ಕಾಂಗ್ರೆಸ್ ಸೇರಿದ ಮಧು ಬಂಗಾರಪ್ಪ ; ಹತ್ತು ವರ್ಷ ಗಾಳ ಹಾಕಿ ಮೀನು ಬಿದ್ದಿದೆ ಎಂದ ಡಿಕೆಶಿ ! 

30-07-21 03:08 pm       Headline Karnataka News Network   ಕರ್ನಾಟಕ

ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಪುತ್ರ, ಜೆಡಿಎಸ್ ಪ್ರಭಾವಿ ಮುಖಂಡ ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.

Photo credits : Twitter/@rssurjewala

ಹುಬ್ಬಳ್ಳಿ, ಜುಲೈ 30: ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಪುತ್ರ, ಜೆಡಿಎಸ್ ಪ್ರಭಾವಿ ಮುಖಂಡ ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ನೇತೃತ್ವದಲ್ಲಿ ಪಕ್ಷದ ಬಾವುಟ ನೀಡುವ ಮೂಲಕ ಸೇರ್ಪಡೆ ಮಾಡಿಕೊಂಡಿದ್ದಾರೆ.‌ 

ಮಧು ಬಂಗಾರಪ್ಪ ಜೊತೆ ಹಲವಾರು ಮಂದಿ ಜೆಡಿಎಸ್ ಮುಖಂಡರು ಕೈ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ, ಸತೀಶ್ ಜಾರಕಿಹೊಳಿ, ಸಲೀಮ್ ಅಹ್ಮದ್, ಈಶ್ವರ್ ಖಂಡ್ರೆ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು. 

ಕಾರ್ಯಕ್ರಮದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ನಾನು ಬಂಗಾರಪ್ಪನವರ ಗರಡಿಯಲ್ಲೇ ಬೆಳೆದವನು. ಸುಮಾರು ಹತ್ತು ವರ್ಷಗಳಿಂದ ಗಾಳ ಹಾಕಿ ಈಗ ಮೀನು ಬಿದ್ದಿದೆ.‌ ಬಹಳ ದಿನದ ನಂತರ ಬಲೆ ಹಾಕಿ ಮಧು ಬಂಗಾರಪ್ಪ ಅವರನ್ನ ಪಕ್ಷಕ್ಕೆ ಎಳೆದುಕೊಂಡು ಬರಲಾಗಿದೆ. ಮೊದಲೇ ಬಂದಿದ್ದರೆ ಈಗಾಗಲೇ ಮಧು ಮಾಜಿ ಸಚಿವರಾಗ್ತಿದ್ರು. ನನ್ನ ರಾಜಕೀಯ ಗುರುಗಳ ಮಗನನ್ನ ನನ್ನ ಅಧ್ಯಕ್ಷತೆಯಲ್ಲಿ ಕರೆದುಕೊಂಡು ಬಂದಿದ್ದೇನೆ.‌ ಇವರನ್ನ ಕರೆತಂದಿದ್ದು ನನ್ನ ಭಾಗ್ಯ ಎಂದು ಹೇಳಿದರು. 

ಇವತ್ತು ಕಾಂಗ್ರೆಸ್ ಪಕ್ಷಕ್ಕೆ ಬಹಳಷ್ಟು ಜನ ಸೇರ್ಪಡೆಯಾಗ್ತಿದ್ದಾರೆ. ನಾವು ಮಧು ಬಂಗಾರಪ್ಪ ಅವರನ್ನ ವ್ಯಕ್ತಿಯಾಗಿ ಸೇರಿಸಿಕೊಳ್ಳುತ್ತಿಲ್ಲ.‌ ಒಂದು ಶಕ್ತಿಯಾಗಿ ಕಾಂಗ್ರೆಸ್ ಗೆ  ಸೇರ್ಪಡೆ ಮಾಡಿಕೊಳ್ಳುತ್ತಿದ್ದೇವೆ ಎಂದರು ಡಿಕೆಶಿ. 

ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಮಾತನಾಡಿ, ಶಿವಮೊಗ್ಗದಲ್ಲಿ ಬೃಹತ್ ಸಮಾವೇಶ ಮಾಡಿ ಸೇರ್ಪಡೆ ಮಾಡಿಕೊಳ್ಳುವ ಆಸೆ ಇತ್ತು.‌ ಆದ್ರೆ ಕೋವಿಡ್ ಕಾರಣಕ್ಕಾಗಿ ಇದು ಸಾಧ್ಯವಾಗಲಿಲ್ಲ. ಬಂಗಾರಪ್ಪನವರು  ಇಂದಿರಾಗಾಂಧಿ, ರಾಜೀವ್ ಗಾಂಧಿ ಕುಟುಂಬದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಆ ಸಂಬಂಧವನ್ನು ಮಧು ಬಂಗಾರಪ್ಪ ಮುಂದುವರೆಸಿಕೊಂಡು ಹೋಗಲಿದ್ದಾರೆ. ಬಂಗಾರಪ್ಪನವರ ಕೊಡುಗೆಯನ್ನು ಕಾಂಗ್ರೆಸ್ ಪಕ್ಷ ಯಾವತ್ತೂ ಮರೆಯುವುದಿಲ್ಲ. ಬಂಗಾರಪ್ಪ ಅವರು ಕಾಂಗ್ರೆಸ್ ಪಕ್ಷದೊಂದಿಗೆ ಕಡಿದುಕೊಂಡಿದ್ದ ಸಂಪರ್ಕವನ್ನು ಮಧು ಬಂಗಾರಪ್ಪ ಸೇತುವೆಯಾಗಿ ಮತ್ತೆ ಜೋಡಿಸಿದ್ದಾರೆ ಎಂದು ಹೇಳಿದರು.

Former MLA and former president of JD(S) youth wing Madhu Bangarappa joins Congress party in Hubballi today.DHNS, JUL 30 2021, 11:20 ISTUPDATED: JUL 30 2021, 11:20 IST Madhu is the son of former chief minister the late S Bangarappa and he was elected as legislator from Sorab once.