ಬ್ರೇಕಿಂಗ್ ನ್ಯೂಸ್
07-09-21 01:00 pm Headline Karnataka News Network ಕರ್ನಾಟಕ
ಬೆಂಗಳೂರು, ಸೆ.7 : ವೀಸಾ ಅವಧಿ ಮುಗಿದರೂ ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ನಾಗರಿಕರನ್ನು ಗುರುತಿಸಿ ಅವರು ನಡೆಸುತ್ತಿರುವ ಚಟುವಟಿಕೆಗಳ ಮೇಲೆ ತೀವ್ರ ನಿಗಾ ವಹಿಸುವಂತೆ ರಾಜ್ಯ ಪೊಲೀಸರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಸೂಚನೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ವೀಸಾ ಅವಧಿ ಮುಗಿದಿದ್ದರೂ ರಾಜ್ಯದಲ್ಲಿ ನೆಲೆಸಿರುವ ವಿದೇಶಿ ನಾಗರಿಕರು ಯಾವುದೇ ಅಕ್ರಮ ಚಟುವಟಿಕೆ, ದೇಶದ್ರೋಹಿ ಕೃತ್ಯ ಅಥವಾ ಸಮಾಜವಿರೋಧಿ ಕೃತ್ಯ ನಡೆಸದಂತೆ ನಿಗಾ ವಹಿಸಬೇಕು ಹಾಗೂ ಅವರ ಬಗ್ಗೆ ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವಂತೆ ಪ್ರತ್ಯೇಕ ದಾಖಲಾತಿಗಳನ್ನೂ ನಿರ್ವಹಿಸಬೇಕು ಎಂದು ನಿರ್ದೇಶನ ನೀಡಲಾಗಿದೆ ಎಂದರು.
ರಾಜ್ಯದಲ್ಲಿ ಕರಾವಳಿ ರಕ್ಷಣಾ ಪಡೆಯನ್ನು ಬಲಪಡಿಸಬೇಕು. ಸಮುದ್ರ ಮಾರ್ಗದಲ್ಲಿ ಅಕ್ರಮವಾಗಿ ನುಸುಳುವುದನ್ನು ತಡೆಯಲು ನೌಕಾದಳ ಸಿಬ್ಬಂದಿಯೊಡನೆ ಸಂಪರ್ಕ ಸಾಧಿಸಿ ದೇಶದ ಭದ್ರತೆ ಹಾಗೂ ಸುರಕ್ಷತೆಗೆ ಹೆಚ್ಚಿನ ಗಮನ ಹರಿಸಬೇಕೆಂದು ಸೂಚನೆ ನೀಡಲಾಗಿದೆ. ಈ ವಿಷಯದಲ್ಲಿ ಯಾವುದೇ ಅಜಾಗರೂಕತೆಗೆ ಆಸ್ಪದ ಇರಬಾರದು ಎಂದು ಸ್ಪಷ್ಟವಾಗಿ ಸೂಚಿಸಲಾಗಿದೆ ಎಂದರು. ರಾಜ್ಯದಲ್ಲಿ ಅಕ್ರಮ ಜಾನುವಾರು ಸಾಗಣೆ ಹಾಗೂ ಹತ್ಯೆ ನಡೆಸಲು ಯಾವುದೇ ಕಾರಣಕ್ಕೂ ಅವಕಾಶ ನೀಡದೆ , ಕಾನೂನು ಉಲ್ಲಂಘಿಸುವ ಸಮಾಜ ವಿರೋಧಿ ಶಕ್ತಿಗಳನ್ನು ನಿಗ್ರಹಿಸಬೇಕು ಎಂದೂ ತಿಳಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಪೊಲೀಸರ ಗಸ್ತು ಪದ್ದತಿಯನ್ನು ಪರಿಷ್ಕರಿಸಿ ಅಪರಾಧ ಪ್ರಕರಣಗಳನ್ನು ತಗ್ಗಿಸಲು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಲಾಗಿದೆ. ಪಟ್ಟಣ ಪ್ರದೇಶದಲ್ಲಿ ಈ-ಗಸ್ತು ವ್ಯವಸ್ಥೆಯನ್ನು ಬಲಪಡಿಸಲು ತೀರ್ಮಾನಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಜನಪರ ಚಳುವಳಿಕಾರರ ರೌಡಿ ಲಿಸ್ಟ್ ತೆರವು
ಪ್ರತಿ ಪೊಲೀಸ್ ಠಾಣೆಯಲ್ಲಿ ಇರುವ ‘ರೌಡಿ ಶೀಟರ್’ ಪಟ್ಟಿಯನ್ನು ಕಾನೂನಿನ ಮಾನದಂಡ ಪ್ರಕಾರ ಪುನಃ ಪರಿಶೀಲಿಸಿ, ಕನ್ನಡ-ಪರ, ರೈತ-ಪರ ಹಾಗೂ ಇನ್ನಿತರ ಜನಪರ ಚಳುವಳಿಯಲ್ಲಿ ಭಾಗವಹಿಸಿದವರ ವಿರುದ್ಧ ದಾಖಲಾದ ‘ರೌಡಿ ಶೀಟರ್’ ಹಣೆಪಟ್ಟಿಯನ್ನು ವೈಜ್ಞಾನಿಕವಾಗಿ ಪರಿಷ್ಕರಿಸಬೇಕು ಹಾಗೂ ಅಮಾಯಕರ ಹೆಸರು ಒಂದುವೇಳೆ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪರಿಷ್ಕರಿಸಲು, ನಿರ್ಧಾರ ತೆಗೆದು ಕೊಳ್ಳಲು ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು. ರಾಷ್ಟ್ರ ವಿರೋಧಿ ಶಕ್ತಿಗಳನ್ನು ಬಗ್ಗು ಬಡಿಯಲು ಬೆಂಗಳೂರು ಅಥವಾ ಮಂಗಳೂರಿನಲ್ಲಿ ಎನ್.ಐ.ಎ ಘಟಕವನ್ನು ರಾಜ್ಯದಲ್ಲಿ ಸ್ಥಾಪಿಸುವ ಅಗತ್ಯದ ಬಗ್ಗೆ ಕೇಂದ್ರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದೂ ಸಚಿವರು ತಿಳಿಸಿದರು.
