ಬೆಂಗಳೂರು; 10 ಲಕ್ಷ ರೂ. ಲಂಚ ಪಡೆದು ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದ ಪೋಲಿಸ್ ಇನ್ಸ್ ಪೆಕ್ಟರ್

18-09-21 03:42 pm       Headline Karnataka News Network   ಕರ್ನಾಟಕ

ಲಂಚ ಸ್ವೀಕಾರ ಆರೋಪ ಸಂಬಂಧ ಎಸಿಬಿ ತನಿಖಾಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಚಿಕ್ಕಜಾಲ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಎಸಿಬಿ ಬಲೆಗೆ ಬಿದಿದ್ದಾರೆ.

ಬೆಂಗಳೂರು, ಸೆ.18 : ಲಂಚ ಸ್ವೀಕಾರ ಆರೋಪ ಸಂಬಂಧ ಎಸಿಬಿ ತನಿಖಾಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಚಿಕ್ಕಜಾಲ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಎಸಿಬಿ ಬಲೆಗೆ ಬಿದಿದ್ದಾರೆ.

ನಗರದ ಚಿಕ್ಕಜಾಲ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ರಾಘವೇಂದ್ರ ವಿರುದ್ಧ ಎಸಿಬಿ ಮೊಕದ್ದಮೆ ದಾಖಲಿಸಿದೆ.

ನಗರದ ನಿವಾಸಿಯೊಬ್ಬರ  ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಜಮೀನಿನಲ್ಲಿ ಅಳವಡಿಸಿದ್ದ ಬೋರ್ಡ್ ಅನ್ನು ಕಿತ್ತುಹಾಕಿರುವ ಕುರಿತಂತೆ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ  ಪ್ರಕರಣ  ದಾಖಲಿಸಿ ತನಿಖೆಯನ್ನು  ಕೈಗೊಳ್ಳುವಂತೆ ದೂರು ನೀಡಲಾಗಿತ್ತು. ಆದರೆ, ಇನ್ಸ್ ಪೆಕ್ಟರ್ 10  ಲಕ್ಷ  ರೂ. ಲಂಚಕ್ಕೆ  ಬೇಡಿಕೆ  ಇಟ್ಟು  ಈಗಾಗಲೇ 8  ಲಕ್ಷ  ರೂ. ಲಂಚದ  ಹಣವನ್ನು ಪಡೆದಿರುವ ಬಗ್ಗೆಯೂ ದೂರಿನಲ್ಲಿ ಉಲ್ಲೇಖಿಸಲಾಗಿತ್ತು.

ಈ ಸಂಬಂಧ ಕಾರ್ಯಾಚರಣೆ  ಕೈಗೊಂಡ ಎಸಿಬಿ ತನಿಖಾಧಿಕಾರಿಗಳು, ಇನ್ಸ್ ಪೆಕ್ಟರ್ ರಾಘವೇಂದ್ರ ವ್ಯಕ್ತಿಯೋರ್ವರ ಮುಖಾಂತರ  ಬಾಕಿ 2  ಲಕ್ಷ  ರೂ.ಗಳನ್ನು  ಚಿಕ್ಕಜಾಲ  ಪೊಲೀಸ್  ಠಾಣೆಯಲ್ಲೇ ಲಂಚದ  ಹಣ ಪಡೆದುಕೊಳ್ಳುವಾಗ ಬಂಧಿಸಿರುವುದಾಗಿ ತಿಳಿದುಬಂದಿದೆ.

ಈ ಪ್ರಕರಣ ಸಂಬಂಧ ಆರೋಪಿಗಳಾದ ರಾಘವೇಂದ್ರ ಸೇರಿದಂತೆ ಇಬ್ಬರನ್ನು ಬಂಧಿಸಿ ಎಸಿಬಿ ತನಿಖೆ ನಡೆಸುತ್ತಿದೆ.

Bangalore Chikkajala Police station inspector Raghavendra caught red handed by ACB officers while taking 10 lakhs bribe over property issue.