ಜಮೀರ್​ ಮನೆ ಮೇಲೆ ಐಟಿ ದಾಳಿ ಬೆನ್ನಲ್ಲೇ ಇಡಿ ಎಂಟ್ರಿ ; ಮನ್ಸೂರ್ ಖಾನ್ ಜೊತೆ ಜಮೀರ್ ಕೋಟಿ ಕೋಟಿ ವ್ಯವಹಾರ

05-08-21 01:06 pm       Headline Karnataka News Network   ಕರ್ನಾಟಕ

ಜಮೀರ್ ಅಹ್ಮದ್​ಗೆ ಇಂದು ಎರಡೆರಡು ಶಾಕ್​ಗಳು ಎದುರಾಗಿವೆ. ಐಟಿ ಅಧಿಕಾರಿಗಳು ಜಮೀರ್​ ಅಹ್ಮದ್​ ಖಾನ್​ ನಿವಾಸದ ಮೇಲೆ ದಾಳಿ ನಡೆಸಿದ್ದರು. ಇದರ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಬೆಂಗಳೂರು, ಆ.05:  ಕಾಂಗ್ರೆಸ್​ ಶಾಸಕ ಜಮೀರ್ ಅಹ್ಮದ್​ಗೆ ಇಂದು ಎರಡೆರಡು ಶಾಕ್​ಗಳು ಎದುರಾಗಿವೆ. ಇಂದು ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು ಜಮೀರ್​ ಅಹ್ಮದ್​ ಖಾನ್​ ನಿವಾಸದ ಮೇಲೆ ದಾಳಿ ನಡೆಸಿದ್ದರು. ಇದರ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಐಎಂಎ ವಂಚನೆ ಪ್ರಕರಣ ಸಂಬಂಧ  ಜಮೀರ್ ಅಹಮದ್ ಮನೆ ಮತ್ತು ಕಚೇರಿ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿ ಶೋಧ ನಡೆಸಿದ್ದಾರೆ.

ಐಎಂಎ ಕೇಸ್​​ನಲ್ಲಿ ಜಮೀರ್​ ಅಹ್ಮದ್​ ಹೆಸರು ತಳುಕುಹಾಕಿಕೊಂಡಿದೆ. ಹೀಗಾಗಿ ಇಡಿ ಅಧಿಕಾರಿಗಳು ಜಮೀರ್ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಜಮೀರ್​ ಅಹ್ಮದ್  ರಿಚ್ಮಂಡ್​ ಟೌನ್​ ಬಳಿ​  ಮನ್ಸೂರ್​​​ ಖಾನ್ ಗೆ ನಿವೇಶನ ಮಾರಾಟ ಮಾಡಿದ್ದರು. ಈ‌ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಜಮೀರ್ ಅಹಮದ್ ಮನೆ ಮೇಲೆ ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಜಮೀರ್ ಅಹ್ಮದ್​ ವಿಚಾರಣೆ ನಡೆಸುತ್ತಿದ್ದಾರೆ. ಮೊಬೈಲ್​ನ್ನು​ ವಶಕ್ಕೆ ಪಡೆದಿರುವ ಅಧಿಕಾರಿಗಳು ಜಮೀರ್​ನ್ನು ಕೊಠಡಿಯಲ್ಲಿ ಕೂರಿಸಿ ವಿಚಾರಣೆ ಮಾಡುತ್ತಿದ್ದಾರೆ.

ಸದ್ಯ ಇಡಿ ಅಧಿಕಾರಿಗಳ ವಶದಲ್ಲಿರೋ ಜಮೀರ್‌,  ಅಧಿಕಾರಿಗಳ ಎಲ್ಲಾ ಪ್ರಶ್ನೆಗಳಿಗೆ ಸಕರಾತ್ಮಕವಾಗಿ ಉತ್ತರ ಕೊಡುತ್ತಿದ್ದಾರೆ. ಐಎಂಎ ಹಾಗೂ ಮನ್ಸೂರ್ ಜೊತೆಗಿನ ಒಡನಾಟದ ಬಗ್ಗೆ ವಿಚಾರಣೆ ನಡೆಸಲಾಗುತ್ತದೆ.

ಮನ್ಸೂರ್​ ಖಾನ್​ಗೆ ನಿವೇಶನ ಮಾರಾಟ ಮಾಡಿದ್ದ ಜಮೀರ್: 

ಜಮೀರ್ ರಿಚ್ಮಂಡ್ ಟೌನ್ ನಲ್ಲಿರುವ 14.924 ಚದರಡಿ ನಿವೇಶನವನ್ನು  ಐಎಂಎ ಮಾಲೀಕ ಮನ್ಸೂರ್ ಖಾನ್ ಗೆ ಮಾರಾಟ ಮಾಡಿದ್ದರು. ಶಾಸಕ ಜಮೀರ್ 9.38 ಕೋಟಿಗೆ ನಿವೇಶನ ಮಾರಾಟ ಮಾಡಿದ್ದರು. ಇದೇ ವಿಚಾರಕ್ಕೆ ಐಎಂಎ ಪ್ರಕರಣದಲ್ಲಿ ಜಮೀರ್ ಹೆಸರು ಕೇಳಿ ಬಂದಿತ್ತು. ಮನ್ಸೂರ್ ಖಾನ್ ನಿಂದ ಹೆಚ್ಚಿನ ಹಣ ಪಡೆದ ಆರೋಪ ಕೇಳಿ ಬಂದಿತ್ತು.

ಈ ಬಗ್ಗೆ ವಿಚಾರಣೆಗೆ ಹಾಜರಾಗುವಂತೆ ಇಡಿ ಅಧಿಕಾರಿಗಳು ಸಮನ್ಸ್ ಕೂಡ ಕೊಟ್ಟಿದ್ದರು. 2019ರ ಜುಲೈ 5ರಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಜಮೀರ್​ ಅವರನ್ನು ವಿಚಾರಣೆಗೆ ಕರೆದಿದ್ದರು.

ಉಳಿದ 80 ಕೋಟಿ ಹಣ ವನ್ನ ಹವಾಲ ಹಣ ಪಡೆದಿದ್ದಾರೆ ಎಂಬ ಆರೋಪ ಜಮೀರ್ ಮೇಲಿತ್ತು‌. 2014 ರಲ್ಲಿ ಆಸ್ತಿಯ ವಿಚಾರವಾಗಿ ವ್ಯಾಜ್ಯ ಕೋರ್ಟ್ ನಲ್ಲಿತ್ತು. ವ್ಯಾಜ್ಯ ಇದ್ರೂ ಕೂಡ ಜಮೀರ್ ಅಹ್ಮದ್​​ ಮಾರಾಟ ಮಾಡಿದ್ದರು. ಶಾಸಕ ಜಮೀರ್​ 2018ರಲ್ಲಿ ಚುನಾವಣ ಪ್ರಮಾಣ ಪತ್ರದಲ್ಲಿ ಕೂಡ ತಪ್ಪು ಮಾಹಿತಿ ನೀಡಿದ್ದರು.   ಚೆಲುವರಾಯ ಸ್ವಾಮಿ ಬಳಿ 40 ಲಕ್ಷ ಹಣ ಸಾಲ ಪಡೆದಿದ್ದಾಗ ತಪ್ಪು ಮಾಹಿತಿ ನೀಡಿದ್ದರು. ಈ ಎಲ್ಲಾ ವಿಚಾರವಾಗಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.

ಐಟಿ ಅಧಿಕಾರಿಗಳು ಕಾಂಗ್ರೆಸ್​ ಶಾಸಕ ಜಮೀರ್ ಅಹ್ಮದ್​​ ಮನೆ ಮೇಲೆ  ಬೆಳ್ಳಂ ಬೆಳಗ್ಗೆ  ದಾಳಿ ನಡೆಸಿದ್ದರು. ಬಂಬೂ ಬಜಾರ್ ರಸ್ತೆಯಲ್ಲಿರುವ ಜಮೀರ್ ಅಹ್ಮದ್ ಮನೆ ಮೇಲೆ ಇಂದು ಬೆಳಗ್ಗೆ ಐಟಿ ದಾಳಿ ನಡೆದಿದೆ. ಐಟಿ ಅಧಿಕಾರಿಗಳು ಎರಡು ಕಾರುಗಳಲ್ಲಿ ಬಂದಿದ್ದು, ಜಮೀರ್​ ಮನೆ ಮೇಲೆ ದಾಳಿ ನಡೆಸಿದ್ದಾರೆ. ಜಮೀರ್ ಅಹ್ಮದ್ ಸದ್ಯ ಮನೆಯಲ್ಲೇ ಇದ್ದಾರೆ ಎಂದು ತಿಳಿದು ಬಂದಿದೆ. ಐಟಿ ಅಧಿಕಾರಿಗಳು ಮನೆಯೊಳಗೆ ಎಂಟ್ರಿ ಕೊಟ್ಟು ಪರಿಶೀಲನೆ ನಡೆಸಿದ್ದರು.

Read: ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಗೆ ಐಟಿ ಶಾಕ್ ; ಏಕಕಾಲಕ್ಕೆ ಮನೆ, ಕಚೇರಿ, ಫ್ಲ್ಯಾಟ್ ಗಳ ಮೇಲೆ ದಾಳಿ !

The Enforcement Directorate on August 5, Thursday conducted raids at properties of Congress Chamrajpet MLA Zameer Ahmed Khan. The raids started in the morning and were held at his house in Shivajinagar, offices of the National Travels in Kalasipalyam and Chamarajapet and an apartment in UB city in the city. National Travels is a travel company started in 1930 by Zameer’s grandfather and he along with other family members manage the company.