ಬ್ರೇಕಿಂಗ್ ನ್ಯೂಸ್
30-07-21 03:24 pm Headline Karnataka News Network ಕರ್ನಾಟಕ
ವಿಜಯಪುರ, ಜುಲೈ 30: ಯಡಿಯೂರಪ್ಪನವರು ಹೇಳಿದ್ದೇ ಎಲ್ಲವೂ ಆಗೋದಿಲ್ಲ. ಅವರು ಹೇಳಿದ್ದೇ ಆಗೋದಿದ್ರೆ ಅವರನ್ನು ತೆಗೆಯುವ ಅವಶ್ಯಕತೆಯೂ ಇರಲಿಲ್ಲ. ಆದರೆ ಬಿಎಸ್ ವೈ ಅವರು ಹೇಳಿದವರನ್ನೇ ಮುಖ್ಯಮಂತ್ರಿ ಮಾಡಿದ್ದಾರೆ ಅನ್ನೋದು ಸತ್ಯ. ಪ್ರಾಣ ಹೋದರೂ ಪರವಾಗಿಲ್ಲ, ಯತ್ನಾಳನನ್ನು ಸಿಎಂ ಮಾಡಬಾರದು ಎಂದು ಬಿಎಸ್ವೈ ಕಂಡೀಷನ್ ಹಾಕಿದ್ದರು. ಹಾಗಾಗಿ ಯತ್ನಾಳ ಸಿಎಂ ಆಗಿಲ್ಲ. ಹೀಗೆಂದು ಹೊಸತಾದ ರಾಗವನ್ನು ಬಿಜೆಪಿಯಲ್ಲಿ ರೆಬೆಲ್ ಅಂತಲೇ ಗುರುತಿಸ್ಕೊಂಡಿರುವ ಬಸನಗೌಡ ಪಾಟೀಲ್ ಯತ್ನಾಳ ಹೇಳಿಕೊಂಡಿದ್ದಾರೆ.
ಈಗ ಸಿಎಂ ಏನೋ ಬದಲಾವಣೆ ಆಗಿದೆ. ಹೊಸ ಸರಕಾರದಲ್ಲಿ ಒಳ್ಳೆಯ ಮಂತ್ರಿಗಳನ್ನು, ಪ್ರಾಮಾಣಿಕರನ್ನು, ಹಿಂದುತ್ವ ಉಳ್ಳವರನ್ನು, ಮುಂದಿನ ದಿನಗಳಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಶಕ್ತಿಯುಳ್ಳವರನ್ನು ಮಂತ್ರಿ ಮಾಡಬೇಕು. ಮಂತ್ರಿಗಿರಿಗಾಗಿ ಯಾರು ಕೂಡ ದೆಹಲಿಗೆ ಹೋಗಿ ಲಾಬಿ ಮಾಡುವ ಅವಶ್ಯಕತೆ ಇಲ್ಲ. ನನಗೆ ಹೈಕಮಾಂಡ್ ಮೇಲೆ ವಿಶ್ವಾಸವಿದೆ.
ಇಡೀ ಸಚಿವ ಸಂಪುಟದಲ್ಲಿ ನಿಷ್ಠಾವಂತರು, ಪಕ್ಷದ ಕಾರ್ಯಕರ್ತರು, ಬಿಜೆಪಿ ಕಟ್ಟಿ ಬೆಳೆಸಿದವರು, ಹಿಂದುತ್ವ ಉಳ್ಳವರಿಗೆ ಸ್ಥಾನ ನೀಡಬೇಕು ಎಂದು ನನ್ನ ಆಗ್ರಹವಿದೆ. ಸಚಿವ ಸಂಪುಟದಲ್ಲಿ ವಿಜಯಪುರ ಜಿಲ್ಲೆಯನ್ನು ಕಡೆಗಣಿಸಿದ್ರೆ ಮುಂದಿನ ದಿನಗಳಲ್ಲಿ ಅದರ ಗಂಭೀರ ಪರಿಣಾಮ ಆಗುತ್ತದೆ ಎಂದು ಹೇಳಿದರು.
