ಬ್ರೇಕಿಂಗ್ ನ್ಯೂಸ್
31-10-21 02:49 pm Mangalore Reporter ಕರ್ನಾಟಕ
ಬೆಂಗಳೂರು, ಅ.31 : ಕನ್ನಡಿಗರ ಕಣ್ಮಣಿಯಾಗಿ ಅರಳಿ ನಿಂತು ಹೊಂಬಿಸಿಲು ಬೀರುತ್ತಿರುವಾಗಲೇ ಮರೆಯಾದ ಅಪ್ಪು ಇನ್ನು ಕೇವಲ ನೆನಪು ಮಾತ್ರ. ಇಂದು ಬೆಳಗ್ಗೆ ಕಂಠೀರವ ಸ್ಟುಡಿಯೋದಲ್ಲಿ ಅಪ್ಪ ರಾಜಕುಮಾರ್ ಸಮಾಧಿ ಪಕ್ಕದಲ್ಲೇ ಪ್ರಕೃತಿಯಲ್ಲಿ ಲೀನವಾಗಿದ್ದಾರೆ. ಬೆಳಗ್ಗೆ 9 ಗಂಟೆ ಸುಮಾರಿಗೆ ಲಕ್ಷಾಂತರ ಜನರ ಕಣ್ಣೀರಿನ ನಡುವೆ ಪುನೀತ್ ಕುಮಾರ್ ಮಣ್ಣಿನಲ್ಲಿ ಸೇರಿದ್ದಾರೆ.






ಅಲ್ಲಿ ಸೇರಿದ್ದ ಕುಟುಂಬಸ್ಥರ ರೋದನಕ್ಕಿಂತಲೂ ಅಭಿಮಾನಿಗಳ ಆಕ್ರಂದನವೇ ಮುಗಿಲು ಮುಟ್ಟಿತ್ತು. ಕಂಠೀರವ ಕ್ರೀಡಾಂಗಣದಿಂದ ಬೆಳಗ್ಗೆಯೇ ಅಪ್ಪು ಪಾರ್ಥಿವ ಶರೀರವನ್ನು ಕಂಠೀರವ ಸ್ಟುಡಿಯೋಗೆ ತರಲಾಗಿತ್ತು. ಜೊತೆಯಲ್ಲೇ ರಾಜ್ಯ ಸರಕಾರದ ಪ್ರತಿನಿಧಿಗಳೂ ಹಿಂಬಾಲಿಸಿದ್ದರು.
ಪುನೀತ್ ಅವರನ್ನು ತೀರಾ ಹಚ್ಚಿಕೊಂಡಿದ್ದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಂತೂ ತನ್ನ ಮಗನಂತೆಯೇ ಅಪ್ಪಿಕೊಂಡು ಕಣ್ಣೀರು ಹಾಕಿದ್ದಾರೆ. ಸಮಾಧಿಗೆ ಇಳಿಸುವುದಕ್ಕೂ ಮುನ್ನ ಬೊಮ್ಮಾಯಿ ಅಪ್ಪುವನ್ನು ಅಪ್ಪಿಕೊಂಡು ಹಣೆಗೆ ಮುತ್ತಿಕ್ಕಿದ್ದು ನೋಡುಗರನ್ನೇ ಭಾವುಕರನ್ನಾಗಿಸಿತ್ತು.
ದೇಹ, ಮೈಕಟ್ಟು ಸದೃಢ ಆಗಿರಬೇಕೆಂಬ ಅಪಾರ ಕಾಳಜಿ ಹೊಂದಿದ್ದ ಪುನೀತ್, ಸದೃಢ ದೇಹ ಇಟ್ಟುಕೊಂಡೇ ಇಹಲೋಕ ತ್ಯಜಿಸಿದ್ದಾರೆ. ಕೊನೆಯ ಬಾರಿಗೆ ತಮ್ಮನ ಅಗಲಿಕೆ ಬಗ್ಗೆ ಮಾಧ್ಯಮಕ್ಕೆ ಮಾತನಾಡಿದ ಶಿವಣ್ಣ, ಮಗನನ್ನೇ ಕಳಕೊಂಡಿದ್ದೇನೆ. ದೇವರಿಗೆ ಆತನ ಮೇಲೆ ಹೆಚ್ಚು ಪ್ರೀತಿ ಇತ್ತು. ಬೇಗನೇ ಕರೆಸಿಕೊಂಡ ಎಂದು ಹೇಳಿ ಕಣ್ಣೀರು ಹಾಕಿದ್ದು ಅಲ್ಲಿ ಸೇರಿದ್ದ ಜನರನ್ನೂ ಕಣ್ಣಂಚು ಒದ್ದೆ ಮಾಡಿತ್ತು.
ಕಳೆದ ಎರಡು ದಿನಗಳಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿಗಳು ಸಾಗರದೋಪಾದಿಯಲ್ಲಿ ಬಂದಿದ್ದು ಅಪ್ಪುವನ್ನು ಕೊನೆಯ ಬಾರಿಗೆ ಕಂಡಿದ್ದಾರೆ. ಎರಡು ದಿವಸದಲ್ಲಿ ಅಂದಾಜು 25 ಲಕ್ಷಕ್ಕೂ ಹೆಚ್ಚು ಜನ ಅಪ್ಪು ಪಾರ್ಥಿವ ಶರೀರದ ದರ್ಶನ ಮಾಡಿದ್ದಾರೆ ಎಂಬ ಅಂದಾಜು ಮಾಡಲಾಗಿದೆ.
