ನಳಿನ್ ಕುಮಾರ್ ಅವಿವೇಕಿ, ಲಂಪಟ, ವಿವಾಹಿತ ಮಹಿಳೆಯನ್ನು ನಂಬಿಸಿ ಮೋಸ ಮಾಡಿದ್ದ ; ಹರಿಹಾಯ್ದ ಕಾಂಗ್ರೆಸ್ ವಕ್ತಾರ ಲಕ್ಷ್ಮಣ್

20-10-21 10:42 pm       Headline Karnataka News Desk   ಕರ್ನಾಟಕ

ನಳಿನ್ ಕುಮಾರ್ ಕಟೀಲು ಒಬ್ಬ ಅಯೋಗ್ಯ, ಲಂಪಟ. ಅವಿವೇಕಿ, ಮತಿಹೀನ ವ್ಯಕ್ತಿ. ವಿವಾಹಿತ ಮಹಿಳೆಯನ್ನು ನಂಬಿಸಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ವ್ಯಕ್ತಿ ಎಂದು ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ಆರೋಪಿಸಿದ್ದಾರೆ.

ಮೈಸೂರು, ಅ.20: ನಳಿನ್ ಕುಮಾರ್ ಕಟೀಲು ಒಬ್ಬ ಅಯೋಗ್ಯ, ಲಂಪಟ. ಅವಿವೇಕಿ, ಮತಿಹೀನ ವ್ಯಕ್ತಿ. ವಿವಾಹಿತ ಮಹಿಳೆಯನ್ನು ನಂಬಿಸಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ವ್ಯಕ್ತಿ ಎಂದು ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ಆರೋಪಿಸಿದ್ದಾರೆ.

ರಾಹುಲ್ ಗಾಂಧಿ ಬಗ್ಗೆ ಡ್ರಗ್ ಪೆಡ್ಲರ್ ಎಂದು ಕರೆದಿದ್ದ ನಳಿನ್ ಕುಮಾರ್ ಬಗ್ಗೆ ಆಕ್ರೋಶಿತರಾಗಿ ಸುದ್ದಿಗೋಷ್ಠಿ ನಡೆಸಿರುವ ಕಾಂಗ್ರೆಸ್ ವಕ್ತಾರ ಲಕ್ಷ್ಮಣ್, ನಳಿನ್ ಬಗ್ಗೆ ಕಿಡಿಕಾರಿದ್ದಾರೆ.

ನಳಿನ್ ಕುಮಾರ್ ಹಿಸ್ಟರಿಯನ್ನು ನೋಡಿದರೆ, 2014ರ ಚುನಾವಣೆ ಸಂದರ್ಭದಲ್ಲಿ ವಿವಾಹಿತ ಮಹಿಳೆಯೊಬ್ಬರು ರಾಜ್ಯದ ನಂಬರ್ ವನ್ ಚಾನೆಲ್ ನಲ್ಲಿ ಬಂದು ಹೇಳಿಕೆ ನೀಡಿದ್ದರು. ತನಗೆ ಮದುವೆಯಾಗುತ್ತೇನೆಂದು ಮೋಸ ಮಾಡಿದ್ದಾಗಿ ಹೇಳಿಕೆ ನೀಡಿದ್ದರು. ಆಕೆಯ ಪತಿಗೆ ಬೆದರಿಕೆ ಹಾಕಿದ್ದಾಗಿ ಹೇಳಿದ್ದರು. ಇಂಥ ಚರಿತ್ರಹೀನ ವ್ಯಕ್ತಿ ನಳಿನ್ ಕುಮಾರ್. ಇದೇ ವ್ಯಕ್ತಿ ಮಂಗಳೂರಿನಲ್ಲಿ ಆರ್ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ವ್ಯಕ್ತಿಯ ಖಾಸಾ ದೋಸ್ತ್ ಆಗಿದ್ದಾನೆ. ಇಂತಹ ವ್ಯಕ್ತಿ ಕಾಂಗ್ರೆಸ್ ನಾಯಕರಿಗೆ ಸಭ್ಯತೆಯ ಪಾಠ ಹೇಳುತ್ತಾನೆ ಎಂದು ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.

ನಳಿನ್ ಕುಮಾರ್ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು. ಹೆಚ್ಚು ಮಾತನಾಡಿದರೆ ನಮಗೂ ಕೆದಕುವುದಕ್ಕೆ ಗೊತ್ತಿದೆ. ಸೋನಿಯಾ ಗಾಂಧಿ, ಡಿಕೆ ಶಿವಕುಮಾರ್ ಜಾಮೀನಿನಲ್ಲಿ ಹೊರಗಿದ್ದಾರೆ ಎಂದು ಹೇಳಿದ್ದೀರಿ. ಗೃಹ ಸಚಿವ ಅಮಿತ್ ಶಾ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಜೈಲಿನಲ್ಲಿ ಇರಲಿಲ್ಲವೇ ಎಂದು ಲಕ್ಷ್ಮಣ್ ಪ್ರಶ್ನಿಸಿದ್ದಾರೆ. ನಿಮಗೆ ತಾಕತ್ತಿದ್ದರೆ ಅಭಿವೃದ್ಧಿ ವಿಚಾರದಲ್ಲಿ ಚರ್ಚೆಗೆ ಬನ್ನಿ. ಕಾಂಗ್ರೆಸಿನ ವೈಫಲ್ಯವಿದ್ದರೆ ಅದನ್ನು ಟೀಕಿಸಿ. ವೈಯಕ್ತಿಯ ನಿಂದನೆ ಮಾಡಿದರೆ ನಳಿನ್ ಕುಮಾರ್ ಕಟೀಲು ಮತ್ತು ಬಿಜೆಪಿ ಕಚೇರಿಗಳ ಮುಂದೆ ಧರಣಿ ನಡೆಸಬೇಕಾಗುತ್ತದೆ ಎಂದು ಹರಿಹಾಯ್ದಿದ್ದಾರೆ.

ಮಾದಕ ವಸ್ತುಗಳ ಬಗ್ಗೆ ತನಿಖೆ ಮಾಡಿಸಲು ಎನ್ ಸಿಬಿ ಇದೆ. ಕೇಂದ್ರದಲ್ಲಿ ನಿಮ್ಮದೇ ಸರಕಾರವಿದೆ. ರಾಹುಲ್ ಗಾಂಧಿ ಡ್ರಗ್ ಪೆಡ್ಲರ್ ಆಗಿದ್ದರೆ ತನಿಖೆ ಮಾಡಿಸಿ ಎಂದು ಸವಾಲು ಹಾಕಿದರು.

BJP Nalin Kumar Kateel has illicit affairs with woman close friend of Murderer, he's a cheat slams Congress spokesperson M Lakshman