ಬೆಂಗಳೂರನ್ನು ಬೆಚ್ಚಿಬೀಳಿಸಿದ ಬ್ಲಾಸ್ಟ್ ; 20 ಮೀಟರ್ ದೂರಕ್ಕೆ ದೇಹ ಛಿದ್ರ ! ಪಟಾಕಿ ದಾಸ್ತಾನು ಕೇಂದ್ರದಲ್ಲಿ ಸ್ಫೋಟಕ್ಕೆ ಪಟಾಕಿ ಕಾರಣವಲ್ಲ – ಎಫ್ಎಸ್ಎಲ್

23-09-21 05:48 pm       Bangalore Correspondent   ಕರ್ನಾಟಕ

ಚಾಮರಾಜಪೇಟೆಯ ತರಗುಪೇಟೆಯಲ್ಲಿ ನಡೆದಿರುವ ಘಟನೆ ಇಡೀ ಬೆಂಗಳೂರನ್ನು ಬೆಚ್ಚಿಬೀಳಿಸಿದೆ. ಉಗ್ರರು ವಿಧ್ವಂಸಕ ಕೃತ್ಯಕ್ಕೆ ಸಂಚು ಹಾಕುತ್ತಿದ್ದಾರೆಂಬ ಗುಪ್ತಚರ ವರದಿ ಬೆನ್ನಲ್ಲೇ ವಿಚಿತ್ರ ರೀತಿಯಲ್ಲಿ ಸ್ಫೋಟ ಆಗಿದ್ದು ಏನೋ ಬಾಂಬ್ ಸ್ಫೋಟ ಆಗಿದೆಯಾ ಅನ್ನುವ ಸಂಶಯ ಮೂಡಿದೆ.

ಬೆಂಗಳೂರು, ಸೆ.23: ಚಾಮರಾಜಪೇಟೆಯ ತರಗುಪೇಟೆಯಲ್ಲಿ ನಡೆದಿರುವ ಘಟನೆ ಇಡೀ ಬೆಂಗಳೂರನ್ನು ಬೆಚ್ಚಿಬೀಳಿಸಿದೆ. ಉಗ್ರರು ವಿಧ್ವಂಸಕ ಕೃತ್ಯಕ್ಕೆ ಸಂಚು ಹಾಕುತ್ತಿದ್ದಾರೆಂಬ ಗುಪ್ತಚರ ವರದಿ ಬೆನ್ನಲ್ಲೇ ವಿಚಿತ್ರ ರೀತಿಯಲ್ಲಿ ಸ್ಫೋಟ ಆಗಿದ್ದು, ಮೂವರ ದೇಹಗಳು ಛಿದ್ರ ಛಿದ್ರಗೊಂಡು ಬಿದ್ದಿದ್ದನ್ನು ನೋಡಿದರೆ ಏನೋ ಬಾಂಬ್ ಸ್ಫೋಟ ಆಗಿದೆಯಾ ಅನ್ನುವ ಸಂಶಯ ಮೂಡಿದೆ.

ಸ್ಥಳೀಯರ ಮಾಹಿತಿ ಪ್ರಕಾರ, ಸ್ಫೋಟ ನಡೆದಿರುವ ಜಾಗದಲ್ಲಿ ಪಟಾಕಿ ದಾಸ್ತಾನು ಕೇಂದ್ರ ಇತ್ತು. ಅಲ್ಲದೆ, ಪಕ್ಕದಲ್ಲೇ ಪಂಕ್ಚರ್ ಅಂಗಡಿ ಇತ್ತು. ಮತ್ತೊಂದು ಕಡೆ ಸಣ್ಣ ಕ್ಯಾಂಟೀನ್ ಇತ್ತು. ಮಧ್ಯಾಹ್ನ 12 ಗಂಟೆ ಸುಮಾರಿಗೆ ಯಾರೂ ಊಹಿಸದ ರೀತಿ ಬ್ಲಾಸ್ಟ್ ಆಗಿದ್ದು, ಕ್ಯಾಂಟೀನಲ್ಲಿ ಟೀ ಕುಡಿಯುತ್ತಿದ್ದ ಒಬ್ಬರು ಸೇರಿದಂತೆ ಮೂವರು 50 ಅಡಿ ಆವರಣದಲ್ಲಿ ಛಿದ್ರ ಛಿದ್ರಗೊಂಡು ಬಿದ್ದಿದ್ದಾರೆ. ಪಟಾಕಿ ದಾಸ್ತಾನು ಕೇಂದ್ರದಲ್ಲಿದ್ದ ಅಸ್ಲಾಮ್, ತಮಿಳುನಾಡು ಮೂಲದ ಮನೋಹರ್, ಅದೇ ಸ್ಥಳದಲ್ಲಿ ಟೀ ಕುಡಿಯುತ್ತಿದ್ದ ಫಯಾಜ್ ದೇಹಗಳು ಛಿದ್ರಗೊಂಡಿವೆ ಎನ್ನುವ ಮಾಹಿತಿ ಲಭಿಸಿದೆ.

