ಬ್ರೇಕಿಂಗ್ ನ್ಯೂಸ್
20-09-21 06:06 pm Headline Karnataka News Network ಕರ್ನಾಟಕ
ಬೆಂಗಳೂರು, ಸೆ.20: ರಾಜ್ಯ ಕಾಂಗ್ರೆಸ್ ಘಟಕದ ಸಾರಥ್ಯ ವಹಿಸಿರುವ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪಕ್ಷವನ್ನು ಏನೇ ತಿಪ್ಪರಲಾಗ ಹೊಡೆದಾದ್ರೂ ಮುಂದಿನ ಬಾರಿ ಅಧಿಕಾರಕ್ಕೆ ತರಲೇಬೇಕು ಎಂಬ ಗುರಿಯನ್ನು ಕಾಂಗ್ರೆಸ್ ಹೈಕಮಾಂಡ್ ನೀಡಿದೆ. ಅದಕ್ಕಾಗಿ, ಇಬ್ಬರ ನಡುವೆ ಯಾರು ಸಿಎಂ ಆಗಬೇಕೆಂಬ ವಿಚಾರದಲ್ಲಿಯೂ ಕಾಂಗ್ರೆಸ್ ನಾಯಕರು ಒಪ್ಪಂದ ಏರ್ಪಡಿಸಿದ್ದಾರೆ. ಮೊದಲ ಎರಡೂವರೆ ವರ್ಷ ಸಿದ್ದರಾಮಯ್ಯ, ಆಬಳಿಕದ ಎರಡೂವರೆ ವರ್ಷ ಡಿಕೆ ಶಿವಕುಮಾರ್ ಸಿಎಂ ಎಂಬ ಲೆಕ್ಕಾಚಾರವನ್ನು ಮುಂದಿಟ್ಟಿದ್ದಾರೆ ಎನ್ನಲಾಗುತ್ತಿದ್ದು, ಸಿಎಂ, ಡಿಸಿಎಂ ಸ್ಥಾನ ಅದಲು ಬದಲು ಮಾಡಿಕೊಳ್ಳುವ ಬಗ್ಗೆ ಇಬ್ಬರು ನಾಯಕರು ಒಪ್ಪಿಕೊಂಡಿದ್ದಾರೆ.
ಅಷ್ಟೇ ಅಲ್ಲ, ಚುನಾವಣೆ ನಂತರ ಬಿಜೆಪಿ ಯಾವ ರೀತಿ ಅಧಿಕಾರಕ್ಕೆ ಬಂದಿದೆಯೋ ಅದೇ ರೀತಿ ಚುನಾವಣೆಗೆ ಮೊದಲೇ ಬಿಜೆಪಿಯಿಂದಲೇ ಆಪರೇಶನ್ ಮಾಡಲು ಕಾಂಗ್ರೆಸ್ ನಾಯಕರಿಗೆ ಟಾಸ್ಕ್ ನೀಡಲಾಗಿದೆ. ಅದಕ್ಕಾಗಿ ಪಕ್ಷದ ಧೋರಣೆಯಲ್ಲಿ ಮೃದು ಹಿಂದುತ್ವದ ನೀತಿಯನ್ನೂ ಜಾರಿಗೆ ತರಲು ಡಿ.ಕೆ. ಶಿವಕುಮಾರ್ ರೆಡಿಯಾಗಿದ್ದು, ಭಾರೀ ದೊಡ್ಡ ಯೋಜನೆ ತಯಾರಿಸಿದ್ದಾರೆ. ಬಿಜೆಪಿ ಶಾಸಕರು ಇರುವ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಒಂದೋ ಬಿಜೆಪಿ ಶಾಸಕರು ಅಥವಾ ಅಲ್ಲಿ ಪೈಪೋಟಿ ನೀಡಬಲ್ಲ ಒಂದು ಮತ್ತು ಎರಡನೇ ಹಂತದ ನಾಯಕರನ್ನು ಪಕ್ಷಕ್ಕೆ ಕರೆತರಲು ಪ್ಲಾನ್ ಆಗಿದೆ. ಇದಕ್ಕಾಗಿ ಕರಾವಳಿ ಸೇರಿದಂತೆ ರಾಜ್ಯಾದ್ಯಂತ ಬಿಜೆಪಿ ಪ್ರಾಬಲ್ಯದ ಜಿಲ್ಲೆಗಳಲ್ಲಿ ನೂರಕ್ಕೂ ಹೆಚ್ಚು ಪ್ರಭಾವಿ ನಾಯಕರನ್ನು ಕಾಂಗ್ರೆಸಿಗೆ ಕರೆತರಲು ಲಿಸ್ಟ್ ಮಾಡಲಾಗಿದೆ ಎನ್ನುವ ಸುದ್ದಿ ಹೊರಬಿದ್ದಿದೆ.