ಪಂಚಮಸಾಲಿ ಹೋರಾಟದಿಂದಾಗಿ ಯತ್ನಾಳ ಹಾಗೂ ನಿರಾಣಿಗೆ ಹಿನ್ನೆಡೆ ಆಯ್ತಾ ಎಂಬ ಬಗ್ಗೆ ಕೇಳಿದ ಪ್ರಶ್ನೆಗೆ, ಜಾತಿಗೂ ಇದಕ್ಕೂ ಸಂಬಂಧವಿಲ್ಲ, ಅವರವರ ಜನಪ್ರಿಯತೆ, ಅನುಭವದ ಮೇಲೆ ಅಳೆಯಬೇಕು. ಅನುಭವ ಇಲ್ಲದವರನ್ನು ತಂದು ಏನೋ ಮಾಡಿದ್ರೆ ಪಕ್ಷ ಮುಂದಿನ ದಿನಗಳಲ್ಲಿ ಅದರ ಪರಿಣಾಮ ಎದುರಿಸಬೇಕಾಗುತ್ತದೆ. ಯತ್ನಾಳನನ್ನು ಮುಗಿಸಬೇಕು ಎಂದು ಯಾವನೋ ಅನನುಭವಿಯನ್ನು ತಂದ್ರೆ ಆಗುತ್ತಾ? ಯತ್ನಾಳಗೆ ಇರುವಂತಹ ಸಿನಿಯಾರಿಟಿ ಯಾರಿಗಾದರೂ ಇದೆಯಾ ಬಿಜೆಪಿಯಲ್ಲಿ? ಅನಂತಕುಮಾರ, ಯಡಿಯೂರಪ್ಪ, ಈಶ್ವರಪ್ಪ ಬಿಟ್ಟರೆ ಬೇರೆ ಯಾರಿದ್ದಾರೆ? ನಾವು ವಾಜಪೇಯಿ ಸರ್ಕಾರದಲ್ಲಿ ಮಂತ್ರಿಯಾದವರು, ಐದು ಬಾರಿ ಆರಿಸಿ ಬಂದವರು ಎಂದು ಸಮರ್ಥಿಸಿಕೊಂಡರು.
ಯತ್ನಾಳ ಬಿಜೆಪಿ ಬಿಟ್ಟು ಹೋಗಿದ್ದರು ಎಂಬ ವಿಚಾರದ ಬಗ್ಗೆ ಕೆದಕಿದ್ದಕ್ಕೆ, ಏಯ್ ಯಡಿಯೂರಪ್ಪ ಪಕ್ಷ ಬಿಟ್ಟು ಹೋಗಿರಲಿಲ್ಲವಾ? ಈಗ ಸಿಎಂ ಆಗಿರುವ ಬೊಮ್ಮಾಯಿ ಮೂಲ ಬಿಜೆಪಿಗರಾ? ಅಥವಾ ಆರ್ ಎಸ್ ಎಸ್ ನಲ್ಲಿ ಧ್ವಜ ಪ್ರಣಾಮ ಮಾಡಿದ್ದರಾ? ಅದೆಲ್ಲಾ ನೆಪಮಾತ್ರ, ನೆಪದಿಂದ ಏನೂ ಅಗೋದಿಲ್ಲ. ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕಾದರೆ, ಹಿಂದುತ್ವ ಉಳಿಯಬೇಕಾದರೆ, ನಿಷ್ಠಾವಂತರು ಉಳಿಯಬೇಕಾದರೆ ಪಕ್ಷ ಸೂಕ್ತ ನಿರ್ಣಯ ತೆಗೆದುಕೊಳ್ಳಬೇಕು ಎಂದು ಹೇಳಿದರು.
ದುರ್ದೈವವೆಂದರೆ ಮಠಾಧೀಶರನ್ನು ಹಿಡಿದು ಮಂತ್ರಿಯಾಗಬೇಕಾದ ಪರಿಸ್ಥಿತಿ ಹಿರಿಯ ಶಾಸಕರಿಗೂ ಬಂದಿದೆ. ಬಿಜೆಪಿಯಲ್ಲಿ ಹೈಕಮಾಂಡ್ ಎಂಬುದೇ ಇಲ್ಲವಾ? ಹಾಗಾದ್ರೆ ಹೈಕಮಾಂಡ್ ಯಾಕೆ ಬೇಕು, ದೆಹಲಿಗೆ ಯಾಕೆ ಹೋಗಬೇಕು ಚಿತ್ರದುರ್ಗ ಸ್ವಾಮೀಜಿ ಸೇರಿದಂತೆ ಮಠಾಧೀಶರ ಬಳಿ ಹೋದರೆ ಸಾಕು. ದಿಂಗಾಲೇಶ್ವರ ಸ್ವಾಮೀಜಿ ಮಠದಲ್ಲಿ ಕುಳಿತು ಬಿಜೆಪಿ ನಾಶವಾಗ್ತದೆ ಎಂದು ಹೇಳ್ತಾರೆ. ಮಠದಲ್ಲಿ ಕುಳಿತು ಧರ್ಮ ಬೋಧನೆ ಮಾಡಬೇಕು, ಲವ್ ಜಿಹಾದ, ಗೋ ಹತ್ಯೆ ಬಗ್ಗೆ ಮಾತಾಡಬೇಕು. ಸಮಾನ ನಾಗರಿಕತೆಗಾಗಿ, ಎರಡು ಮಕ್ಕಳು ಇದ್ದವರಿಗೆ ಸಬ್ಸಿಡಿ ಕೊಡುವ ಪರವಾಗಿ, ಅರಮನೆ ಮೈದಾನದಲ್ಲಿ ಮಠಾಧೀಶರು ಹೋರಾಟ ಮಾಡಲಿ.
