ಅಫ್ಘನ್ ಕನ್ನಡಿಗರ ರಕ್ಷಣೆಗೆ ನೋಡಲ್ ಅಧಿಕಾರಿ ನೇಮಕ ; ರಾಜ್ಯದಲ್ಲಿದ್ದಾರೆ 339 ಅಫ್ಘನ್ ಪ್ರಜೆಗಳು !

20-08-21 11:05 am       Headline Karnataka News Network   ಕರ್ನಾಟಕ

ಅಫ್ಘಾನಿಸ್ತಾನದಲ್ಲಿ ಸಿಕ್ಕಿಬಿದ್ದಿರುವ ಕನ್ನಡಿಗರ ರಕ್ಷಣೆಗೆ ಕರ್ನಾಟಕ ಸರಕಾರ ಮುಂದಾಗಿದೆ. ಅಲ್ಲದೆ, ಕನ್ನಡಿಗರ ರಕ್ಷಣೆಗಾಗಿ ಸಿಐಡಿ ವಿಭಾಗದ ಎಡಿಜಿಪಿ ಉಮೇಶ್ ಕುಮಾರ್ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿದೆ. 

ಬೆಂಗಳೂರು, ಆಗಸ್ಟ್ 20: ಅಫ್ಘಾನಿಸ್ತಾನದಲ್ಲಿ ಸಿಕ್ಕಿಬಿದ್ದಿರುವ ಕನ್ನಡಿಗರ ರಕ್ಷಣೆಗೆ ಕರ್ನಾಟಕ ಸರಕಾರ ಮುಂದಾಗಿದೆ. ಅಲ್ಲದೆ, ಕನ್ನಡಿಗರ ರಕ್ಷಣೆಗಾಗಿ ಕೇಂದ್ರ ಸರಕಾರದ ಜೊತೆ ವ್ಯವಹರಿಸಲು ಹಿರಿಯ ಐಪಿಎಸ್ ಅಧಿಕಾರಿ, ಸಿಐಡಿ ವಿಭಾಗದ ಎಡಿಜಿಪಿ ಉಮೇಶ್ ಕುಮಾರ್ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿದೆ. 

ಕನ್ನಡಿಗರ ರಕ್ಷಣೆಗಾಗಿ ಕಂಟ್ರೋಲ್ ರೂಂ ತೆರೆಯಲಿದ್ದು ಐಪಿಎಸ್ ಅಧಿಕಾರಿ ವಿದೇಶಾಂಗ ಇಲಾಖೆಯ ಜೊತೆ ವ್ಯವಹರಿಸಲಿದ್ದಾರೆ ಎಂದು ಕರ್ನಾಟಕ ಸರಕಾರ ಹೇಳಿಕೆಯಲ್ಲಿ ತಿಳಿಸಿದೆ. ಈಗಾಗ್ಲೇ ಕೇಂದ್ರ ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಮುಂದಾಗಿದ್ದು ಅದಕ್ಕಾಗಿ ಹೆಲ್ಪ್ ಲೈನ್ ಆರಂಭಿಸಿದೆ. 

ಈ ನಡುವೆ, ಆಗಸ್ಟ್ 17 ರಂದು ಭಾರತೀಯ ರಾಯಭಾರ ಕಚೇರಿಯ ಪ್ರತಿನಿಧಿಗಳು ಮತ್ತು ಸಿಬಂದಿಯನ್ನು ಕಾಬೂಲಿನಿಂದ ಕರೆತಂದಿತ್ತು. ರಾಜಧಾನಿ ಕಾಬೂಲ್ ತಾಲಿಬಾನ್ ಕೈವಶವಾಗಿದ್ದರೂ, ಏರ್ಪೋರ್ಟ್ ಮೂಲಕ ಭಾರತೀಯರ ರಕ್ಷಣೆಗೆ ವಾಯುಪಡೆ ಮುಂದಾಗಿದೆ. 

ಈ ನಡುವೆ, ರಾಜ್ಯದಲ್ಲಿ 339 ಅಫ್ಘನ್ ಪ್ರಜೆಗಳು ಇರುವುದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಈ ಪೈಕಿ 192 ಮಂದಿ ವಿದ್ಯಾರ್ಥಿಗಳಾಗಿದ್ದು ವಿವಿಧ ಕಡೆ ಶಿಕ್ಷಣ ಪಡೆಯುತ್ತಿದ್ದಾರೆ. ಶಿಕ್ಷಣಕ್ಕಾಗಿ ಬಂದಿರುವ ವಿದ್ಯಾರ್ಥಿಗಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಅವರ ವೀಸಾ ಅವಧಿ ಮುಗಿದಿದ್ದರೆ ವಿಸ್ತರಣೆ ಮಾಡಲಾಗುವುದು ಎಂದು ಗೃಹ ಸಚಿವರು ತಿಳಿಸಿದ್ದಾರೆ. 

ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಕರ್ನಾಟಕದ ನಿವಾಸಿಗಳು ಈ ಹೆಲ್ಪ್ ಲೈನ್ ನಂಬರಿಗೆ ಕರೆ ಮಾಡಬಹುದು. 080-22094498 / 080-22942628, 9480800187, afghan_kar@ksp.gov.in

Read: ಅಫ್ಘಾನಿಸ್ತಾನದಲ್ಲಿ ಸಿಕ್ಕಿಬಿದ್ದ ಮಂಗಳೂರಿನ ಸಿಸ್ಟರ್ !  ಕಾಬೂಲಿನಲ್ಲಿ ಹೊರಗೆ ಬರಲಾಗದೆ ಚಡಪಡಿಕೆ 

Karnataka Home Minister Araga Jnanendra has assured all Afghan nationals, including students living in the State, that the government will help them during the crisis. Of the 339 Afghan nationals in Karnataka, 192 have student visas that are nearing expiry date. With the Taliban taking over Afghanistan, many are looking at an uncertain future.