ಸಕಲೇಶಪುರದಲ್ಲಿ ಅಮಾನುಷ ಕೃತ್ಯ ; 60ಕ್ಕೂ ಹೆಚ್ಚು ಮಂಗಗಳಿಗೆ ವಿಷವುಣಿಸಿ ಹತ್ಯೆ!

30-07-21 04:22 pm       Headline Karnataka News Network   ಕರ್ನಾಟಕ

ಸಕಲೇಶಪುರ ತಾಲೂಕಿನ ಚೌಡನಹಳ್ಳಿ ಮತ್ತು ಬೇಗೂರು ಗ್ರಾಮದಲ್ಲಿ ಮಂಗಗಳಿಗೆ ವಿಷವುಣಿಸಿ, 60ಕ್ಕೂ ಹೆಚ್ಚು ಮಂಗಗಳನ್ನು ಸಾಯಿಸಿದ ಹೇಯ ಕೃತ್ಯ ಬೆಳಕಿಗೆ ಬಂದಿದ್ದು ಘಟನೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ಕೇಳಿಬಂದಿದೆ.

ಹಾಸನ, ಜುಲೈ 30: ಸಕಲೇಶಪುರ ತಾಲೂಕಿನ ಚೌಡನಹಳ್ಳಿ ಮತ್ತು ಬೇಗೂರು ಗ್ರಾಮದಲ್ಲಿ ಮಂಗಗಳಿಗೆ ವಿಷವುಣಿಸಿ, 60ಕ್ಕೂ ಹೆಚ್ಚು ಮಂಗಗಳನ್ನು ಸಾಯಿಸಿದ ಹೇಯ ಕೃತ್ಯ ಬೆಳಕಿಗೆ ಬಂದಿದ್ದು ಘಟನೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ಕೇಳಿಬಂದಿದೆ.

ಬೇಗೂರು ಅರಣ್ಯ ವ್ಯಾಪ್ತಿಯಲ್ಲಿ ಮತ್ತು ಚೌಡನಹಳ್ಳಿ ಗ್ರಾಮದ ಹಲವೆಡೆ ಮಂಗಗಳನ್ನು ಚೀಲದಲ್ಲಿ ಕಟ್ಟಿ ಬಿಸಾಕಲಾಗಿತ್ತು. ಅದರಲ್ಲಿ 60ಕ್ಕೂ ಹೆಚ್ಚು ಮಂಗಗಳು ಸಾವನ್ನಪ್ಪಿದ್ದವು. 20ಕ್ಕೂ ಹೆಚ್ಚು ಮಂಗಗಳು ಅರೆ ಜೀವದ ಸ್ಥಿತಿಯಲ್ಲಿದ್ದು, ಉಸಿರಾಡುತ್ತಿದ್ದವು. ಅವುಗಳಿಗೆ ಚೀಲದಲ್ಲಿ ಹಾಕಿ ಹೊರಭಾಗದಿಂದ ಬೆತ್ತದಲ್ಲಿ ಏಟು ಕೊಟ್ಟ ರೀತಿ ಕಾಣುತ್ತಿದ್ದವು. ಇದನ್ನು ಗಮನಿಸಿದ ಗ್ರಾಮಸ್ಥರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಪೊಲೀಸರು ಮತ್ತು ಅರಣ್ಯಾಧಿಕಾರಿಗಳು ಬಂದು ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿದ್ದಾರೆ.  

ಘಟನೆಯ ವಿಡಿಯೋ ವೈರಲ್ ಆಗಿದ್ದು, ಬಾಲಿವುಡ್ ನಟ ರಣದೀಪ್ ಹೂಡಾ ಈ ವಿಡಿಯೋವನ್ನು ತನ್ನ ಟ್ವಿಟರ್ ನಲ್ಲಿ ಹಾಕ್ಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದು ಅತ್ಯಂತ ಹೇಯವಾದ ಘಟನೆ. 60ಕ್ಕೂ ಹೆಚ್ಚು ಮಂಗಗಳಿಗೆ ವಿಷವುಣಿಸಿ ಕೊಂದಿದ್ದು ಅಮಾನುಷ ಕೃತ್ಯ. ಮಂಗಗಳನ್ನು ಕೊಂದು ಸಕಲೇಶಪುರದ ಬೇಗೂರು ವ್ಯಾಪ್ತಿಯಲ್ಲಿ ಬಿಸಾಕಿದ್ದಾರೆ. ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ, ವಿಡಿಯೋವನ್ನು ಕರ್ನಾಟಕ ಮುಖ್ಯಮಂತ್ರಿ ಮತ್ತು ಅರಣ್ಯ ಇಲಾಖೆಗೆ ಟ್ಯಾಗ್ ಮಾಡಿದ್ದಾರೆ. 

Unidentified persons allegedly poisoned a group of Bonnet Macaques (monkeys), a species of Macaque endemic to south India, killing 38 of them, while one managed to survive the brutality after a forest veterinarian administered treatment to it under their care. In addition to poisoning Bonnet Macaques, unidentified persons had tied them in a gunny bag and beaten them, causing severe physical injuries, leading to their deaths. Their carcasses were found at a road junction at Chowdenahalli in Arehali hobli of Belur taluk in Karnataka’s Hassan district