ಬ್ರೇಕಿಂಗ್ ನ್ಯೂಸ್
11-10-21 07:20 pm Headline Karnataka News Network ಕರ್ನಾಟಕ
ಬೆಂಗಳೂರು, ಅ.11: ಪ್ರತಿಭೆಗೆ ಯಾರದ್ದೇ ಕೊಂಕುತನ ಅಡ್ಡಿಯಾಗಲ್ಲ ಅನ್ನೋದು ಮತ್ತೆ ಸಾಬೀತಾಗಿದೆ. ಆಕೆ, ತುಂಬ ಪ್ರತಿಭಾವಂತ ಹುಡುಗಿ. ಕೊರೊನಾ ಎಡವಟ್ಟಿನ ಕಾರಣ ಎಸ್ಸೆಸ್ಸೆಲ್ಸಿ ಓದುತ್ತಿದ್ದ ಮಗಳ ಫೀಸನ್ನು ಕಟ್ಟಲು ಕುಟುಂಬಕ್ಕೆ ಕಷ್ಟವಾಗಿತ್ತು. ಹಿಂದಿನ ವರ್ಷದ ಶುಲ್ಕ ಕಟ್ಟಿಲ್ಲ ಎಂದು ಆಳ್ವಾಸ್ ವಿದ್ಯಾಸಂಸ್ಥೆಯವರು ಆಕೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವುದಕ್ಕೇ ಅವಕಾಶ ನೀಡಿರಲಿಲ್ಲ. ಕೊನೆಗೆ ವಿದ್ಯಾರ್ಥಿನಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಗೆ ಪತ್ರ ಬರೆದು, ಆನಂತರ ಪೂರಕ ಪರೀಕ್ಷೆಗೆ ಹಾಜರಾಗಿದ್ದಳು. ಭವಿಷ್ಯವನ್ನೇ ಪಣಕ್ಕೊಡ್ಡಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿ ಈವತ್ತು ಯಾರೂ ನಿರೀಕ್ಷೆ ಮಾಡದ್ದನ್ನು ಸಾಧಿಸಿದ್ದಾಳೆ.
ಮೂಡುಬಿದ್ರೆಯ ಆಳ್ವಾಸ್ ವಸತಿ ಶಾಲೆಯ ವಿದ್ಯಾರ್ಥಿನಿ ಗ್ರೀಷ್ಮಾ ನಾಯ್ಕ್ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಈ ಬಾರಿ ರಾಜ್ಯಕ್ಕೇ ಪ್ರಥಮ ಸ್ಥಾನಿಯಾಗಿದ್ದಾರೆ. ಹುಡುಗಿಯ ಆಸೆಗೆ ಶಾಲಾಡಳಿತ ಸಂಸ್ಥೆ ತಣ್ಣೀರೆರಚಿದ್ರೂ, ಅಂದಿನ ಶಿಕ್ಷಣ ಸಚಿವರು ಸಕಾಲದಲ್ಲಿ ಸ್ಪಂದಿಸಿ ಪರೀಕ್ಷೆ ಬರೆಯಲು ಅನುವು ಮಾಡಿಕೊಟ್ಟಿದ್ದು ಈಗ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ.
ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಬಿಡುಗಡೆಗೊಳಿಸಿ ಸುದ್ದಿಗೋಷ್ಠಿ ನಡೆಸಿದ ಬಿ.ಸಿ.ನಾಗೇಶ್, ಜುಲೈ 19 ಮತ್ತು 22ರಂದು ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಗ್ರೀಷ್ಮಾಗೆ ಅವಕಾಶ ನಿರಾಕರಿಸಲಾಗಿತ್ತು. ಈ ವಿಷಯ ತಿಳಿದ ಅಂದಿನ ಶಿಕ್ಷಣ ಸಚಿವ ಸುರೇಶ್ ಕುಮಾರ್ ಗ್ರೀಷ್ಮಾಳ ಮನೆಗೆ ತೆರಳಿ ಸಮಾಧಾನ ಹೇಳಿದ್ದರು. ಆನಂತರ, ಸೆ.27 ಮತ್ತು 29ರಂದು ನಡೆದಿದ್ದ ಪೂರಕ ಪರೀಕ್ಷೆಯಲ್ಲಿ ಕುಳಿತು ಪರೀಕ್ಷೆ ಬರೆಯಲು ಅನುವು ಮಾಡಲಾಗಿತ್ತು. ಆಕೆಯೀಗ 625ಕ್ಕೆ 599 ಅಂಕ ಪಡೆಯುವ ಮೂಲಕ ರಾಜ್ಯಕ್ಕೇ ಪ್ರಥಮ ಸ್ಥಾನಿ ಆಗಿದ್ದಾಳೆ ಎಂದು ಹೇಳಿದರು.
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಗ್ರೀಷ್ಮಾ ನಾಯ್ಕ್ ಮೂಡುಬಿದ್ರೆಯ ಆಳ್ವಾಸ್ ವಿದ್ಯಾಸಂಸ್ಥೆಯ ವಸತಿ ಶಾಲೆಯಲ್ಲಿ ಕಲಿಯುತ್ತಿದ್ದಳು. 9ನೇ ಕ್ಲಾಸಿನಲ್ಲಿ 96 ಶೇಕಡಾ ಅಂಕ ಪಡೆದಿದ್ದ ಗ್ರೀಷ್ಮಾ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ರೆಡಿ ಮಾಡಿಕೊಂಡಿದ್ದಳು. ಆದರೆ, ಹಿಂದಿನ ಸಾಲಿನ (ವಸತಿ ಮತ್ತು ಊಟದ ಶುಲ್ಕ) ಶಾಲೆಯ ಫೀಸನ್ನು ಕಟ್ಟಿರದ ಕಾರಣ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವುದಕ್ಕೆ ಶಾಲಾಡಳಿತ ಅವಕಾಶ ಕೊಟ್ಟಿರಲಿಲ್ಲ. ಕೊರೊನಾ ಲಾಕ್ಡೌನ್ ಕಾರಣದಿಂದ ಕುಟುಂಬಕ್ಕೆ ತೊಂದರೆಯಾಗಿದ್ದರಿಂದ ಶಾಲಾ ಶುಲ್ಕ ಕಟ್ಟಿರಲಿಲ್ಲ. ಈ ಬಗ್ಗೆ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದ ಗ್ರೀಷ್ಮಾ ನಾಯಕ್, ನಾವು ಪೂರ್ತಿಯಾಗಿ ಶುಲ್ಕ ಭರಿಸುತ್ತೇವೆ. ನಮಗೆ ರಿಯಾಯಿತಿ ಕೊಡುವುದು ಬೇಡ. ಆದರೆ, ಸ್ವಲ್ಪ ಸಮಯ ಕೊಡಿ ಅಷ್ಟೇ. ಹಾಗೆಂದು, ಪರೀಕ್ಷೆ ಬರೆಯದಂತೆ ಮಾಡಿ ಒಂದು ವರ್ಷದ ಅವಧಿಯನ್ನು ವೇಸ್ಟ್ ಮಾಡಬೇಡಿ, ಭವಿಷ್ಯಕ್ಕೆ ಹುಳಿ ಹಿಂಡದಿರಿ ಎಂದು ಗೋಗರೆದಿದ್ದಳು.
