ಕರುನಾಡಿಗೆ ಕೇರಳ ಕಂಟಕ ; ಸಿಲಿಕನ್ ಸಿಟಿಯಲ್ಲಿ ಮತ್ತೆ ಕೊರೊನಾ ಅಬ್ಬರ !

01-08-21 02:41 pm       Bengaluru Correspondent   ಕರ್ನಾಟಕ

ಹೊಸ ಕೋವಿಡ್ ಪ್ರಕರಣಗಳ ಏರಿಳಿತ ಆತಂಕಕ್ಕೆ ಕಾರಣವಾಗಿದೆ. ಶನಿವಾರ 450 ಹೊಸ ಪ್ರಕರಣಗಳು ನಗರದಲ್ಲಿ ದಾಖಲಾಗಿದ್ದು, ನಗರದಲ್ಲಿ 11 ಜನರು ಮೃತಪಟ್ಟಿದ್ದಾರೆ.

ಬೆಂಗಳೂರು, ಆಗಸ್ಟ್ 01: ಬೆಂಗಳೂರು ನಗರದಲ್ಲಿನ ಹೊಸ ಕೋವಿಡ್ ಪ್ರಕರಣಗಳ ಏರಿಳಿತ ಆತಂಕಕ್ಕೆ ಕಾರಣವಾಗಿದೆ. ಶನಿವಾರ 450 ಹೊಸ ಪ್ರಕರಣಗಳು ನಗರದಲ್ಲಿ ದಾಖಲಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 8529ಕ್ಕೆ ಏರಿಕೆಯಾಗಿದೆ. ನಗರದಲ್ಲಿ 11 ಜನರು ಮೃತಪಟ್ಟಿದ್ದಾರೆ.

ಪ್ರಸ್ತುತ ಬೆಂಗಳೂರು ನಗರದ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 1227339. ಇದುವರೆಗೂ ನಗರದಲ್ಲಿ 1202937 ಜನರು ಡಿಸ್ಚಾರ್ಜ್ ಆಗಿದ್ದಾರೆ. 15,872 ಜನರು ಮೃತಪಟ್ಟಿದ್ದಾರೆ. ಹೊಸ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಬಿಬಿಎಂಪಿ ತಲೆ ನೋವಿಗೆ ಕಾರಣವಾಗಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ಗೌರವ್ ಗುಪ್ತ ಈ ಕುರಿತು ಮಾತನಾಡಿದ್ದಾರೆ, "ಕೆಲವು ಬಡಾವಣೆಗಳಲ್ಲಿ, ಪ್ರದೇಶಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅಧಿಕಾರಿಗಳಿಗೆ ಹೊಸ ಪ್ರಕರಣಗಳ ಪ್ರಯಾಣದ ಮಾಹಿತಿ ಸಂಗ್ರಹ ಮಾಡುವಂತೆ ಸೂಚನೆ ನೀಡಲಾಗಿದೆ" ಎಂದು ಹೇಳಿದ್ದಾರೆ.

ಬೆಂಗಳೂರು ನಗರದಲ್ಲಿ ಕೋವಿಡ್ ಹರಡುವಿಕೆ ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಬಿಬಿಎಂಪಿಗೆ ಸರ್ಕಾರ ಸಂಪೂರ್ಣ ಅಧಿಕಾರ ನೀಡಿದೆ. ಕೋವಿಡ್ ಸೋಂಕು ತಗುಲಿದ ವ್ಯಕ್ತಿಯ ಸಂಪರ್ಕದಲ್ಲಿದ್ದ 10-15 ಜನರನ್ನು ತಪಾಸಣೆ ಮಾಡಲಾಗುತ್ತಿತ್ತು. ಈಗ 20 ಜನರನ್ನು ತಪಾಸಣೆಗೆ ಒಳಪಡಿಸಲು ಬಿಬಿಎಂಪಿ ತೀರ್ಮಾನಿಸಿದೆ.

5 ದಿನದ ಹೊಸ, ಸಕ್ರಿಯ ಪ್ರಕರಣಗಳು ಬೆಂಗಳೂರು ನಗರದಲ್ಲಿ ಜುಲೈ 31ರ ಶನಿವಾರ 450 ಹೊಸ ಪ್ರಕರಣ ದಾಖಲಾಗಿದೆ, ಸಕ್ರಿಯ ಪ್ರಕರಣ 8,529 ಆಗಿದೆ. ಜುಲೈ 30ರ ಶುಕ್ರವಾರ 426 ಹೊಸ ಪ್ರಕರಣ, 8,467 ಸಕ್ರಿಯ ಪ್ರಕರಣವಿತ್ತು. ಜುಲೈ 27ರಂದು 354 ಹೊಸ ಪ್ರಕರಣ, 8,047 ಸಕ್ರಿಯ ಪ್ರಕರಣ ಪತ್ತೆಯಾಗಿತ್ತು. ಜುಲೈ 28ರಂದು 376 ಹೊಸ ಪ್ರಕರಣ, 8,176 ಸಕ್ರಿಯ ಪ್ರಕರಣ ದಾಖಲಾಗಿತ್ತು. ಜುಲೈ 29ರಂದು 506 ಹೊಸ ಪ್ರಕರಣ 8416 ಸಕ್ರಿಯ ಪ್ರಕರಣ ಪತ್ತೆಯಾಗಿತ್ತು.

ಪಕ್ಕದ ರಾಜ್ಯ ತಂದ ಆತಂಕ;

ಪಕ್ಕದ ರಾಜ್ಯ ತಂದ ಆತಂಕ ಕರ್ನಾಟಕದಲ್ಲಿ ಅನ್‌ಲಾಕ್ ಜಾರಿಗೆ ಬಂದು ಜನಜೀವನ ಸಹಜ ಸ್ಥಿತಿಗೆ ಮರಳುತ್ತಿರುವಾಗಲೇ ಅಕ್ಕ-ಪಕ್ಕದ ರಾಜ್ಯಗಳಿಂದ ಆತಂಕ ಉಂಟಾಗಿದೆ. ಅದರದಲ್ಲೂ ಕೇರಳದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಕೇರಳದಿಂದ ಬೆಂಗಳೂರು ನಗರಕ್ಕೆ ಬರುವ ಜನರ ಸಂಖ್ಯೆಯೂ ಹೆಚ್ಚು. ಆದ್ದರಿಂದ ಬಿಬಿಎಂಪಿ ನಗರದಲ್ಲಿ ಕೋವಿಡ್ ಸೋಂಕು ಮತ್ತೆ ಹರಡದಂತೆ ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಅಂತರರಾಜ್ಯ ಪ್ರಯಾಣಿಕರ ಮೇಲೆ ಸಹ ಹಲವಾರು ನಿರ್ಬಂಧಗಳನ್ನು ಹೇರಲಾಗಿದೆ.

ರಸ್ತೆಗಳು ಬಂದ್ ಆಗುವ ಸಾಧ್ಯತೆ:

ಬೆಂಗಳೂರು ನಗರದಲ್ಲಿ ಒಂದು ಮನೆ ಅಥವ ಒಂದೇ ಪ್ರದೇಶದಲ್ಲಿ 10 ಅಥವ ಅದಕ್ಕಿಂತ ಹೆಚ್ಚು ಕೋವಿಡ್ ಪ್ರಕರಣ ಪತ್ತೆಯಾದರೆ ರಸ್ತೆಯನ್ನು ಬ್ಯಾರಿಕೇಡ್ ಹಾಕಿ ಸೀಲ್ ಡೌನ್ ಮಾಡುವ ಸಾಧ್ಯತೆ ಇದೆ. ಇಡೀ ರಸ್ತೆಯನ್ನು ಸೀಲ್ ಡೌನ್ ಮಾಡಿ ಬೇರೆ ಪ್ರದೇಶಕ್ಕೆ ಸೋಂಕು ಹರಡದಂತೆ ತಡೆಯಲಾಗುತ್ತದೆ ಮತ್ತು ಈ ಪ್ರದೇಶಕ್ಕೆ ಬಿಬಿಎಂಪಿಯೇ ಅಗತ್ಯ ವಸ್ತು ಸರಬರಾಜು ಮಾಡುವ ಸಾಧ್ಯತೆ ಇದೆ.

Bangalore witnesses Sudden spike in daily Covid cases after Kerala, govt plans for lockdown. Many Bengaluru apartment complexes have been declared as micro containment zones. Bengaluru has 108 active micro containment zones according to Bruhat Bengaluru Mahanagara Palike (BBMP) records as on July 31. The number of micro containment zones in the city surged from 44 on July 1 to 108 in a month. Mahadevapura zone has 34 micro containment zones followed by 28 in Bommanahalli, 19 in East, eight in RR Nagar, while Yelahanka, South, Dasarahalli and West zones in total reported 19 active micro containment zones. An armed police training centre, airforce training centre in Yelahanka and West zones of the city have also been identified as containment zones.