ಆರ್ಥಿಕ, ಸಾಮಾಜಿಕ ಸವಾಲುಗಳನ್ನು ಎದುರಿಸಬೇಕಿದೆ; ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

28-07-21 02:52 pm       Oneindia Kannada   ಕರ್ನಾಟಕ

ಮುಖ್ಯಮಂತ್ರಿಯಾಗಿ ನನ್ನ ಎದುರು ಆರ್ಥಿಕ ಮತ್ತು ಸಾಮಾಜಿಕ ಸವಾಲುಗಳಿವೆ ಎಂದು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬೆಂಗಳೂರು, ಜು. 28: ಮುಖ್ಯಮಂತ್ರಿಯಾಗಿ ನನ್ನ ಎದುರು ಆರ್ಥಿಕ ಮತ್ತು ಸಾಮಾಜಿಕ ಸವಾಲುಗಳಿವೆ ಎಂದು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ವಿಧಾನಸೌಧಕ್ಕೆ ಆಗಮಿಸಿದದರು. ಅಲ್ಲಿ ಸಂಪುಟ ಸಭೆಗೂ ಮೊದಲು ಮಾತನಾಡಿದ್ದಾರೆ.

"ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೊರೊನಾ ವೈರಸ್ ಸೇರಿದಂತೆ ಹಲವು ಸಮಖಷ್ಟಗಳಿದ್ದಾಗ ನನ್ನನ್ನು ಸೇರಿಸಿಕೊಂಡು ಕೆಲಸ ಮಾಡಿದ್ದಾರೆ. ಹೀಗಾಗಿ ಮುಖ್ಯಮಂತ್ರಿಯಾಗಿ ಕೆಲಸ ಮಾಡಲು ಅದು ಸಹಾಯಕವಾಗಲಿದೆ" ಎಂದು ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

"ಈಗ ಸಚಿವ ಸಂಪುಟ ಸಭೆಯಲ್ಲಿ ಸದ್ಯದ ರಾಜ್ಯದ ಸ್ಥಿತಿಗತಿಗಳ ವಿವರ ಪಡೆಯುತ್ತೇನೆ. ಈಗಿನ ಹಣಕಾಸಿನ ಸ್ಥಿತಿ ನೋಡಿಕೊಂಡು ಹಲವು ನಿರ್ಧಾರಗಳನ್ನು ಮಾಡುತ್ತೇನೆ. ಆರ್ಥಿಕ, ಸಾಮಾಜಿಕ ಸವಾಲುಗಳಿರುವುದು ನಿಜ. ಆದರೆ ಈ ಸವಾಲುಗಳನ್ನು ಪಕ್ಷದ ಹಿರಿಯರ, ಎಲ್ಲರ ಮಾರ್ಗದರ್ಶನದಲ್ಲಿ ಅವರ ಸಲಹೆಗಳನ್ನು ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಎದುರಿಸುತ್ತೇನೆ. ನಾನು ಮುಖ್ಯಮಂತ್ರಿ ಮಾತ್ರವಲ್ಲ ಎಲ್ಲರೊಳಗೊಬ್ಬ ಎಂಬಂತೆ ಕೆಲಸ ಮಾಡುತ್ತೇನೆ" ಎಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. "ಇಂದು ದೆಹಲಿಗೆ ಹೋಗಿ ಪಕ್ಷದ ವರಿಷ್ಠರನ್ನು ಭೇಟಿ ಮಾಡುತ್ತೇನೆ. ರಾಜ್ಯದ ಸ್ಥಿತಿಗತಿಯ ಕುರಿತು ಅಧಿಕಾರಿಗಳೊಂದಿಗೆ ಸಭೆ ಮಾಡುತ್ತೇವೆ. ಎಲ್ಲರ ಸಹಕಾರದೊಂದಿಗೆ ಉತ್ತಮವಾಗಿ ಕೆಲಸ ಮಾಡುತ್ತೇನೆ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Lingayat leader Basavaraj Somappa Bommai took oath as the new Chief Minister of Karnataka on Wednesday. In the ceremony at the Glass House of the Karnataka Raj Bhavan in Bengaluru, Governor Thaawarchand Gehlot administered the oath of office and secrecy. Basavaraj Bommai later performed a puja at Vidhana Soudha before taking over the new Chief Minister’s office. After being sworn in, Basavaraj Bommai said that floods and Covid-19 are challenges that will be given priority. He further said that his government will work as a team to uplift the poor, farmers, and the health care system amid the pandemic. “I will keep up whatever faith and trust people of Karnataka have in me,” he added.