ಹಾಗೆ ನೋಡಿದರೆ, ಬಿಜೆಪಿ ಪಾಲಿಗೆ ಭದ್ರಕೋಟೆಯಾಗಿರುವುದು ಕರಾವಳಿ ಮತ್ತು ಮಧ್ಯ ಕರ್ನಾಟಕ ಮಾತ್ರ. ಉಳಿದಂತೆ, ಬೆಂಗಳೂರು ಮತ್ತು ಹುಬ್ಬಳ್ಳಿ ಕರ್ನಾಟಕದಲ್ಲಿ ಬಿಜೆಪಿ ಪ್ರಾಬಲ್ಯ ಹೊಂದಿದ್ದರೂ ಅದನ್ನು ಹಿಂದುತ್ವದ ಅಜೆಂಡಾದಲ್ಲಿ ಅಲ್ಲ. ಬಿಜೆಪಿ ಎಲ್ಲಿ ಬಲಿಷ್ಠವಾಗಿದೆಯೋ, ಅಲ್ಲಿಂದಲೇ ಬಿಜೆಪಿ ನಾಯಕರನ್ನು ಕಾಂಗ್ರೆಸಿಗೆ ಕರೆತರಲು ದೆಹಲಿ ಮಟ್ಟದಿಂದಲೇ ಯೋಜನೆ ತಯಾರಿಸಲಾಗಿದೆ. ಇದಕ್ಕಾಗಿ ಡಿಕೆ ಶಿವಕುಮಾರ್ ಮೂಲಕ ಹಣದ ಹೊಳೆ ಹರಿಸುವುದಕ್ಕೂ ಪ್ಲಾನ್ ಆಗಿದ್ಯಂತೆ. ಬಿಜೆಪಿ ಪ್ರಭಾವ ಇರುವ ಪ್ರತಿ ಜಿಲ್ಲೆಗಳಲ್ಲೂ ಅಸಮಾಧಾನಿತ ನಾಯಕರಿದ್ದು ಅವರನ್ನೇ ಪಟ್ಟಿ ಮಾಡಿ ಪಕ್ಷಕ್ಕೆ ಆಹ್ವಾನಿಸಲು ಸಿದ್ಧತೆ ನಡೆಸಲಾಗಿದೆ.
ಕರಾವಳಿ ಜಿಲ್ಲೆಗಳಲ್ಲಿ ಕಳೆದ ಬಾರಿ ಹೊಸ ಶಾಸಕರೇ ಹೆಚ್ಚು ಗೆದ್ದಿದ್ದಾರೆ. ಮುಂದಿನ ಚುನಾವಣೆಯಲ್ಲಿಯೂ ಮತ್ತೆ ಅವರಿಗೇ ಸ್ಥಾನ ಸಿಗುವುದು ಖಚಿತ. ಅಲ್ಲಿನ ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿಯೂ ಬಿಜೆಪಿಯಲ್ಲಿ ಮಾಜಿಯಾಗಿರುವ ಮತ್ತು ಸಂಘಟನೆಗಳ ಮೂಲಕ ಬೆಳೆದು ಬಂದಿರುವ ಶಾಸಕ ಸ್ಥಾನದ ಆಕಾಂಕ್ಷಿಗಳನ್ನು ಕಾಂಗ್ರೆಸಿನತ್ತ ತರಲು ಪ್ಲಾನ್ ಆಗಿದೆ. ಮಾಜಿ ಸಚಿವ ಕೃಷ್ಣ ಪಾಲೆಮಾರ್, ನಾಗರಾಜ ಶೆಟ್ಟಿ, ಪುತ್ತೂರು ಕ್ಷೇತ್ರದಲ್ಲಿ ಮಾಜಿ ಸಚಿವ ಡಿವಿ ಸದಾನಂದ ಗೌಡರ ಆಪ್ತ ಮತ್ತು ಅವರ ಜೊತೆ ಬಿಸಿನೆಸ್ ಪಾಲುದಾರನಾಗಿರುವ ಅಶೋಕ್ ಕುಮಾರ್ ರೈ, ಹಿಂದು ಸಂಘಟನೆಯಲ್ಲಿ ಬೆಳೆದು ಬಂದು ಕಳೆದ ಬಾರಿ ಬಿಜೆಪಿಯಿಂದ ಶಾಸಕ ಸ್ಥಾನಕ್ಕೆ ತೀವ್ರ ಪೈಪೋಟಿ ನೀಡಿದ್ದ ಸತ್ಯಜಿತ್ ಸುರತ್ಕಲ್ ಹೀಗೆ ಹಲವು ನಾಯಕರ ಹೆಸರು ಲಿಸ್ಟ್ ನಲ್ಲಿದೆ ಅನ್ನುವ ಮಾತು ಕೇಳಿಬರುತ್ತಿದೆ. ಕಾಂಗ್ರೆಸಿನಲ್ಲಿ ಶಾಸಕ ಸ್ಥಾನಕ್ಕೆ ಪೈಪೋಟಿ ನೀಡಬಲ್ಲ ನಾಯಕರ ಕೊರತೆ ಇರುವುದರಿಂದ ಬಿಜೆಪಿಯಿಂದ ಎರವಲು ಪಡೆದು ಸ್ಪರ್ಧೆಗಿಳಿಸುವ ಯೋಚನೆಯೂ ಇದೆ.
ಬಿಜೆಪಿ, ಜೆಡಿಎಸ್ ಶಾಸಕರನ್ನೂ ಕರೆತರಲು ಪ್ಲಾನ್
ಇದಲ್ಲದೆ, ಬಿಜೆಪಿ ಮತ್ತು ಜೆಡಿಎಸ್ ನಲ್ಲಿ ಶಾಸಕರಾಗಿರುವ ಮಂದಿಯನ್ನೂ ಕಾಂಗ್ರೆಸಿಗೆ ಕರೆಸಲು ಈಗಾಗ್ಲೇ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಅನ್ನುವುದು ಮೂಲಗಳ ಮಾಹಿತಿ. ತುಮಕೂರು ಜಿಲ್ಲೆಯಲ್ಲಿ ಜೆಡಿಎಸ್ ಶಾಸಕರಾಗಿರುವ ತುಮಕೂರು ಗ್ರಾಮಾಂತರ ಕ್ಷೇತ್ರದ ಡಿ.ಸಿ.ಗೌರೀಶಂಕರ್, ಗುಬ್ಬಿ ಕ್ಷೇತ್ರದ ಶಾಸಕ ಎಸ್.ಆರ್. ಶ್ರೀನಿವಾಸ್ ಅವರನ್ನು ಕಾಂಗ್ರೆಸಿಗೆ ಕರೆತರಲು ಮಾತುಕತೆ ನಡೆದಿದೆ. ಇದಲ್ಲದೆ, ಬಿಜೆಪಿ ಶಾಸಕರಾಗಿರುವ ಗೂಳಿಹಟ್ಟಿ ಶೇಖರ್,ಶಿವನಗೌಡ ನಾಯಕ್, ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್, ನಂಜನಗೂಡು ಕ್ಷೇತ್ರದ ಹರ್ಷವರ್ಧನ್, ಸೊರಬ ಕ್ಷೇತ್ರದ ಕುಮಾರ್ ಬಂಗಾರಪ್ಪ ಅವರನ್ನು ಪಕ್ಷಕ್ಕೆ ಸೆಳೆಯಲು ಕಾಂಗ್ರೆಸ್ ನಾಯಕರು ಮಾತುಕತೆ ನಡೆಸುತ್ತಿದ್ದಾರೆ.
