CET ರಿಸಲ್ಟ್ ಪ್ರಕಟ ; ಮೈಸೂರಿನ ಮೇಘನ್ ರಾಜ್ಯಕ್ಕೆ ಟಾಪರ್

20-09-21 04:46 pm       Headline Karnataka News Network   ಕರ್ನಾಟಕ

ವೃತ್ತಿಪರ ಕೋರ್ಸ್​ಗಳ ಪ್ರವೇಶಕ್ಕಾಗಿ ನಡೆದಿದ್ದ ಸಿಇಟಿ ಫಲಿತಾಂಶ ಇಂದು ಪ್ರಕಟವಾಗಿದೆ, ಮೈಸೂರಿನ ಮೇಘನ್ ಎಚ್ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾನೆ.

ಬೆಂಗಳೂರು, ಸೆ. 20: ವೃತ್ತಿಪರ ಕೋರ್ಸ್​ಗಳ ಪ್ರವೇಶಕ್ಕಾಗಿ ನಡೆದಿದ್ದ ಸಿಇಟಿ ಫಲಿತಾಂಶ ಇಂದು ಪ್ರಕಟವಾಗಿದೆ, ಮೈಸೂರಿನ ಮೇಘನ್ ಎಚ್ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾನೆ.

ಸಿಇಟಿ- ಎಂಜಿನಿಯರಿಂಗ್ ವಿಭಾಗದ ಟಾಪ್ 10 ವಿದ್ಯಾರ್ಥಿಗಳ ವಿವರ ಲಭ್ಯವಾಗಿದೆ. ಸಿಇಟಿ ಟಾಪ್‌ 10 ವಿದ್ಯಾರ್ಥಿಗಳು ಬೆಂಗಳೂರಿನ 9 ಮಂದಿ ಹಾಗೂ ಮೈಸೂರಿನ ಒಬ್ಬ ವಿದ್ಯಾರ್ಥಿ ಆಗಿದ್ದಾರೆ.

ಮೈಸೂರು ವಿದ್ಯಾರ್ಥಿ ಮೇಘನ್ ಟಾಪ್ ನಾಲ್ಕು ವಿಭಾಗದಲ್ಲಿ ಟಾಪರ್ ಆಗಿದ್ದಾರೆ. ಮೈಸೂರಿನ ಪ್ರಮತಿ ಹಿಲ್ ವೀವ್ ಅಕಾಡೆಮಿಯ ಹೆಚ್ .ಕೆ. ಮೇಘನ್ ನಾಲ್ಕು ವಿಭಾಗದಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ.

ಮೈಸೂರು ವಿದ್ಯಾರ್ಥಿ ಮೇಘನ್ ಎಲ್ಲಾ ವಿಭಾಗದಲ್ಲೂ ಟಾಪ್ ಅಂಕ ಗಳಿಸಿದ್ದಾರೆ. ಇಂಜಿನಿಯರಿಂಗ್, ಕೃಷಿ, ಪಶುವೈದ್ಯಕೀಯ ವಿಜ್ಞಾನ ವಿಭಾಗ, ನ್ಯಾಚುರೋಪತಿ, ಯೋಗಿಕ್‌ ಸೈನ್ಸ್‌ನಲ್ಲೂ ಹೆಚ್ .ಕೆ. ಮೇಘನ್ ಟಾಪರ್ ಆಗಿದ್ದಾರೆ.

ಅಗ್ರಿಕಲ್ಚರ್ ವಿಭಾಗದಲ್ಲಿ ಮೇಘನಾ ಹೆಚ್​​.ಕೆ- ಮೊದಲ ಸ್ಥಾನ ಪಡೆದರೆ, ರೀತಂ .ಬಿ- ಎರಡನೇ ಸ್ಥಾನ, ಅದಿತ್ಯ ಪ್ರಭಾಶ್- ಮೂರನೇ ಸ್ಥಾನ ಪಡೆದಿದ್ದಾರೆ, ಇನ್ನು ವೆಟರ್ನರಿ ಸೈನ್ಸ್ ವಿಭಾಗ ಮೇಘನ ಹೆಚ್.ಕೆ- ಮೊದಲ ಸ್ಥಾನ, ವರುಣ್ ಆದಿತ್ಯ- ಎರಡನೇ ಸ್ಥಾನ, ರೀತಂ .ಬಿ- ಮೂರನೇ ಸ್ಥಾನ ಪಡೆದಿದ್ದಾರೆ.