ಕೆಲವು ಮಠಾಧೀಶರು ಯಡಿಯೂರಪ್ಪನವರ ಚೇಲಾಗಳಾಗಿ ಕೆಲಸ ಮಾಡ್ತೀರಾ? ಯಡಿಯೂರಪ್ಪ ಅವರ ಮನೆಯಲ್ಲಿ ಹತ್ತು ಸಾವಿರ ರೂಪಾಯಿ ಪ್ಯಾಕೇಟ್ ನಲ್ಲಿ ಹಾಕಿ ಕೊಟ್ಟರು. ಅದರಲ್ಲಿ ಎರಡು ಸಾವಿರ ಒಬ್ಬ ಲೀಡರ್ ಕತ್ತರಿಸಿದ, ಇನ್ನೊಬ್ಬ ಸ್ವಾಮೀ ಅದನ್ನು ಹಂಚುತ್ತೇನೆ ಎಂದು ಎರಡು ಸಾವಿರ ಕತ್ತರಿಸಿದ. ಮಠಾಧೀಶರಿಗೆ ಹೋಗಿದ್ದು ಆರು ಸಾವಿರ ರೂಪಾಯಿ. ಕತ್ತರಿಸುವ ಕಂಪನಿಯೇ ನಿಗಮ ಮಂಡಳಿ ಅಧ್ಯಕ್ಷರಾಗಿದ್ದಾರೆ.
ಯಡಿಯೂರಪ್ಪನವರ ಚಾಕರಿ ಮಾಡೋರು, ವಿಜಯೇಂದ್ರ ರಾತ್ರಿ ವ್ಯವಸ್ಥೆ ಮಾಡೋರು, ಬಿಜೆಪಿ ಕಟ್ಟದವರು ಇವತ್ತು ನಿಗಮ ಮಂಡಳಿ ಅಧ್ಯಕ್ಷರಾಗಿದ್ದಾರೆ. ಇದೇ ರೀತಿ ಮುಂದುವರೆದರೆ ನಾವೇ ಕಾಂಗ್ರೆಸ್ ಗೆ ತಾಂಬೂಲ ಕೊಟ್ಟು ಮುಖ್ಯಮಂತ್ರಿ ಆಗಬನ್ನಿ ಎನ್ನುವ ಅನಿವಾರ್ಯ ಪರಿಸ್ಥಿತಿ ಉಂಟಾಗಲಿದೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಮತ್ತೆ ಕ್ಯಾತೆ ಎತ್ತಿದ್ದಾರೆ.
BJP MLA Basanagouda Patil Yatnal, who had raised the banner of revolt against former chief minister B. S. Yediyurappa, said the change of guard was a message by the party high command that it will not tolerate nepotism and corruption.“The BJP has taken a big decision by effecting a change of guard. It is not a simple thing to change the chief minister.
16-05-25 10:04 am
Bangalore Correspondent
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
16-05-25 04:45 pm
HK News Desk
ಮುಸ್ಲಿಂ ವ್ಯಕ್ತಿಗೆ ಕುರಾನ್ ಪ್ರಕಾರ ನಾಲ್ಕು ಮದುವೆ...
15-05-25 09:09 pm
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
16-05-25 10:27 pm
Mangalore Correspondent
Siddaramaiah, Cm Mangalore, BJP black flag: ಸ...
16-05-25 06:05 pm
Mangalore, Dinesh Gundurao: ಇಡಿ ದೇಶದಲ್ಲಿ ಅತೀ...
16-05-25 02:47 pm
Mangalore Cargo Ship, Lakshadweep: ಲಕ್ಷದ್ವೀಪಕ...
16-05-25 10:06 am
Capt Brijesh Chowta, Mangalore Mp, CM Siddara...
15-05-25 08:04 pm
16-05-25 11:06 pm
Mangalore Correspondent
Belagavi Protest, Quran Burnt, Police, Crime:...
16-05-25 09:20 pm
Davanagere Crime, Gold Robbery: ಆನ್ಲೈನ್ ಗೇಮಿಂ...
15-05-25 11:06 pm
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm