ಬಿಟ್ ಕಾಯಿನ್ ಹಗರಣ ತನಿಖೆಯಾದ್ರೆ ಮುಖ್ಯಮಂತ್ರಿಯೇ ಬಲಿ ಬೀಳಲಿದ್ದಾರೆ, ಹಗರಣದಲ್ಲಿ ಬಿಜೆಪಿ ವರಿಷ್ಠರೇ ಇದ್ದಾರೆ !

10-11-21 01:26 pm       Headline Karnataka News Desk   ಕರ್ನಾಟಕ

ಕಳೆದ ಬಾರಿಯೂ ಬಿಜೆಪಿ ಸರಕಾರದಲ್ಲಿ ಮೂವರು ಮುಖ್ಯಮಂತ್ರಿಗಳಾಗಿದ್ದರು. ಈ ಬಾರಿಯೂ ಮೂರು ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಬಾಂಬ್ ಸಿಡಿಸಿದ್ದಾರೆ.

ಗುಲ್ಬರ್ಗ, ನ.10: ಬಿಟ್ ಕಾಯಿನ್ ಹಗರಣದಲ್ಲಿ ರಾಜ್ಯದ ಆಡಳಿತ ಪಕ್ಷದ ಪ್ರಭಾವಿಗಳು ಇದ್ದಾರೆ. ಪ್ರಕರಣ ಮುಚ್ಚಿ ಹಾಕಲು ಕಸರತ್ತು ನಡೆಸುತ್ತಿದ್ದಾರೆ. ಇದೇ ಹಗರಣ ಕರ್ನಾಟಕದ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಬಲಿ ಪಡೆಯುತ್ತದೆ. ಕಳೆದ ಬಾರಿಯೂ ಬಿಜೆಪಿ ಸರಕಾರದಲ್ಲಿ ಮೂವರು ಮುಖ್ಯಮಂತ್ರಿಗಳಾಗಿದ್ದರು. ಈ ಬಾರಿಯೂ ಮೂರು ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಬಾಂಬ್ ಸಿಡಿಸಿದ್ದಾರೆ.

ಇದಲ್ಲದೆ, ಬಿಟ್ ಕಾಯಿನ್ ಹಗರಣದಲ್ಲಿ ಬಿಜೆಪಿ ಕೇಂದ್ರ ಮಟ್ಟದ ವರಿಷ್ಠರು ಭಾಗಿಯಾಗಿದ್ದಾರೆ. ಕರ್ನಾಟಕದ ಪೊಲೀಸ್ ಅಧಿಕಾರಿಗಳು, ಐಎಎಸ್ ಅಧಿಕಾರಿಗಳು ಕೂಡ ಶಾಮೀಲಾಗಿದ್ದಾರೆ. ಇದೇನು ನೂರಾರು ಕೋಟಿ ಹಗರಣವಲ್ಲ. ಸಾವಿರಾರು ಕೋಟಿ ರೂಪಾಯಿ ಹಗರಣ. ಡ್ರಗ್ಸ್ ಕಿಕ್ ಬ್ಯಾಕ್ ಇದರಲ್ಲೇ ಪಡೆದಿದ್ದಾರೆ. ವರ್ಗಾವಣೆಯ ದಂಧೆಯಲ್ಲೂ ಇದೇ ಬಿಟ್ ಕಾಯಿನ್ ರೂಪದಲ್ಲಿ ವ್ಯವಹಾರ ನಡೆಸಿದ್ದಾರೆ.