ಬಿ.ಫಾರ್ಮ್ ವಿಭಾಗ ಮೇಘನ್ ಹೆಚ್.ಕೆ- ಮೊದಲು, ಪ್ರೇಮಾಂಕರ್ - ಎರಡನೇ ಸ್ಥಾನಬಿ.ಎಸ್.ಅನಿರುದ್​ - ಮೂರನೇ ಸ್ಥಾನ ಗಳಿಸಿದ್ದಾರೆ. ನ್ಯಾಚರೋಪತಿ ವಿಭಾಗದಲ್ಲಿ ಮೇಘನಾ ಹೆಚ್.ಕೆ - ಮೊದಲು, ವರುಣ್ ಆದಿತ್ಯ- ಎರಡನೇ ಹಾಗೂ ರೀತಂ ಬಿ- ಮೂರನೇ ಸ್ಥಾನ ಗಳಿಸುವಲ್ಲಿ ಸಫಲರಾಗಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉನ್ನ ತ ಶಿಕ್ಷಣ ಸಚಿವ ಡಾ. ಅಶ್ವಥ್​ ನಾರಾಯಣ, ಎಂಜಿನಿಯರಿಂಗ್​, ಬಿಫಾರ್ಮ್​, ಕೃಷಿ ವಿಜ್ಞಾನ, ಪಶು ವೈದ್ಯಕೀಯ, ಯೋಗ ಮತ್ತು ನ್ಯಾಚುರೋಪಥಿ ಎಲ್ಲಾ ವಿಭಾಗದಲ್ಲೂ ಮೈಸೂರಿನ ಪ್ರಮತಿ ಹಿಲ್ ಅಕಾಡೆಮಿ ವಿದ್ಯಾರ್ಥಿ ಮೇಘನ್​ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ ಎಂದು ತಿಳಿಸಿದರು.

ಇಂದು 2020-21ನೇ ಸಾಲಿನ ಸಿಇಟಿ ಫಲಿತಾಂಶ ಪ್ರಕಟವಾಗಿದೆ. ಸಿಇಟಿಗೆ ನೋಂದಣಿ ಮಾಡಿದ್ದ 2,01,834 ವಿದ್ಯಾರ್ಥಿಗಳ ಪೈಕಿ 1.93 ಲಕ್ಷ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಬರೆದಿದ್ದಾರೆ. ಇಂಜಿನಿಯರಿಂಗ್ ಕೋರ್ಸ್ ಗೆ 1,83,231 ರಾಂಕ್ ನೀಡಲಾಗಿದೆ. ಕೃಷಿ ಕೋರ್ಸಿಗೆ 1,52,518 ಅಭ್ಯರ್ಥಿಗಳು, 1,55,760 ಪಶುಸಂಗೋಪನೆ, 1,55,910 ಯೋಗ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು.

ಗಣಿತ ಪರೀಕ್ಷೆ ಬರೆದಿರುವ 1.89 ಲಕ್ಷ ವಿದ್ಯಾರ್ಥಿಗಳು, ಜೀವಶಾಸ್ತ್ರ ಪರೀಕ್ಷೆ ಬರೆದಿರುವ 1.62 ಲಕ್ಷ ವಿದ್ಯಾರ್ಥಿಗಳು, ರಸಾಯನಶಾಸ್ತ್ರ ಪರೀಕ್ಷೆ ಬರೆದಿದ್ದ 1.93 ಲಕ್ಷ ವಿದ್ಯಾರ್ಥಿಗಳು, ಭೌತಶಾಸ್ತ್ರ ಪರೀಕ್ಷೆ ಬರೆದಿದ್ದ 1.93 ಲಕ್ಷ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಿದೆ.

ಇಂಜಿನಿಯರಿಂಗ್ ಅಥವಾ ತಂತ್ರಜ್ಞಾನ (ಬಿಇ / ಬಿ.ಟೆಕ್): ಕೆಸಿಇಟಿ 2021ರಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ ವಿಷಯಗಳಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳ ಆಧಾರದ ಮೇಲೆ ಆಯ್ಕೆ ನಡೆದಿದೆ.

B.Tech (Agril. Eng), ಬಿ.ಟೆಕ್ (ಆಹಾರ ತಂತ್ರಜ್ಞಾನ) ಬಿ.ಟೆಕ್ (ಡೈರಿ ತಂತ್ರಜ್ಞಾನ): 2021ರ ಕೆಸಿಇಟಿ ಪರೀಕ್ಷೆಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ ವಿಷಯಗಳಲ್ಲಿ ಅಭ್ಯರ್ಥಿಗಳ ಕಾರ್ಯಕ್ಷಮತೆಯನ್ನು ಆಧರಿಸಿ ಅರ್ಹತೆ ಪಡೆಯಲಿದ್ದಾರೆ.

ಇಂದು ಬೆಂಗಳೂರಿನ ಮಲ್ಲೇಶ್ವರಂನ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದು, ಸಿಇಟಿ ಫಲಿತಾಂಶ ಪ್ರಕಟವಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ kea.kar.nic.in ವೆಬ್​ಸೈಟ್​ನಲ್ಲಿ ಫಲಿತಾಂಶವನ್ನು ವೀಕ್ಷಿಸಬಹುದು.530 ಕೇಂದ್ರಗಳ ಪೈಕಿ 86 ಕೇಂದ್ರಗಳು ಬೆಂಗಳೂರಿನಲ್ಲಿದ್ದವು. ಉಳಿದ ಜಿಲ್ಲೆಗಳಲ್ಲಿ ಒಟ್ಟು 444 ಕೇಂದ್ರಗಳಲ್ಲಿ ಸಿಇಟಿ ಪರೀಕ್ಷೆಯನ್ನು ಕೋವಿಡ್ ಮಾರ್ಗಸೂಚಿ ಪಾಲನೆಯೊಂದಿಗೆ ನಡೆಸಲಾಗಿತ್ತು.

KCET Result 2021 Announced on Karnataka CET Official Website KCET Rank list Mysore HK Meghan First Rank in CET.