ಬ್ರೇಕಿಂಗ್ ನ್ಯೂಸ್
01-09-21 04:36 pm Headline Karnataka News Network ಕರ್ನಾಟಕ
ಕಲಬುರ್ಗಿ, ಸೆ.1: ಈ ದೇಶದಲ್ಲಿ ಬಹುಸಂಖ್ಯಾತ ಹಿಂದುಗಳು ಇರುವ ತನಕ ಮಾತ್ರ ಬಿ.ಆರ್. ಅಂಬೇಡ್ಕರ್ ಬರೆದ ಸಂವಿಧಾನವು ಚಾಲ್ತಿಯಲ್ಲಿರಲಿದೆ. ಯಾವಾಗ ಹಿಂದುಗಳ ಸಂಖ್ಯೆಯಲ್ಲಿ ಅಲ್ಪಸಂಖ್ಯಾತರಾಗಿ ಬಿಡುತ್ತಾರೋ ಆಗ ಭಾರತದಲ್ಲಿಯೂ ಅಫ್ಘಾನಿಸ್ತಾನದಲ್ಲಿ ಆಗಿರುವ ಸ್ಥಿತಿಯೇ ಬರಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆತಂಕ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಕೆಲವು ನಿರ್ದಿಷ್ಟ ತತ್ವ ಮತ್ತು ಸಿದ್ಧಾಂತಗಳನ್ನು ಒಪ್ಪಿಕೊಂಡು ಮುನ್ನಡೆದಿದೆ. ಅದರಲ್ಲಿ ಹಿಂದುತ್ವ ಕೂಡ ಒಂದು. ಹಿಂದುತ್ವದ ರಕ್ಷಣೆ ನಮ್ಮ ಪಕ್ಷದ ಹೊಣೆ. ಆದರೆ, ಭಾರತದಲ್ಲಿ ಹಿಂದುಗಳು ಅಲ್ಪಸಂಖ್ಯಾತರಾದಲ್ಲಿ ಭಾರತ ಆಗಿ ಉಳಿಯೋದಿಲ್ಲ. ಅಂಥ ಸ್ಥಿತಿ ಬಂದಲ್ಲಿ ಈ ದೇಶಕ್ಕೆ ಭವಿಷ್ಯವೂ ಇರಲ್ಲ ಎಂದು ಹೇಳಿದರು.
ಕಲಬುರ್ಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಬುದ್ಧನಿಗೆ ವಿಹಾರ ಕಟ್ಟಿಸಿದರು. ಆದರೆ, ಡಿಕೆಶಿ ಬ್ರದರ್ಸ್ ಬುದ್ಧನ ವಿಗ್ರಹವನ್ನೇ ಕೆಡವಿದರು. ಇದು ಅವರ ಮನಸ್ಥಿತಿಗೆ ಸಾಕ್ಷಿ ಎಂದ ಸೀಟಿ ರವಿ, ರಾಜ್ಯದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆಶಿ ಪಕ್ಷದ ಮೇಲೆ ಹಿಡಿತ ಸಾಧಿಸಲು ಪೈಪೋಟಿ ನಡೆಸುತ್ತಿದ್ದಾರೆ. ಆದರೆ, ಸಿದ್ದರಾಮಯ್ಯ ಯಾವತ್ತಿಗೂ ಡಿಕೆಶಿ ನೇತೃತ್ವದಲ್ಲಿ ಕಾಂಗ್ರೆಸ್ ಗೆಲ್ಲಬೇಕೆಂದು ಬಯಸೋದಿಲ್ಲ. ಕಾಂಗ್ರೆಸ್ ರಾಷ್ಟ್ರ ಮಟ್ಟದಲ್ಲಿ ಅಧ್ಯಕ್ಷನ ಆಯ್ಕೆಗಾಗಿ ಎರಡು ದಶಕದ ಕಾಲದಿಂದ ಕಸರತ್ತು ನಡೆಸುತ್ತಿದೆ. ಅದೇ ಪರಿಸ್ಥಿತಿ ರಾಜ್ಯದಲ್ಲಿಯೂ ಕಾಂಗ್ರೆಸಿನಲ್ಲಿದೆ. ಕೆಪಿಸಿಸಿ ಅಧ್ಯಕ್ಷನಾಗಿ ವರ್ಷ ಆಗುತ್ತಿದ್ದರೂ, ರಾಜ್ಯದ ಪದಾಧಿಕಾರಿಗಳನ್ನು ಮಾಡಲಾಗದ ಸ್ಥಿತಿಯಲ್ಲಿದ್ದಾರೆ. ಅದರ ನಡುವೆ ಸಿಎಂ ಸ್ಥಾನದ ಹಗಲು ಕನಸು ಕಾಣುತ್ತಿದ್ದಾರೆ ಎಂದು ಛೇಡಿಸಿದರು.