ಈ ನಡುವೆ ಸ್ಥಳದಲ್ಲಿ ಎಫ್ಎಸ್ಎಲ್ ತಜ್ಞರು ಪರಿಶೀಲನೆ ನಡೆಸಿದ್ದು, ಘಟನೆಗೆ ಪಟಾಕಿ ಸ್ಫೋಟ ಕಾರಣ ಅಲ್ಲ ಎನ್ನುವ ವರದಿ ನೀಡಿದ್ದಾರೆ. ಪಟಾಕಿ ಸ್ಫೋಟದಿಂದ ಇಷ್ಟು ದೊಡ್ಡ ಮಟ್ಟಿನಲ್ಲಿ ಬ್ಲಾಸ್ಟ್ ಆಗಲು ಸಾಧ್ಯವಿಲ್ಲ. ಬೆಂಕಿ ಹತ್ತಿಕೊಂಡಿದ್ದರೆ, ಪಟಾಕಿ ಉರಿದು ಬ್ಲಾಸ್ಟ್ ಆಗುತ್ತಿತ್ತು. ಇಲ್ಲಿ ಬೇರೆ ಯಾವುದೋ ಸ್ಫೋಟಕ ಬಳಕೆಯಾಗಿರುವ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ.

ಸ್ಥಳದಲ್ಲಿ ಯಾರೆಲ್ಲ ಇದ್ದರು ಎನ್ನುವುದು ಸರಿಯಾದ ಮಾಹಿತಿ ಇಲ್ಲ. ಆರಂಭದಲ್ಲಿ ಸಿಲಿಂಡರ್ ಸ್ಫೋಟ ಆಗಿತ್ತು ಅನ್ನುವ ಮಾಹಿತಿಗಳಿದ್ದವು. ಆದರೆ, ಅಲ್ಲಿ ಪಟಾಕಿ ದಾಸ್ತಾನು ಕೇಂದ್ರ ಇತ್ತು. ಅಲ್ಲಿ ಸ್ಫೋಟ ಆಗಿದೆ ಎನ್ನಲಾಗುತ್ತಿದೆ. ಆದರೆ, ಪಟಾಕಿ ಅಂಗಡಿಗೆ ಬೆಂಕಿ ಹತ್ತಿಕೊಂಡಿದ್ದು ಕಂಡುಬಂದಿಲ್ಲ. ಏನೋ ಸ್ಫೋಟ ಆಗಿದ್ದರಿಂದ ಪಟಾಕಿಗಳು ನೂರು ಅಡಿ ವ್ಯಾಪ್ತಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

Read: ಬೆಂಗಳೂರಿನಲ್ಲಿ ಭಾರೀ ಆಸ್ಫೋಟ ; ಮೂವರ ದೇಹಗಳು ಛಿದ್ರ ಛಿದ್ರ ! ಬಾಂಬ್ ಮಾದರಿ ಸ್ಫೋಟದ ಬಗ್ಗೆ ಶಂಕೆ

3 dead in blast in Bengaluru  officials probing case say it's not cylinder or cracker blast. 3 dead in blast in Bengaluru  officials probing case say it's not cylinder or cracker blast.