ಮೈಸೂರು ಕಮರ್ಶಿಯಲ್ ಟ್ಯಾಕ್ಸ್ ಕಚೇರಿಗೆ ಬಾಂಬ್ ಬೆದರಿಕೆ ; ಗಾಬರಿ ಬಿದ್ದು ಹೊರಗೆ ಓಡಿದ ಸಿಬಂದಿ !

22-09-21 01:42 pm       Headline Karnataka News Network   ಕರ್ನಾಟಕ

ಮೈಸೂರಿನ ವಾಣಿಜ್ಯ ತೆರಿಗೆ ಕಚೇರಿಯಲ್ಲಿ ಬಾಂಬ್ ಇರುವ ಬಗ್ಗೆ ಬೆದರಿಕೆ ಕರೆ ಬಂದಿದೆ. ಗಾಬರಿಗೊಂಡು ಕಚೇರಿಯಿಂದ ಸಿಬ್ಬಂದಿಗಳು ಹೊರ ಬಂದಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.

ಮೈಸೂರು, ಸೆ. 22 : ಮೈಸೂರಿನ ವಾಣಿಜ್ಯ ತೆರಿಗೆ ಕಚೇರಿಯಲ್ಲಿ ಬಾಂಬ್ ಇರುವ ಬಗ್ಗೆ ಬೆದರಿಕೆ ಕರೆ ಬಂದಿದೆ. ಗಾಬರಿಗೊಂಡು ಕಚೇರಿಯಿಂದ ಸಿಬ್ಬಂದಿಗಳು ಹೊರ ಬಂದಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.

ಮೈಸೂರಿನ ದೇವರಾಜ ಮೊಹಲ್ಲಾದಲ್ಲಿರುವ ವಾಣಿಜ್ಯ ತೆರಿಗೆ ಕಚೇರಿಯಲ್ಲಿ ಬಾಂಬ್ ಇಡಲಾಗಿದೆ ಎಂದು ಬುಧವಾರ ಬೆಳಗ್ಗೆ ಬೆದರಿಕೆ ಕರೆ ಬಂದಿದೆ. ಸ್ಥಳಕ್ಕೆ ಸ್ಪೋಟಕ ಪತ್ತೆ ದಳದ ಸಿಬ್ಬಂದಿ ಹಾಗೂ ಪೊಲೀಸರು ಭೇಟಿ ನೀಡಿದ್ದು, ಪರಿಶೀಲ‌ನೆ ನಡೆಸುತ್ತಿದ್ದಾರೆ. 

ವಾಣಿಜ್ಯ ತೆರಿಗೆ ಕಚೇರಿಯಲ್ಲಿ ಬಾಂಬ್ ಇದೆ ಎಂದು ಪತ್ರದ ಮೂಲಕ ಬೆದರಿಕೆ ಹಾಕಲಾಗಿದೆ. ಲಕ್ಷ್ಮೀಪುರಂನಲ್ಲಿರುವ ಆಡಿಟರ್ ಕಚೇರಿ ಗೇಟ್ ನಲ್ಲಿ ಬೆದರಿಕೆ ಪತ್ರ ಸಿಕ್ಕಿದೆ. ಇಂದು ಮಧ್ಯಾಹ್ನ 12 ರಿಂದ 1 ಗಂಟೆ ಒಳಗೆ ಕಚೇರಿಯಲ್ಲಿ ಬಾಂಬ್ ಸ್ಪೋಟವಾಗಲಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.

ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ವಾಣಿಜ್ಯ ತೆರಿಗೆ ಕಚೇರಿಗೆ ಡಿಸಿಪಿ ಪ್ರದೀಪ್ ಗುಂಟೆ ಭೇಟಿ ನೀಡಿದರು. ಘಟನೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ವಾಣಿಜ್ಯ ತೆರಿಗೆ ಕಚೇರಿ ಕಟ್ಟಡದ ಆವರಣದಲ್ಲಿದ್ದ ಲಾರಿ ಹಾಗೂ ವಾಹನಗಳನ್ನು ಹೊರಕ್ಕೆ ಕಳಿಸಲಾಗಿದೆ. ಪೊಲೀಸರು ಇಡೀ ಕಚೇರಿ ಆವರಣದಲ್ಲಿ ಬಾಂಬ್ ಪತ್ತೆಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.

Video: 

Bomb threat letter found in Mysuru states Commercial Tax Building will be blast staff flee from office. Police are now investagting the case. Parked Vehicles and staffs are sent out from the premises. High alert was issued to Mysuru and Mangalore few days ago.