ಪತಿ ಕೊರೊನಾಗೆ ಬಲಿ ; ಮೂವರು ಮಕ್ಕಳೊಂದಿಗೆ ನದಿಗೆ ಹಾರಿದ ಪತ್ನಿ, ಇಬ್ಬರ ಸಾವು - ಮತ್ತಿಬ್ಬರು ಪಾರು !

29-09-21 08:23 pm       Headline Karnataka News Network   ಕರ್ನಾಟಕ

ಗಂಡನನ್ನು ಕಳೆದುಕೊಂಡು ಕಣ್ಣೀರಿನಲ್ಲಿ ಮುಳುಗಿದ್ದ ಹೆಂಡತಿ ತನ್ನ ಮೂವರು ಮಕ್ಕಳೊಂದಿಗೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಹೊಳೆ ಆಲೂರು ಗ್ರಾಮದಲ್ಲಿ ನಡೆದಿದೆ.

ಗದಗ, ಸೆಪ್ಟೆಂಬರ್ 29: ಗಂಡನನ್ನು ಕಳೆದುಕೊಂಡು ಕಣ್ಣೀರಿನಲ್ಲಿ ಮುಳುಗಿದ್ದ ಹೆಂಡತಿ ತನ್ನ ಮೂವರು ಮಕ್ಕಳೊಂದಿಗೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಹೊಳೆ ಆಲೂರು ಗ್ರಾಮದಲ್ಲಿ ನಡೆದಿದೆ.

8 ವರ್ಷದ ಹೆಣ್ಣು ಮಗು ಮತ್ತು ತಾಯಿ ಉಮಾದೇವಿ(45) ಸಾವನ್ನಪ್ಪಿದ್ದಾರೆ. ತಾಯಿ ಕೈಯಿಂದ ತಪ್ಪಿಸಿಕೊಂಡು 12, 14 ವರ್ಷದ ಇಬ್ಬರು ಮಕ್ಕಳು ಪಾರಾಗಿದ್ದಾರೆ. 

ಉಮಾದೇವಿಯ ಪತಿ ಮೂರು ತಿಂಗಳ ಹಿಂದೆ ಕೋವಿಡ್-19 ಸೋಂಕಿಗೆ ಮೃತಪಟ್ಟಿದ್ದರು. ದಂಪತಿಗೆ ನಾಲ್ವರು ಹೆಣ್ಣುಮಕ್ಕಳು. ಮೊದಲ ಮಗಳು ಪಿಯುಸಿಯಲ್ಲಿ ಹುಬ್ಬಳ್ಳಿಯಲ್ಲಿ ಕಾಲೇಜಿಗೆ ಹೋಗುತ್ತಿದ್ದು ಇನ್ನು ಮೂವರು ಮಕ್ಕಳು ಮಹಿಳೆಯ ಜೊತೆಗೇ ಇದ್ದರು. ಪತಿ ತೀರಿಕೊಂಡ ಮೇಲೆ ತೀವ್ರ ನೊಂದಿದ್ದ ಉಮಾದೇವಿ  ನಸುಕಿನ ಜಾವ ಮಕ್ಕಳನ್ನು ಎಬ್ಬಿಸಿ ಊರಿಗೆ ಹೋಗೋಣ ಎಂದು ಹೊರಡಿಸಿ ಕರೆದುಕೊಂಡು ಹೋಗಿ ನದಿ ಬಳಿ ಹೋಗಿ ಹಾರಿದ್ದಾರೆ.

Gadag Depressed by husbands death wife jumps into the river with three children. Two dead including Mother and eight year old daughter.