವುದಾಗಿ ಹೇಳಿಕೆ ನೀಡಿದ್ದಾರೆ.

75 ವರ್ಷದ ಬಳಿಕವೂ ಎರಡು ವರ್ಷ ಅಮಿತ್ ಷಾ, ಮೋದಿಯವರು ನನಗೆ ಸಿಎಂ ಆಗಲು ಅವಕಾಶ ನೀಡಿದ್ದಾರೆ. ಇದಕ್ಕಾಗಿ ಅವರಿಗೆ ಶಬ್ದಗಳಲ್ಲಿ ಅಭಿನಂದನೆ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಶಿಕಾರಿಪುರದಲ್ಲಿ ಏಳು ಬಾರಿ ಶಾಸಕನಾಗಿ ನನ್ನನ್ನು ಜನರು ಆಯ್ಕೆ ಮಾಡಿದ್ದಾರೆ. ಜನರೇ ನನ್ನನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ್ದಾರೆ. ಅವರಿಗೆ ಋಣಿಯಾಗಿದ್ದೇನೆ. ದುಃಖದಿಂದ ಅಲ್ಲ, ಸಂತೋಷದಿಂದಲೇ ನಿರ್ಗಮಿಸುತ್ತಿದ್ದೇನೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡುತ್ತಿದ್ದೇನೆ ಎನ್ನುತ್ತಲೇ ಗದ್ಗದಿತರಾಗಿದ್ದಾರೆ.  

ಭಾವುಕರಾಗಿಯೇ ಮಾತನಾಡಿದ ಯಡಿಯೂರಪ್ಪ, ಊಟವಾದ ಬಳಿಕ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ರಾಜಿನಾಮೆ ಪತ್ರ ನೀಡುತ್ತೇನೆ. ಎಲ್ಲರಿಗೂ ಆಭಾರಿಯಾಗಿದ್ದೇನೆ. ರಾಜ್ಯದಲ್ಲಿ ಪಕ್ಷವನ್ನು ಮತ್ತಷ್ಟು ಬಲಿಷ್ಠವಾಗಿ ಕಟ್ಟಬೇಕಾಗಿದೆ ಎಂದು ಹೇಳಿದರು.

ಜುಲೈ 26ಕ್ಕೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಪೂರೈಸುತ್ತಿರುವ ಸಂಭ್ರಮದ ನಡುವೆಯೇ ಮಹಾನಾಯಕನ ನಿರ್ಗಮನ ಆಗಿರುವುದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ. 1.3 ಕಿಮೀ ಉದ್ದಕ್ಕೆ ನಡೆದುಕೊಂಡೇ ತೆರಳಿ ರಾಜಿನಾಮೆ ನೀಡಲು ಮುಂದಾಗಿದ್ದಾರೆ. ಯಡಿಯೂರಪ್ಪ ಜೊತೆಗೆ ನೂರಾರು ಮಂದಿ ಕಾಲ್ನಡಿಗೆಯಲ್ಲಿ ತೆರಳಲಿದ್ದು, ರಾಜ್ಯಕ್ಕೆ ಮತ್ತೊಂದು ರೀತಿಯ ಸಂದೇಶ ನೀಡುತ್ತಲೇ ಯಡಿಯೂರಪ್ಪ ನಿರ್ಗಮಿಸುವುದಾಗಿ ಘೋಷಣೆ ಮಾಡಿದ್ದಾರೆ. 

After months of speculation, Karnataka Chief Minister BS Yediyurappa on Monday resigned from the top post. The towering Lingayat leader had on Sunday announced that he would take the decision on his future as Karnataka CM on July 26 when his government completed two years in the state.