ಯಾವುದೇ ಬಿಜೆಪಿ ನಾಯಕ ಸ್ವಾತಂತ್ರ್ಯ ಹೋರಾಟ ಮಾಡಿಲ್ಲ ಎಂಬ ಮಲ್ಲಿಕಾರ್ಜುನ ಖರ್ಗೆಯ ಹೇಳಿಕೆಗೆ ತಿರುಗೇಟು ನೀಡಿದ ಸಿಟಿ ರವಿ, ಮಲ್ಲಿಕಾರ್ಜುನ ಖರ್ಗೆಯ ಎದೆಗೆ ಎಷ್ಟು ಗುಂಡುಗಳು ಬಿದ್ದಿವೆ ಹೇಳಲಿ. ಅಥವಾ ಡಿಕೆ ಶಿವಕುಮಾರ್ ಎದೆಗೆ ಎಷ್ಟು ಗುಂಡು ಬಿದ್ದಿದೆ ಹೇಳಲಿ. ಶಿವಕುಮಾರ್ ಎದೆಗೆ ಗುಂಡು ಬಿದ್ದಿದ್ದಲ್ಲ. ಅವರೇ ಗುಂಡು ಮುಂದಿಟ್ಟು ಗೂಂಡಾಯಿಸಂ ಮಾಡಿಕೊಂಡು ಬಂದವರು. ತಾಲಿಬಾನ್ ಸಂಸ್ಕೃತಿ ಹೆಚ್ಚುವುದಕ್ಕೆ ಕಾಂಗ್ರೆಸಿನವರು ಕೊಡುಗೆ ನೀಡುತ್ತಿದ್ದಾರೆ. ಮದ್ರಸಾದಲ್ಲಿ ತಾಲಿಬಾನ್ ಬೆಳೆಯುತ್ತಿದೆ. ಜನರು ಇನ್ನೂ ಕೂಡ ತಾಲಿಬಾನ್ ಎಲ್ಲಿದೆ, ಅದನ್ನು ಯಾರು ಪೋಷಿಸಿಕೊಂಡು ಬರುತ್ತಿದ್ದಾರೆ ಎಂಬುದನ್ನು ತಿಳಿಯದಿದ್ದರೆ ಅದಕ್ಕಿಂತ ದೊಡ್ಡ ಮೂರ್ಖತನ ಇಲ್ಲ ಎಂದು ಹೇಳಿದ್ದಾರೆ.
ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಹಿಂದುಳಿಯಲು ಕಾಂಗ್ರೆಸ್ ಕಾರಣ. ಕಾಂಗ್ರೆಸ್ ನಾಯಕರು ತಾವೇ ಬೆಳೆದದ್ದು ಬಿಟ್ಟರೆ ಈ ಭಾಗವನ್ನು ಅಭಿವೃದ್ಧಿ ಪಡಿಸಲು ಮುಂದಾಗಿಲ್ಲ. ಈ ಭಾಗದ ಜನ ಹೆಚ್ಚಾಗಿ ಕಾಂಗ್ರೆಸ್ ಪರವಾಗಿ ಮತ ಕೊಟ್ಟು ಬಂದಿದ್ದಾರೆ. ಅದೇ ಕಾರಣದಿಂದ ಇನ್ನೂ ಹಿಂದುಳಿದಿದ್ದಾರೆ. ಕಲಬುರ್ಗಿ ಪಾಲಿಕೆಯಲ್ಲಿ ಬಿಜೆಪಿಗೆ ಜನ ಮತ ಕೊಟ್ಟರೆ, ಈ ಭಾಗದಲ್ಲಿ ಅಭಿವೃದ್ಧಿಯ ಶಕೆ ಆರಂಭಿಸುತ್ತೇವೆ ಎಂದು ಹೇಳಿದರು.
"The Indian constitution authored by Dr B R Ambedkar will remain as long as Hindus are in majority. If Hindus become a minority, our country will face an Afghanistan-like situation," said BJP national general secretary, C T Ravi. He was addressing a press conference held in the light of the fast approaching city corporation election.
10-02-25 07:01 pm
HK News Desk
13th edition Kumbh Mela, Triveni Sangama, T N...
10-02-25 05:18 pm
Magadi MLA Balakrishna, Bdcc bank, fake gold:...
10-02-25 01:40 pm
Bengaluru-Mysuru Expressway: ಟೈರ್ ಸ್ಫೋಟಗೊಂಡು...
09-02-25 07:58 pm
Renukacharya, Yatnal: ನೀನು ಜೆಡಿಎಸ್ ಸೇರಿ ಬಿರಿಯ...
09-02-25 06:58 pm
10-02-25 05:48 pm
HK News Desk
CBI arrest, Tirupati laddu: ತಿರುಪತಿ ಲಡ್ಡಿನಲ್ಲ...
10-02-25 02:13 pm
ಮೆಕ್ಸಿಕೋ ; ಟ್ರಕ್ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ...
09-02-25 09:32 pm
Delhi Election Results 2025, BJP Win; ದೆಹಲಿಯಲ...
08-02-25 02:23 pm
BJP Delhi, AAP, Live result, Election: 27 ವರ್...
08-02-25 12:14 pm
09-02-25 11:03 pm
Mangalore Correspondent
ಸುಳ್ಯದಲ್ಲಿ ಬೈಕ್ ಅಪಘಾತ ; ತೀವ್ರ ಗಾಯಗೊಂಡಿದ್ದ ಕಂಕ...
09-02-25 10:31 pm
Mangalore, Derlakatte, Drowning: ಕಪ್ಪೆ ಚಿಪ್ಪು...
09-02-25 07:40 pm
Job News, Yaticorp, Mangalore, AI; ಎಐ ಕ್ಷೇತ್...
08-02-25 10:46 pm
Mines, Krishnaveni Mangalore, Dinesh gundrao;...
08-02-25 01:08 pm
09-02-25 07:35 pm
Mangalore Correspondent
Bangalore, Udupi crime, Fraud: ಕ್ಯಾಸಿನೋ, ಬಿಟ್...
08-02-25 10:16 pm
ಕಲಬುರಗಿ | ಪರಸ್ತ್ರೀ ಜೊತೆ ಸುತ್ತಾಡುತ್ತಿದ್ದ ಪತಿಯ...
08-02-25 06:21 pm
Mangalore Mayor raid, slaughterhouse Kudroli:...
08-02-25 04:36 pm
Bidar murder crime: ಬೀದರ್ ; ಮನೆಮಂದಿ ನೋಡಿದ ಹುಡ...
08-02-25 01:00 pm