The government has directed the police to maintain a strict vigil on illegal immigrants and overstaying foreign nationals, and action should be taken immediately against those involved in anti-social and anti-national activities, Karnataka Home Minister Araga Jnanendra said on Monday.
27-02-25 05:50 pm
HK News Desk
Forest Fire, Kanakapura, Bangalore: ಒಣಹುಲ್ಲು...
27-02-25 05:48 pm
ಕುಂಭಮೇಳಕ್ಕೆ ಹೋಗಿರೋದು ತಪ್ಪಾದ್ರೆ ಡಿಕೆಶಿ ಅವರನ್ನು...
27-02-25 03:28 pm
DK Shivakumar, BJP, Amit Shah, congress: ಡಿಕೆ...
27-02-25 01:46 pm
ಸಿಎಂಗೆ ಕ್ಲೀನ್ ಚಿಟ್ ಕೊಟ್ಟರೂ, ಮುಡಾ ಹಗರಣದ ಬಗ್ಗೆ...
26-02-25 10:43 pm
26-02-25 05:38 pm
HK News Desk
Corruption, Amit Shah, MK Stalin: ಕ್ಷೇತ್ರ ಪುನ...
26-02-25 05:11 pm
CBI raid, Gain Bitcoin: 6,600 ಕೋಟಿ ರೂ. ಕ್ರಿಸ್...
26-02-25 12:47 pm
Vijay Wardhan, UPSC story: Success story 35 ಬ...
24-02-25 10:14 pm
India Pak Match 2025 Live: ಪಾಕ್ ತಂಡವನ್ನು ಚಾಂಪ...
23-02-25 11:22 pm
27-02-25 11:07 pm
Mangalore Correspondent
Kotekar Robbey case, Bhaskar Belchada, Saheb...
27-02-25 10:48 pm
Talat Gang Mangalore, Ankola Robbery case: ಅಂ...
27-02-25 10:31 pm
Mangalore News; ನಿವೃತ್ತ ಸರಕಾರಿ ನೌಕರರಿಗೆ 7ನೇ ವ...
27-02-25 10:09 pm
Yeddyurappas, Ravindra shetty, Mangalore: ಬಿಎ...
27-02-25 07:09 pm
26-02-25 10:48 pm
HK News Desk
Sirsi Crime, stabbing: ಶಿವರಾತ್ರಿ ಹಬ್ಬಕ್ಕೆ ಮನೆ...
26-02-25 01:27 pm
Urwa Police, Mangalore Crime, online Fraud: ಕ...
25-02-25 08:10 pm
Mangalore, Kotekar bank robbery, Bhaskar Belc...
25-02-25 05:18 pm
Kerala Murder, Crime, Affan: ತಿರುವನಂತಪುರ ; ಒಂ...
25-02-25 01:37 pm