ಈ ಬಾರಿ ರಾಜ್ಯೋತ್ಸವ ವಿಶೇಷ ; ಅಚ್ಚ ಕನ್ನಡ ಮಾತನಾಡೋರಿಗೆ ಬಹುಮಾನದ ಕೊಡುಗೆ ! ಸಚಿವ ಸುನಿಲ್ ಕುಮಾರ್ ವಿಶೇಷ ಸ್ಪರ್ಧೆ 

20-10-21 01:14 pm       Mangaluru Correspondent   ಕರ್ನಾಟಕ

ರಾಜ್ಯೋತ್ಸವ ಪ್ರಯುಕ್ತ ದೇಶ - ವಿದೇಶದಲ್ಲಿ ನೆಲೆಸಿರುವ ಅಚ್ಚ ಕನ್ನಡ ಮಾತನಾಡುವವರಿಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ವಿಶೇಷ ಸ್ಪರ್ಧೆಯನ್ನು ಆಯೋಜಿಸಿದ್ದಾರೆ.

ಬೆಂಗಳೂರು, ಅ.20: ರಾಜ್ಯೋತ್ಸವ ಪ್ರಯುಕ್ತ ದೇಶ - ವಿದೇಶದಲ್ಲಿ ನೆಲೆಸಿರುವ ಅಚ್ಚ ಕನ್ನಡ ಮಾತನಾಡುವವರಿಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ವಿಶೇಷ ಸ್ಪರ್ಧೆಯನ್ನು ಆಯೋಜಿಸಿದ್ದಾರೆ. ಇದರಂತೆ, ಅಕ್ಟೋಬರ್ 28 ರಂದು 1 ಲಕ್ಷಕ್ಕೂ ಹೆಚ್ಚು ಜನರು ಕನ್ನಡ ಹಾಡುಗಳನ್ನು ಹಾಡಲಿದ್ದು, ಕನ್ನಡ ಭಾಷೆಯ ಬಗ್ಗೆ ಮಾತನಾಡಲಿದ್ದಾರೆ. 

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಚಿವ ಸುನಿಲ್ ಕುಮಾರ್, ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವದ ಪೂರ್ವಭಾವಿಯಾಗಿ ಒಂದು ವಾರದ ಕನ್ನಡ ಅಭಿಯಾನವನ್ನು ನಡೆಸಲಿದ್ದೇವೆ. ಇದರಲ್ಲಿ ಸ್ಪಷ್ಟ ಕನ್ನಡ ಮಾತನಾಡುವವರಿಗೆ ವಿಶೇಷ ಸ್ಪರ್ಧೆಯನ್ನು ಏರ್ಪಡಿಲಾಗಿದೆ. ಮಾತಾಡು ಮಾತಾಡು ಕನ್ನಡ' ಎಂಬ ಈ ಅಭಿಯಾನದಲ್ಲಿ ಅಕ್ಟೋಬರ್ 28 ರಂದು ಒಂದು ಲಕ್ಷಕ್ಕೂ ಹೆಚ್ಚು ಜನರು ಕನ್ನಡ ಹಾಡುಗಳನ್ನು ಹಾಡಲಿದ್ದಾರೆ. ಇದರಲ್ಲಿ ಐಎಎಸ್, ಐಪಿಎಸ್ ಅಧಿಕಾರಿಗಳು ಸಹ ಹಾಡುಗಳನ್ನು ಹಾಡಲಿದ್ದಾರೆ.

ಅಭಿಯಾನದಲ್ಲಿ ಜನರು ಕುಟುಂಬ ಸದಸ್ಯರು ಮನೆಯಲ್ಲಿ ಮತ್ತು ಸಹೋದ್ಯೋಗಿಗಳ ಜೊತೆಗೆ ಕಚೇರಿಗಳಲ್ಲಿ ಕನ್ನಡವನ್ನು ಬಳಸಲು ಪ್ರೋತ್ಸಾಹಿಸುತ್ತದೆ.  "ಕನ್ನಡ ರಾಜ್ಯೋತ್ಸವ ಕೇವಲ ನವೆಂಬರ್ 1ರಂದು ಅಲ್ಲ. ನಾವು ಅಚ್ಚ ಕನ್ನಡ ಭಾಷೆಯನ್ನು ದೈನಂದಿನ ಜೀವನದಲ್ಲಿ ಅಳವಡಿಸಬೇಕು. ಅದಕ್ಕಾಗಿ ಜನರಲ್ಲಿ ಕನ್ನಡ ಭಾಷೆಯ ಬಗ್ಗೆ ಜಾಗೃತಿ ಮೂಡಿಸಲು ಈ ಅಭಿಯಾನ ನಡೆಸುತ್ತಿದ್ದೇವೆ. ಜಗತ್ತಿನ ಯಾವುದೇ ಮೂಲೆಯಿಂದಲೂ ಜನರು ತಮ್ಮ ಅಚ್ಚ ಕನ್ನಡದಲ್ಲಿ ಭಾಷೆಯ ಬಗ್ಗೆ ಮಾತನಾಡುವ ವಿಡಿಯೋಗಳನ್ನು ಜನರು ಕಳುಹಿಸಬಹುದು ಎಂದು ಸುನಿಲ್ ಕುಮಾರ್ ಹೇಳಿದರು.

ಕನ್ನಡದಲ್ಲಿ ಸ್ಪಷ್ಟವಾಗಿ ಮಾತನಾಡಿ, ವೀಡಿಯೊವನ್ನು ಇಲಾಖೆಗೆ ಕಳುಹಿಸುವವರನ್ನು ಆಯ್ಕೆ ಮಾಡಿ 50,000 ರೂ. ಬಹುಮಾನವನ್ನು ನೀಡಲಾಗುತ್ತದೆ. ಜಗತ್ತಿನಾದ್ಯಂತ ಜನರು ಭಾಗವಹಿಸಲು ಅರ್ಹರು. ಈ ಅಭಿಯಾನಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೊಂದಿಗೆ 14 ದೇಶಗಳು ಕೈಜೋಡಿಸಿವೆ.

ಸ್ಪರ್ಧೆಯಲ್ಲಿ ಭಾಗವಹಿಸುವವರು ಅನ್ಯ ಭಾಷೆಯ ಪದಗಳನ್ನು ಬಳಸದೇ ನಿರರ್ಗಳವಾಗಿ ಕನ್ನಡದಲ್ಲಿ 4 ನಿಮಿಷಗಳ ಕಾಲ ಕನ್ನಡ ನಾಡು, ನುಡಿ, ಪರಂಪರೆಗೆ ಸಂಬಂಧಿಸಿ ಮಾತನಾಡಬೇಕು. ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ಮೂವರಿಗೆ ಪ್ರಥಮ ಬಹುಮಾನ 10,000 ರೂ,. ದ್ವಿತೀಯ ಬಹುಮಾನ 5000 ರೂ, ಮತ್ತು ತೃತೀಯ ಬಹುಮಾನ 3000 ರೂ. ಆಗಿದೆ. 

ಜಿಲ್ಲಾ ಮಟ್ಟದಲ್ಲಿ ವಿಜೇತರಾದವರನ್ನು ರಾಜ್ಯ ಮಟ್ಟದ ಪ್ರಥಮ ಬಹುಮಾನಕ್ಕಾಗಿ ಆಯ್ಕೆ ಮಾಡಲಾಗುತ್ತದೆ. ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ 50,000 ರೂ., ದ್ವಿತೀಯ ಬಹುಮಾನ 30,000 ರೂ.ಗಳು ಮತ್ತು ತೃತೀಯ ಬಹುಮಾನ 20,000 ರೂ. ಆಗಿದೆ. ಆಸಕ್ತರು ಅಕ್ಟೋಬರ್ 28ರೊಳಗೆ ವಿಡಿಯೋ ಸೆಲ್ಫಿ ತೆಗೆದು ಕಳುಹಿಸಬೇಕು. ಅಕ್ಟೋಬರ್ 30ರಂದು ರಾಜ್ಯ ಮಟ್ಟದ ಸ್ಪರ್ಧೆ ನಡೆಯಲಿದೆ ಎಂದು ಸಚಿವರು ಹೇಳಿದ್ದಾರೆ.

The Karnataka government has received 4,500 applications for the Rajyotsava awards, Kannada & Culture Minister V Sunil Kumar said Tuesday.  On Tuesday, Kumar unveiled a new pro-Kannada campaign 'Kannadakkaagi Naavu' (We stand for Kannada) ahead of the Rajyotsava celebrations on November 1.