ಈ ಹಿಂದೆ ಕಾಂಗ್ರೆಸಿನಲ್ಲೇ ಇದ್ದ ಕುಮಾರ್ ಬಂಗಾರಪ್ಪ, ತಮ್ಮ ತಂದೆಯ ವರ್ಚಸ್ಸನ್ನು ಉಳಿಸಿಕೊಂಡಿದ್ದಲ್ಲದೆ ಶಿವಮೊಗ್ಗ, ಚಿಕ್ಕಮಗಳೂರು, ಹಾವೇರಿ ಜಿಲ್ಲೆಯಲ್ಲಿ ಈಡಿಗ ಮತಗಳನ್ನು ಸೆಳೆಯಬಲ್ಲ ಕಾಂತ ಶಕ್ತಿ ಹೊಂದಿದ್ದಾರೆ. ಈಗಾಗ್ಲೇ ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಕುಮಾರ್ ಕೂಡ ಸೇರಿದರೆ ಕಾಂಗ್ರೆಸಿಗೆ ಈ ಭಾಗದಲ್ಲಿ ದೊಡ್ಡ ಶಕ್ತಿ ಬರಲಿದೆ ಅನ್ನುವ ಲೆಕ್ಕಾಚಾರ ಕಾಂಗ್ರೆಸಿನದ್ದು. ಶಿವಮೊಗ್ಗ, ಹಾವೇರಿ, ಉಡುಪಿ ಮತ್ತು ದಕ್ಷಿಣ ಕನ್ನಡ ಬಿಜೆಪಿ ಪಾಲಿಗೆ ಪ್ರಮುಖ ಜಿಲ್ಲೆಗಳು. ಯಡಿಯೂರಪ್ಪ ಒಂದ್ವೇಳೆ ಬಿಜೆಪಿಯಲ್ಲಿ ಸೈಡ್ ಲೈನ್ ಆದಲ್ಲಿ ಈಡಿಗ, ಬಿಲ್ಲವ ಮತಗಳನ್ನು ಸೆಳೆಯಬಲ್ಲ ನಾಯಕರನ್ನು ಪಕ್ಷಕ್ಕೆ ಕರೆತಂದಲ್ಲಿ ಈ ಭಾಗದಲ್ಲಿ ಕಾಂಗ್ರೆಸ್ ಶಾಸಕರನ್ನು ಗೆಲ್ಲಿಸಬಹುದು ಎನ್ನುವ ಲೆಕ್ಕಾಚಾರ ಇದೆ. ಕರಾವಳಿಯಲ್ಲಿ ಬಿಜೆಪಿ ಭದ್ರಕೋಟೆ ಆಗಿರುವುದರಿಂದ ಬಿಜೆಪಿಯಿಂದಲೇ ನಾಯಕರನ್ನು ಕರೆತಂದು ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಪ್ಲಾನ್ ಹಾಕಿದೆ.
ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಇದ್ದರೂ, ಒಂದ್ವೇಳೆ ಬಿಜೆಪಿ ಶಾಸಕರು ರಾಜಿನಾಮೆ ನೀಡಿ ಕಾಂಗ್ರೆಸಿಗೆ ಬಂದಲ್ಲಿ ಬೊಮ್ಮಾಯಿ ಸರಕಾರವೂ ಬಿದ್ದು ಹೋಗಲಿದೆ. ಮಧ್ಯಂತರ ಚುನಾವಣೆ ನಡೆದಲ್ಲಿ ಬಿಜೆಪಿಯನ್ನು ಮಣಿಸಲು ಏನೆಲ್ಲ ಮಾಡಬೇಕೋ ಅದಕ್ಕಾಗಿ ಕಾಂಗ್ರೆಸ್ ನಾಯಕರು ತಯಾರಿ ನಡೆಸುತ್ತಿದ್ದಾರೆ. ಒಂದ್ಕಡೆ ಮೈಸೂರಿನಲ್ಲಿ ದೇವಸ್ಥಾನ ಒಡೆದು ರಾಜ್ಯಾದ್ಯಂತ ಬಿಜೆಪಿ ಸರಕಾರ ಬಹುಸಂಖ್ಯಾತರ ಕೋಪಕ್ಕೆ ಗುರಿಯಾಗಿದೆ. ಇದರ ನಡುವಲ್ಲೇ ಕಾಂಗ್ರೆಸ್ ನಾಯಕರು ಅದೇ ನೆಪ ಇಟ್ಟುಕೊಂಡು ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ. ಕಾಂಗ್ರೆಸ್ ಸಾರಥ್ಯ ವಹಿಸಿರುವ ಪ್ರಭಾವಿ ನಾಯಕ ಡಿಕೆಶಿ ಶಕ್ತಿ ಮತ್ತು ಅವರ ನಿಗೂಢ ಯೋಜನೆ ಬಗ್ಗೆ ತಿಳಿದಿದ್ದರಿಂದಲೇ ಮಾಜಿ ಸಿಎಂ ಯಡಿಯೂರಪ್ಪ ಪರೋಕ್ಷವಾಗಿ ಬಿಜೆಪಿ ನಾಯಕರಿಗೆ ಕಿವಿ ಚುಚ್ಚುವ ರೀತಿ ದಾವಣಗೆರೆ ಕಾರ್ಯಕಾರಿಣಿಯಲ್ಲಿ ಸುಳಿವು ಬಿಟ್ಟುಕೊಟ್ಟಿದ್ದಾರೆ. ಇದಕ್ಕೆದುರಾಗಿ ಬಿಜೆಪಿ ಯಾವ ರೀತಿಯ ಪಟ್ಟು ಹಾಕುತ್ತೋ, ಅದಕ್ಕೆ ತಕ್ಕಂತೆ ಚುನಾವಣೆ ಮತ್ತು ಭವಿಷ್ಯ ಇರಲಿದೆ ಅನ್ನೋದು ಸತ್ಯ
Congress has prepared a plan for nationwide agitations to take on the BJP government ahead in Karnataka. Special political report by Headline Karnataka.
07-02-25 11:00 pm
Bangalore Correspondent
ಮುಡಾ ಹಗರಣ ; ಸಿಎಂ ಸಿದ್ದರಾಮಯ್ಯಗೆ ಹೈಕೋರ್ಟ್ ರಿಲೀಫ...
07-02-25 08:09 pm
Microfinance Karnataka, Governor, Siddaramai...
07-02-25 04:22 pm
National aerobic Championship Karnataka: ಜಮ್ಮ...
06-02-25 07:55 pm
Yadagiri Accident, Five Killed: ಯಾದಗಿರಿ; ಸಾರಿ...
05-02-25 06:39 pm
08-02-25 02:23 pm
HK News Desk
BJP Delhi, AAP, Live result, Election: 27 ವರ್...
08-02-25 12:14 pm
Mahakumbh accident, Jaipur: ಜೈಪುರದಲ್ಲಿ ಭೀಕರ ರ...
07-02-25 05:27 pm
Zamfara school fire accident: SHOCKING; ತರಗತ...
07-02-25 05:23 pm
Telangana, student suicide: ಪ್ರಾಂಶುಪಾಲರು ಬೈದರ...
06-02-25 05:37 pm
08-02-25 10:46 pm
Mangalore Correspondent
Mines, Krishnaveni Mangalore, Dinesh gundrao;...
08-02-25 01:08 pm
Covid 19 death, Karnataka CM Siddaramaiah: ಕೋ...
07-02-25 10:13 pm
Brijesh Chowta, DK MP, Piyush Goyal: ದ.ಕ.ದಲ್ಲ...
07-02-25 08:24 pm
Belthangady, House, Evil spirit: ಬೆಳ್ತಂಗಡಿ ;...
07-02-25 03:12 pm
08-02-25 10:16 pm
Bangalore Correspondent
ಕಲಬುರಗಿ | ಪರಸ್ತ್ರೀ ಜೊತೆ ಸುತ್ತಾಡುತ್ತಿದ್ದ ಪತಿಯ...
08-02-25 06:21 pm
Mangalore Mayor raid, slaughterhouse Kudroli:...
08-02-25 04:36 pm
Bidar murder crime: ಬೀದರ್ ; ಮನೆಮಂದಿ ನೋಡಿದ ಹುಡ...
08-02-25 01:00 pm
Mangalore court, Crime: ಕುಡಿದ ಮತ್ತಿನಲ್ಲಿ ಪತ್ನ...
07-02-25 11:55 am