ಹಾನಗಲ್ ಸೋಲಿಗೆ ಒಬ್ಬ ವ್ಯಕ್ತಿಯನ್ನು ಹೊಣೆ ಮಾಡಕ್ಕಾಗಲ್ಲ ; ಸಿಎಂ ಪರ ಯಡಿಯೂರಪ್ಪ ಬ್ಯಾಟಿಂಗ್

03-11-21 12:36 pm       Headline Karnataka News Desk   ಕರ್ನಾಟಕ

ಹಾನಗಲ್ ಉಪ ಚುನಾವಣೆಯ ಸೋಲಿಗೆ ಒಬ್ಬ ವ್ಯಕ್ತಿಯನ್ನು ಹೊಣೆಗಾರಿಕೆ ಮಾಡಲಾಗುವುದಿಲ್ಲ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.‌

ಬೆಂಗಳೂರು, ನ.3: ಹಾನಗಲ್ ಉಪ ಚುನಾವಣೆಯ ಸೋಲಿಗೆ ಒಬ್ಬ ವ್ಯಕ್ತಿಯನ್ನು ಹೊಣೆಗಾರಿಕೆ ಮಾಡಲಾಗುವುದಿಲ್ಲ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.‌ ಹಾನಗಲ್ ಮತ್ತು ಸಿಂದಗಿ ಉಪ ಚುನಾವಣೆ ಫಲಿತಾಂಶದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಿಂದಗಿಯಲ್ಲಿ ನಿರೀಕ್ಷೆ ಮೀರಿ ಗೆಲುವು ಆಗಿದೆ. 30 ಸಾವಿರ ಅಂತರದಲ್ಲಿ ಗೆದ್ದಿದ್ದಾರೆ. ರಮೇಶ್ ಭೂಸನೂರ ಗೆಲುವಿಗೆ ಕಾರಣರಾದ ಮತದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. 

ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸಿದ್ದೇವೆ. ಹೀಗಾಗಿ ಹಾನಗಲ್ ಸೋಲಿಗೆ ಒಬ್ಬ ವ್ಯಕ್ತಿಯನ್ನು ಹೊಣೆಗಾರಿಕೆ ಮಾಡುವುದಿಲ್ಲ. ಎಲ್ಲರೂ ಕೂಡ ಜವಾಬ್ದಾರಿ ಹೊರಬೇಕು ಎಂದು ಹೇಳಿದರು. 

ಹಾನಗಲ್ ಸೋಲಿಗೆ ಬಸವರಾಜ ಬೊಮ್ಮಾಯಿ ಕಾರಣವೇ ಎಂಬ ಪ್ರಶ್ನೆಗೆ, ಈ ಸೋಲಿನಿಂದ ಬೊಮ್ಮಾಯಿ‌ ನಾಯಕತ್ವಕ್ಕೆ ಯಾವುದೇ ಹಿನ್ನಡೆಯಿಲ್ಲ. ಮುಂದಿನ ಚುನಾವಣೆಗೂ ಫಲಿತಾಂಶ ದಿಕ್ಸೂಚಿಯಲ್ಲ ಎಂದು ಹೇಳಿದರು.

ಹಾನಗಲ್ ಕ್ಷೇತ್ರದಲ್ಲಿ ಹಿನ್ನಡೆಯಾಗಿದೆ.‌ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲು ಬಹಳ ಉತ್ತಮ ವಾತಾವರಣ ಇತ್ತು, ಆದರೂ ಯಾಕೆ‌ ಹಿನ್ನಡೆಯಾಯ್ತು ಎಂಬುದನ್ನು ಚರ್ಚಿಸುತ್ತೇವೆ ಎಂದು ಬಿಎಸ್‌ವೈ ತಿಳಿಸಿದರು.

ಚುನಾವಣಾ ಫಲಿತಾಂಶದಿಂದ ಕಾಂಗ್ರೆಸ್‌ ದೊಡ್ಡ ಸಾಧನೆ ಮಾಡಿದಂತೆ ಬೀಗುವುದು ಬೇಡ. ಮುಂದಿನ ಚುನಾವಣೆಯಲ್ಲಿ ನಾವು ಅಧಿಕಾರಕ್ಕೆ ಬರುತ್ತೇವೆ. ನಾನು ರಾಜ್ಯದಲ್ಲಿ ಸಂಘಟನೆ ಮಾಡುತ್ತೇನೆ ಎಂದು ಹೇಳಿದರು.

After the Bharatiya Janata Party (BJP) won the Sindgi Assembly seat in the by-elections on Tuesday, former Karnataka Chief Minister BS Yediyurappa said that the party did not expect to win with such a huge number of votes. He also stated that BJP would win 140 seats in the 2023 state Assembly polls.