ನಳಿನ್ ಡ್ರಗ್ಸ್ ಮಾತಿಗೆ ಯಡಿಯೂರಪ್ಪ ಅಸಮಾಧಾನ, ದಾರಿಯಲ್ಲಿ ಹೋಗೋ ಹುಚ್ಚ ಎಂದ ಸುರ್ಜೇವಾಲಾ!  

20-10-21 09:07 pm       Mangaluru Correspondent   ಕರ್ನಾಟಕ

ರಾಹುಲ್ ಗಾಂಧಿ ಬಗ್ಗೆ ಡ್ರಗ್ ಪೆಡ್ಲರ್ ಎಂದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಮಾತಿನ ಬಗ್ಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು, ಅ.20: ರಾಹುಲ್ ಗಾಂಧಿ ಬಗ್ಗೆ ಡ್ರಗ್ ಪೆಡ್ಲರ್ ಎಂದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಮಾತಿನ ಬಗ್ಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾನಗಲ್ ಚುನಾವಣೆ ಹಿನ್ನೆಲೆಯಲ್ಲಿ ತೆರಳುತ್ತಿದ್ದ ಯಡಿಯೂರಪ್ಪ ಬಳಿ ಬಗ್ಗೆ ಪ್ರಶ್ನೆ ಎತ್ತಿದಾಗ, ಆ ರೀತಿ ಮಾತನಾಡುವುದು ತಪ್ಪು ಎಂದು ಪ್ರತಿಕ್ರಿಯಿಸಿದ್ದಾರೆ.

ಯಾರೇ ಆಗಲಿ, ಈ ರೀತಿ ಮಾತನಾಡಬಾರದು. ಅವರತ್ರ ನಾನು ಮಾತನಾಡಿದ್ದೇನೆ, ಯಾವ ಹಿನ್ನೆಲೆಯಲ್ಲಿ ಈ ರೀತಿ ಮಾತನಾಡಿದ್ದು ಅಂತ. ಆ ಥರ ಮಾತಾಡುವ ಅಗತ್ಯ ಇರಲಿಲ್ಲ. ಯಾರೇ ಆದ್ರೂ, ರಾಹುಲ್ ಗಾಂಧಿಯಾದ್ರೆ ಅವರಿಗೆ ಅವರದೇ ಆದ ಗೌರವ ಇರುತ್ತದೆ. ಯಾರಿಗೇ ಆದ್ರೂ ಅಗೌರವ ತೋರುವ ರೀತಿ ಮಾತನಾಡಬಾರದು ಎಂದು ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.

ದಾರಿಯಲ್ಲಿ ಹೋಗೋ ಹುಚ್ಚನಂತಾಗಿದ್ದಾರೆ

ಇದೇ ವೇಳೆ, ಹಾನಗಲ್ ಚುನಾವಣೆ ಪ್ರಚಾರಕ್ಕೆ ಆಗಮಿಸಿದ್ದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ, ನಳಿನ್ ಒಬ್ಬ ಹುಚ್ಚ ಎಂದು ಮೂದಲಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ಕಟೀಲ್ ಸಾಧನೆ ಏನೂ ಇಲ್ಲ, ಹೀಗಾಗಿ ಅವರು ಜನರ ಗಮನ ಸೆಳೆಯೋಕೆ ಬಾಯಿಗೆ ಬಂದ ರೀತಿ ಮಾತನಾಡುತ್ತಿದ್ದಾರೆ. ದಾರಿಯಲ್ಲಿ ಹೋಗುವ ಹುಚ್ಚರು ಕೈಯಲ್ಲಿ ಕಲ್ಲು ಹಿಡಿದುಕೊಂಡಿದ್ದೆರ ಮನಸ್ಸಿಗೆ ಬಂದವರ ಮೇಲೆ ಎಸೆದಂತೆ, ಇವರು ಬಾಯಿಗೆ ಬಂದಂತೆ ಮಾತಾಡುತ್ತಾರೆ. ಸ್ಥಿಮಿತ ಇಲ್ಲದ ಇವರನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು, ಡ್ರಗ್ ವ್ಯಸನ ಕೇಂದ್ರಕ್ಕೆ ಸೇರಿಸಿದರೆ ಮಾನಸಿಕ ಸಮಸ್ಯೆ ಸರಿಹೋಗಬಹುದು ಎಂದು ವ್ಯಂಗ್ಯವಾಡಿದ್ದಾರೆ.

ಚುನಾವಣೆ ಮುಗಿಯಲಿ ಅಂತ ನಾವು ಸುಮ್ಮನಿದ್ದೇವೆ. ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಕಾಂಗ್ರೆಸ್ ಸೈನ್ಯ ಇದೆ. ಗಾಂಧಿ ಕುಟುಂಬ ಮಾಡಿದ ತ್ಯಾಗಕ್ಕೆ ಬಿಜೆಪಿಯನ್ನು ಒಂದು ಪರ್ಸೆಂಟ್ ಕೂಡ ಹೋಲಿಕೆ ಮಾಡಲು ಸಾಧ್ಯವಿಲ್ಲ. ನಮ್ಮ ಪಕ್ಷ ಸತ್ತಿಲ್ಲ. ಪಕ್ಷ ದೇಶಾದ್ಯಂತ ಉಸಿರಾಡುತ್ತಿದೆ ಎಂದು ಸುರ್ಜೇವಾಲಾ ಹೇಳಿದ್ದಾರೆ. 

Yediyurappa disappointed over Karnataka’s BJP chief Nalin Kumar Kateel statement by calling former Congress president Rahul Gandhi a “drug addict” and “drug peddler” during a party event in Hubballi.