ಇಂದು ಬೆಳಿಗ್ಗೆ ಬೆಂಗಳೂರಿನ ಕಂಠೀರವ ಸ್ಟುಡಿಯೋ ಆವರಣದಲ್ಲಿ ನಟ ಪುನೀತ್ ರಾಜಕುಮಾರ್ ಅವರ ಅಂತಿಮ ಸಂಸ್ಕಾರವನ್ನು ಸರ್ಕಾರಿ ಗೌರವದೊಂದಿಗೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಪುನೀತ್ ಅವರ ಪತ್ನಿ ಅಶ್ವಿನಿ ಅವರಿಗೆ ರಾಷ್ಟ್ರಧ್ವಜವನ್ನು ಹಸ್ತಾಂತರಿಸಲಾಯಿತು.#PuneethRajkumar @PuneethRajkumar pic.twitter.com/aEymZwD4aG
— Basavaraj S Bommai (@BSBommai) October 31, 2021
ಇಂದು ಬೆಳಿಗ್ಗೆ ಬೆಂಗಳೂರಿನ ಕಂಠೀರವ ಸ್ಟುಡಿಯೋ ಆವರಣದಲ್ಲಿ ನಟ ಪುನೀತ್ ರಾಜಕುಮಾರ್ ಅವರ ಅಂತಿಮ ಸಂಸ್ಕಾರವನ್ನು ಸರ್ಕಾರಿ ಗೌರವದೊಂದಿಗೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಪುನೀತ್ ಅವರ ಪತ್ನಿ ಅಶ್ವಿನಿ ಅವರಿಗೆ ರಾಷ್ಟ್ರಧ್ವಜವನ್ನು ಹಸ್ತಾಂತರಿಸಲಾಯಿತು.#PuneethRajkumar @PuneethRajkumar pic.twitter.com/aEymZwD4aG
— Basavaraj S Bommai (@BSBommai) October 31, 2021
Kannada actor Puneeth Rajkumar was buried with State honours next to his parents Dr. Rajkumar and Parvathamma Rajkumar at Kantheerava Studio on October 31 in the presence of family, friends, colleagues from the film industry and dignitaries. The sombre ceremony concluded by 8 a.m.
21-09-26 12:58 pm
HK News Staffer
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಮತ್ತೆ ಯೂಟ್ಯೂಬ...
20-09-26 07:13 pm
ಗಣೇಶ ಶೋಭಾಯಾತ್ರೆಯಲ್ಲಿ ಪ್ರಚೋದನಕಾರಿ ಭಾಷಣ ; ಮಸೀದಿ...
20-09-26 03:32 pm
ವಂದೇ ಮಾತರಂ ಎರಡೇ ಚರಣ ; ತೀರ್ಥಹಳ್ಳಿಯಲ್ಲಿ ಸಿಎಂ ಡಿ...
19-09-26 05:44 pm
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
22-09-26 09:42 am
HK News Staffer
ಡಿಸೆಂಬರ್ ಒಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ; ಇವಿಎಂ...
19-09-26 05:40 pm
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
21-09-26 10:36 pm
HK News Desk
ಮುಸ್ಲಿಂ ಲೀಗ್ ಮನಸ್ಥಿತಿಯನ್ನು ಜನರ ಮೇಲೆ ಹೇರಲು ಹೊರ...
21-09-26 09:49 pm
ನಾಲ್ಕು ದಿನ ರಾಜ್ಯದಲ್ಲಿ ಭಾರೀ ಮಳೆ ಮುನ್ಸೂಚನೆ ; ಸೆ...
21-09-26 09:46 pm
ಸೌಜನ್ಯಾ ಪ್ರಕರಣದಲ್ಲಿ 14 ವರ್ಷಗಳ ಬಳಿಕ ಮರು ತನಿಖೆಗ...
21-09-26 01:37 pm
HYROX ಮೆನ್ಸ್ ಡಬಲ್ಸ್ ಫಿಟ್ನೆಸ್ ಸ್ಪರ್ಧೆಯಲ್ಲಿ ದಕ್...
21-09-26 10:08 am
22-09-26 02:57 pm
HK News Staffer
ಲಂಚಕ್ಕೆ ಕೈಯೊಡ್ಡಿ ಲೋಕಾಯುಕ್ತಕ್ಕೆ ಟ್ರಾಪ್ ಆದ ಬಜ್ಪ...
21-09-26 08:21 pm
ಕಳತ್ತೂರಿನಲ್ಲಿ ಮೇಯಲು ಬಿಟ್ಟಿದ್ದ ದನ ಕಳವು ಪ್ರಕರಣ...
21-09-26 06:16 pm
Ramanth Rai Car Accident: ಕಾರ್ಕಳ ; ಮಾಜಿ ಸಚಿವ...
20-09-26 04:39 pm
Bengluru, Crime: ಬೆಂಗಳೂರು ; ಮಧ್ಯರಾತ್ರಿ ಹೋಟೆಲ್...
20-09-26 02:16 pm