ಡಿಕೆಶಿ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದ ಮಾಧ್ಯಮ ಸಂಯೋಜಕ ಅಮಾನತು 

13-10-21 05:58 pm       Bengaluru Correspondent   ಕರ್ನಾಟಕ

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಕಚೇರಿಯ ವೇದಿಕೆಯಲ್ಲಿ ಭ್ರಷ್ಟಾಚಾರದ ಆರೋಪ ಮಾಡಿ ಸುದ್ದಿಯಾಗಿರುವ ಕಾಂಗ್ರೆಸ್ ಮಾಧ್ಯಮ ಸಂಯೋಜಕ ಸಲೀಂ ಅವರನ್ನು ಅಮಾನತು ಮಾಡಲು ತೀರ್ಮಾನಿಸಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ತಿಳಿಸಿದ್ದಾರೆ. 

ಬೆಂಗಳೂರು, ಅ.12: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಕಚೇರಿಯ ವೇದಿಕೆಯಲ್ಲಿ ಭ್ರಷ್ಟಾಚಾರದ ಆರೋಪ ಮಾಡಿ ಸುದ್ದಿಯಾಗಿರುವ ಕಾಂಗ್ರೆಸ್ ಮಾಧ್ಯಮ ಸಂಯೋಜಕ ಸಲೀಂ ಅವರನ್ನು ಅಮಾನತು ಮಾಡಲು ತೀರ್ಮಾನಿಸಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ತಿಳಿಸಿದ್ದಾರೆ. 

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಸಲೀಂ ಅವರು ಆಧಾರರಹಿತ ಆರೋಪ ಮಾಡಿದ್ದಾರೆ, ಅವರು ಹೇಳಿರುವುದರಲ್ಲಿ ಸತ್ಯಾಂಶವಿಲ್ಲ. ವೇದಿಕೆಯಲ್ಲಿ ಅವರು ಪತ್ರಿಕಾಗೋಷ್ಠಿಯಲ್ಲಿ ಆಡಿರುವ ಮಾತುಗಳು ಅಲ್ಲ, ಆಫ್ ದಿ ರೆಕಾರ್ಡ್ ಅವರಿಬ್ಬರೂ ವೈಯಕ್ತಿಕವಾಗಿ ಮಾತನಾಡಿಕೊಂಡಿದ್ದಾರಷ್ಟೆ, ಆದರೂ ಅವರ ಮಾತುಗಳನ್ನು ಪಕ್ಷದ ಶಿಸ್ತು ಸಮಿತಿಗೆ ಕಳುಹಿಸಲಾಗಿದ್ದು ಪರಾಮರ್ಶೆ ನಡೆಸಿ ಸಲೀಂ ಅವರನ್ನು ಅಮಾನತು ಮಾಡಲು ತೀರ್ಮಾನ ಮಾಡಲಾಗಿದೆ. ಉಗ್ರಪ್ಪ ಅವರಲ್ಲಿ ವಿವರಣೆ ಕೇಳುತ್ತೇವೆ ಎಂದು ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮೂಲಕ ಬಿಜೆಪಿಯವರಿಗೆ ತಿರುಗೇಟು ಕೊಟ್ಟಿರುವ ಕಾಂಗ್ರೆಸ್ ಅನಧಿಕೃತ ಮಾತುಗಳನ್ನು ಇಟ್ಟುಕೊಂಡು ರೊಟ್ಟಿ ನೆಕ್ಕುತ್ತಿರುವ ಬಿಜೆಪಿಯವರೇ ನಿಮ್ಮ ಪಕ್ಷದವರಾದ ಹೆಚ್. ವಿಶ್ವನಾಥ್ ಅವರು ಅಧಿಕೃತವಾಗಿ ಸುದ್ದಿಗೋಷ್ಠಿ ನಡೆಸಿ ಬಿ.ಎಸ್ ಯಡಿಯೂರಪ್ಪ ಕುಟುಂಬದ ವಿರುದ್ಧ ಮಾಡಿದ್ದ ಭ್ರಷ್ಟಾಚಾರ ಆರೋಪಗಳಿಗೆ ಮೊದಲು ಉತ್ತರಿಸಿ ಎಂದು ತಿರುಗೇಟು ಕೊಟ್ಟಿದೆ.

Karnataka Pradesh Congress Committee media coordinator MA Salim has been expelled from the party for six years after a video surfaced in which he allegedly badmouths party president DK Shivakumar. In the leaked video, which also features former MP VS Ugrappa, Salim can be heard talking about a “scandal” involving DK Shivakumar, that allegedly has to do with him and his aides accepting bribes.