ಇಂದಿರಾ ಕ್ಯಾಂಟೀನ್ ಹೆಸರನ್ನೂ ಬದಲಿಸಿ, ಜನರು ಯಾಕೆ ಆ ಹೆಸರಿನಿಂದ ತುರ್ತುಸ್ಥಿತಿ ನೆನಪಿಸಿಕೊಳ್ಳಬೇಕು ; ಸಿಟಿ ರವಿ

07-08-21 05:13 pm       Headline Karnataka News Network   ಕರ್ನಾಟಕ

ರಾಜ್ಯಾದ್ಯಂತ ಇರುವ ಇಂದಿರಾ ಕ್ಯಾಂಟೀನ್ ಹೆಸರನ್ನು ಬದಲು ಮಾಡಬೇಕು. ಅದರ ಬದಲಿಗೆ ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂದು ಹೆಸರಿಸಬೇಕು ಎಂದು ಸಿಟಿ ರವಿ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿದ್ದಾರೆ.

ಬೆಂಗಳೂರು, ಆಗಸ್ಟ್ 7: ಕೇಂದ್ರ ಸರಕಾರ ರಾಜೀವ ಗಾಂಧಿ ಖೇಲ್ ರತ್ನ ಪ್ರಶಸ್ತಿಯ ಹೆಸರು ಬದಲಿಸಿದ ಬೆನ್ನಲ್ಲೇ ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್ ಹೆಸರನ್ನೂ ಬದಲಿಸಬೇಕೆಂಬ ಆಗ್ರಹ ಕೇಳಿಬಂದಿದೆ. ಈ ಬಗ್ಗೆ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಆಗ್ರಹ ಮಾಡಿದ್ದು, ರಾಜ್ಯದಲ್ಲಿರುವ ಇಂದಿರಾ ಕ್ಯಾಂಟೀನ್ ಹೆಸರನ್ನು ಬದಲಾವಣೆ ಮಾಡಬೇಕು ಎಂದು ಹೇಳಿದ್ದಾರೆ.

ಈ ಬಗ್ಗೆ ಸಿಟಿ ರವಿ ಟ್ವೀಟ್ ಮಾಡಿದ್ದು, ರಾಜ್ಯಾದ್ಯಂತ ಇರುವ ಇಂದಿರಾ ಕ್ಯಾಂಟೀನ್ ಹೆಸರನ್ನು ಬದಲು ಮಾಡಬೇಕು. ಅದರ ಬದಲಿಗೆ ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂದು ಹೆಸರಿಸಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿದ್ದಾರೆ.

ಕನ್ನಡಿಗರು ಕ್ಯಾಂಟೀನಲ್ಲಿ ಊಟ ಮಾಡುವಾಗ ಏಕೆ ಇಂದಿರಾ ಹೆಸರಿನ ಮೂಲಕ ತುರ್ತು ಸ್ಥಿತಿಯ ಕರಾಳ ದಿನಗಳನ್ನು ನೆನಪಿಸಿಕೊಳ್ಳಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ಈ ಬಗ್ಗೆ ಸಿಟಿ ರವಿ ಅವರ ಹೇಳಿಕೆಯ ಬಗ್ಗೆ ಟ್ವಿಟರ್ ನಲ್ಲಿ ಪರ- ವಿರೋಧ ಚರ್ಚೆಗಳು ನಡೆದಿದ್ದು, ಕೆಲವರು ವಾಜಪೇಯಿ, ಸಾವರ್ಕರ್ ಹೆಸರು ಇರುವುದನ್ನೂ ಬದಲಿಸಿ ಎಂದು ತಿರುಗೇಟು ನೀಡಿದ್ದಾರೆ. 

Indira Canteen was opened by the then Chief Minister Siddaramaiah to ease the hunger of the poor. The canteen is benefiting the poor and the needy. The canteen is named after former Prime Minister Indira Gandhi. However, BJP national secretary general CT Ravi has appealed to state chief minister Basavaraj Bommai to change the name.