ಯಾವುದೇ ಅಧಿಕಾರಿಗಳು ಇರಲಿ, ಯಾವುದೇ ಪಕ್ಷದ ರಾಜಕಾರಣಿಗಳು ಇರಲಿ. ಪ್ರಕರಣದ ಬಗ್ಗೆ ಪಾರದರ್ಶಕವಾಗಿ ತನಿಖೆ ನಡೆಸಬೇಕು. ಈಗ ಹೇಗೂ ಆರೋಪಿ ಶ್ರೀಕಿ ಪೊಲೀಸ್ ವಶದಲ್ಲಿದ್ದಾನೆ. ಯಾಕೆ ಇವರಿಗೆ ತನಿಖೆ ನಡೆಸಲು ಆಗಲ್ಲ. ಸರಿಯಾದ ತನಿಖಾ ಸಂಸ್ಥೆಗೆ ಪ್ರಕರಣದ ತನಿಖೆಯನ್ನು ನೀಡಿದರೆ ಸರಕಾರವೇ ಬಿದ್ದು ಹೋಗಲಿದೆ. ಸೂಕ್ತ ತಂಡದಿಂದ ತನಿಖೆಯಾದರೆ ಮಾತ್ರ ಅದರಲ್ಲಿ ಯಾರು ಶಾಮೀಲಾಗಿದ್ದಾರೆ ಅನ್ನೋದು ಗೊತ್ತಾಗುತ್ತದೆ. ತನಿಖೆಯಾದರೆ ಬಿಜೆಪಿ ಮೂರನೇ ಮುಖ್ಯಮಂತ್ರಿಯನ್ನು ನೋಡಬೇಕಾಗುತ್ತದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ನಾನೇನು ಮುಖ್ಯಮಂತ್ರಿ ಭಾಗಿಯಾಗಿದ್ದಾರೆ ಎಂದು ಹೇಳುತ್ತಿಲ್ಲ. ಯಾರಿದ್ದಾರೆ ಅನ್ನುವುದನ್ನು ಇವರು ತನಿಖೆ ನಡೆಸಿಯೇ ಹೇಳಲಿ. ಯಾಕೆ ಇವರು ತನಿಖೆಯನ್ನು ವಿಳಂಬಗೊಳಿಸುತ್ತಿದ್ದಾರೆ. ಬಿಜೆಪಿ ನಾಯಕರು, ಅವರ ಮಕ್ಕಳು ಇದರಲ್ಲಿ ಭಾಗಿಯಾಗಿದ್ದಾರೆ. ಹಾಗಾಗಿ ಇಡೀ ಪ್ರಕರಣವನ್ನು ಮುಚ್ಚಿ ಹಾಕುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ.

ರಾಜ್ಯ ಸರಕಾರ ಇಡಿ ತನಿಖೆಗೆ ಕೊಟ್ಟಿದ್ದೇವೆ ಎನ್ನುತ್ತಿದ್ದಾರೆ. ಆದರೆ, ಇಡಿ ತನಿಖೆ ನಡೆಸುತ್ತಿದ್ದರೆ, ಅದಕ್ಕೆ ಕೊಟ್ಟಿರುವ ದಾಖಲೆ ಇದ್ದರೆ ಮುಖ್ಯಮಂತ್ರಿ ಬಿಡುಗಡೆ ಮಾಡಲಿ. ಅದಕ್ಕಾಗಿಯೇ ಹೇಳುವುದು, ಬಿಟ್ ಕಾಯಿನ್ ತನಿಖೆ ನಡೆಸಿದರೆ ರಾಜ್ಯ ಸರಕಾರವೇ ಬಿದ್ದು ಹೋಗಲಿದ ಎಂದು ಪ್ರಿಯಾಂಕ್

ಬಿಟ್ ಕಾಯಿನ್ ಹಗರಣ ; ರಾಜ್ಯ ಬಿಜೆಪಿಯಲ್ಲಿ ಸಂಚಲನ, ಸಿಎಂ ಬೊಮ್ಮಾಯಿ ದೆಹಲಿಗೆ ಬುಲಾವ್ ಖರ್ಗೆ ಹೇಳಿದ್ದಾರೆ. 

If the BJP bitcoin scandal in Karnataka is investigated thoroughly & transparently, we will have a 3rd CM from BJP in the state states Former Minister for IT, Tourism & Social Welfare Priyank Kharge.