ಈಕೆಯ ಪತ್ರ ಮತ್ತು ಈ ಕುರಿತು ಸುದ್ದಿಯಾಗುತ್ತಿದ್ದಂತೆ ಎಚ್ಚೆತ್ತ ಆಗಿನ ಶಿಕ್ಷಣ ಸಚಿವ ಸುರೇಶ್ ಕುಮಾರ್ ತುಮಕೂರಿನ ಮನೆಗೆ ತೆರಳಿ, ಹುಡುಗಿಗೆ ಸಾಂತ್ವನ ಹೇಳಿದ್ದರು. ಇನ್ನೇನು ಪರೀಕ್ಷೆಗೆ ದಿನ ಹತ್ತಿರ ಬಂದಿರುವುದರಿಂದ ಈಗಿನದಕ್ಕೆ ಸಾಧ್ಯವಾಗದಿದ್ದರೆ, ಮುಂದಿನ ತಿಂಗಳು ನಡೆಯುವ ಪೂರಕ ಪರೀಕ್ಷೆ ಬರೆಯುವಂತೆ ಮನವೊಲಿಸಿದ್ದರು. ಪರಿಶಿಷ್ಟ ಜಾತಿ ವಿದ್ಯಾರ್ಥಿನಿ ಆಗಿದ್ದರಿಂದ ಆಕೆಗೆ ಪರೀಕ್ಷಾ ಶುಲ್ಕದಲ್ಲಿ ರಿಯಾಯಿತಿಯೂ ಇತ್ತು. ಶಾಲಾಡಳಿತ ನಡೆಸಿಕೊಂಡ ರೀತಿ ಬಗ್ಗೆ ನೋವಿದ್ದರೂ, ಗ್ರೀಷ್ಮಾ ಅದೇ ಶಾಲೆಯಲ್ಲಿ ಪೂರಕ ಪರೀಕ್ಷೆ ಬರೆದಿದ್ದಳು. ಈಗ ಫಲಿತಾಂಶದಲ್ಲಿ ಆಳ್ವಾಸ್ ವಸತಿ ಶಾಲೆಯ ಹೆಸರನ್ನು ರಾಜ್ಯದಲ್ಲೇ ಮಿಂಚು ಹರಿಸುವಂತೆ ಮಾಡಿದ್ದಾಳೆ.
ಕಳೆದ ವರ್ಷ ಕೊರೊನಾ ಕಾರಣದಿಂದಾಗಿ ಹೆಚ್ಚಿನ ಶಾಲೆಗಳಲ್ಲಿ ತರಗತಿ ನಡೆದಿರಲಿಲ್ಲ. ಹೀಗಾಗಿ ಈ ಬಾರಿಯೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳನ್ನು ನೇರವಾಗಿ ಪಾಸ್ ಮಾಡುವಂತೆ ಕೆಲವರ ಒತ್ತಾಯಗಳಿದ್ದರೂ, ಸಚಿವ ಸುರೇಶ್ ಕುಮಾರ್ ಆಬ್ಚೆಕ್ಟಿವ್ ಮಾದರಿಯಲ್ಲಿ ಪರೀಕ್ಷೆ ನಡೆದಿದ್ದರು. ಎಲ್ಲ ಪಠ್ಯಗಳನ್ನೂ ಕ್ರೋಢೀಕರಿಸಿ, ಎರಡೇ ದಿನದಲ್ಲಿ ಪರೀಕ್ಷೆ ಮುಗಿಸಿದ್ದರು. ಕೊರೊನಾ ಆತಂಕದ ನಡುವೆಯೇ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳ ಫಲಿತಾಂಶ ಬಂದಿದ್ದು, 55 ಶೇ. ಮಂದಿ ತೇರ್ಗಡೆಯಾಗಿದ್ದಾರೆ.
SSLC 2021 results Grishma Naik of Alvas college first topper in Karnataka. Alvas college haven't allowed her to write the exam and her parents couldn't pay the fees. But after the intervention of Former Education Minister Suresh Kumar she was allowed to write the exam and has bagged the tittle of being the topper for the state of Karnataka.
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
18-09-25 02:42 pm
Mangalore Correspondent
ಜಾತಿ ಗಣತಿ ಮೊದಲೇ ಮನೆಗಳಿಗೆ ಸ್ಟಿಕ್ಕರ್ ಅಂಟಿಸಿ ಗೊಂ...
18-09-25 02:19 pm
Dharmasthala: ಬಂಗ್ಲೆಗುಡ್ಡೆ ಕಾಡಿನಲ್ಲಿ 9 ಕಡೆ ಮನ...
17-09-25 11:05 pm
Mahesh Shetty Timarodi, Arms, FIR: ಮಹೇಶ್ ಶೆಟ್...
17-09-25 10:37 pm
Poonja International Hotel, Prabhakar Poonja...
17-09-25 10:06 pm
18-09-25 11:44 am
HK News Desk
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm