ಮುಳುಗುತ್ತಿದ್ದ ಬೋಟ್ ನಿಂದ 15 ಜನ ಮೀನುಗಾರರ ರಕ್ಷಣೆ.

10-09-20 01:49 pm       Uttara Kannada Correspondent   ಕರ್ನಾಟಕ

ಸಮುದ್ರ ಮಧ್ಯೆ ಮುಳುಗುತ್ತಿದ್ದ ಮೀನುಗಾರಿಕಾ ಬೋಟ್ ನಲ್ಲಿದ್ದ 15 ಮಂದಿ ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ.

ಹೊನ್ನಾವರ, ಸಪ್ಟೆಂಬರ್ 10: ಆಳ ಸಮುದ್ರದಲ್ಲಿ ಮುಳುಗುತ್ತಿದ್ದ ಮೀನುಗಾರಿಕಾ ಬೋಟ್ ನಲ್ಲಿದ್ದ 15 ಮಂದಿ ಮೀನುಗಾರರನ್ನು ಇತರ ಮೀನುಗಾರಿಕಾ ಬೋಟ್ ಗಳು ರಕ್ಷಿಸಿದ ಘಟನೆ ಬೆಳಕಿಗೆ ಬಂದಿದೆ. ಹೊನ್ನಾವರ ಮೀನುಗಾರಿಕಾ ಬಂದರಿನಿಂದ ಮೀನುಗಾರಿಕೆಗೆ ತೆರಳಿದ‌ ಬೋಟ್ ನಲ್ಲಿ ಏಕಾಏಕಿ ತಾಂತ್ರಿಕ ದೋಷ ಕಂಡು ಬಂದಿತ್ತು. ಈ ಸಂದರ್ಭದಲ್ಲಿ ಭಾರೀ ಅಲೆಗಳ ಹೊಡೆತಕ್ಕೆ ಸಿಲುಕಿ ಬೋಟ್ ಮುಳುಗಿದೆ.

ಬೋಟ್ ನಲ್ಲಿದ್ದ ಸುಮಾರು 15 ಜನರನ್ನು ಇತರ ಬೋಟ್ ನ ಮೀನುಗಾರರು ರಕ್ಷಣೆ ಮಾಡಿದ್ದಾರೆ. ಫೆಲಿಕ್ಸ್ ಎಂಬುವವರಿಗೆ ಸೇರಿದ ಸೇಂಟ್ ಅಂಟೋನಿ ಹೆಸರಿನ ಬೋಟ್ ಇದ್ದಾಗಿದ್ದು, ಎಂದಿನಂತೆ ಹೊನ್ನಾವರ ಮೀನುಗಾರಿಕಾ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆ ತೆರಳಿತ್ತು. ಆದ್ರೆ ತಾಂತ್ರಿಕ ದೋಷದಿಂದಾಗಿ ಮುಳುಗಡೆಯಾಗಿದ್ದು, ಲಕ್ಷಾಂತರ ರೂಪಾಯಿ ಹಾನಿ ಉಂಟಾಗಿದೆ. ಇನ್ನೂ ಮುಳುಗಡೆಯಾಗಿರುವ ಬೋಟ್ ನಿಂದ ರಕ್ಷಣೆ ಮಾಡಲಾಗಿರುವ 15 ಜನರನ್ನು ಬೇರೊಂದು ಬೋಟ್ ಮೂಲಕ‌ ಕರೆತರಲಾಗಿದೆ.

Join our WhatsApp group for latest news updates