ಟ್ವೀಟ್ ವಾರ್ ; ಶ್ರೀಕಿಯನ್ನು ಬಂಧಿಸಿದ್ದು, ಚಾರ್ಜ್ ಶೀಟ್ ಹಾಕಿದ್ದು ನೀವು! ಮಾಹಿತಿ ಕೊಡಿ, ಇಲ್ಲದಿದ್ದರೆ ಅಧಿಕಾರ ಬಿಟ್ಟು ತೊಲಗಿ

16-11-21 01:45 pm       Bengaluru Correspondent   ಕರ್ನಾಟಕ

ಬಿಟ್ ಕಾಯಿನ್ ಹಗರಣದ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ವಾರ್ ಮುಂದುವರಿಸಿದ್ದಾರೆ. ಕಾಂಗ್ರೆಸ್ ಆರೋಪಕ್ಕೆ ದಾಖಲೆ ಇದ್ದರೆ ನೀಡಲಿ ಎಂದಿದ್ದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಬೆಂಗಳೂರು, ನ.16: ಬಿಟ್ ಕಾಯಿನ್ ಹಗರಣದ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ವಾರ್ ಮುಂದುವರಿಸಿದ್ದಾರೆ. ಕಾಂಗ್ರೆಸ್ ಆರೋಪಕ್ಕೆ ದಾಖಲೆ ಇದ್ದರೆ ನೀಡಲಿ ಎಂದಿದ್ದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಬಿಟ್ ಕಾಯಿನ್ ಹಗರಣದ ಬಗ್ಗೆ ಕೇಸು ದಾಖಲಾಗಿದ್ದು ಬಿಜೆಪಿ ಸರಕಾರದಲ್ಲಿ. ಆತನನ್ನು ಎರಡು ಬಾರಿ ಬಂಧಿಸಿದ್ದು ಬೇಲ್ ಮೇಲೆ ಬಿಡುಗಡೆ ಮಾಡಿಸಿದ್ದು , ಚಾರ್ಜ್ ಶೀಟ್ ದಾಖಲಿಸಿದ್ದು ಬಿಜೆಪಿ ಸರಕಾರ. ಹಾಗಿದ್ದ ಮೇಲೆ ಈಗಿನ ಸರಕಾರವೇ ದಾಖಲೆ ನೀಡಬೇಕು. ಅದಾಗದಿದ್ದರೆ ಅಧಿಕಾರ ಬಿಟ್ಟು ತೊಲಗಿ ಎಂದು ಸಿದ್ದರಾಮಯ್ಯ ನೇರವಾಗಿ ತರಾಟೆಗೆ ಎತ್ತಿಕೊಂಡಿದ್ದಾರೆ.

ನಾನು ಮುಖ್ಯಮಂತ್ರಿಯಾಗಿದ್ದಾಗ ಶ್ರೀಕಿ ವಿರುದ್ಧ ಯಾವ ದೂರೂ ದಾಖಲಾಗಿರಲಿಲ್ಲ. ಪ್ರಕರಣ ದಾಖಲಾಗಿ ವಿಚಾರಣೆ ನಡೆದಿದ್ದು ಬಿಜೆಪಿ ಸರಕಾರದ ಅವಧಿಯಲ್ಲಿ. ನೀವ್ಯಾಕೆ ಸರಿಯಾಗಿ ವಿಚಾರಣೆ ಮಾಡಿಲ್ಲ ಅಂತ ಕೇಳುತ್ತಿದ್ದೇನೆ. ಈ ಪ್ರಶ್ನೆಗೆ ಮೊದಲು ಉತ್ತರಿಸಿ ಎಂದು ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ನಾನು ಸಿಎಂ ಆಗಿದ್ದಾಗ ಬಿಟ್ ಕಾಯಿನ್ ವಿಚಾರ ವರದಿಯಾಗಿತ್ತೇ.. ಬಿಜೆಪಿ ನಾಯಕರು ಪ್ರಸ್ತಾಪ ಮಾಡಿದ್ದರೇ.. ಆ ಕಾಲದಲ್ಲಿಯೇ ಇವರಿಗೆ ಇದು ಗೊತ್ತಿತ್ತೇ.. ಗೊತ್ತಿದ್ದರೆ ಮುಚ್ಚಿಟ್ಟಿದ್ದರೇ ಎಂದು ಪ್ರಶ್ನೆ ಮಾಡಿದ್ದಾರೆ.

ಮೊದಲ ಬಾರಿಗೆ ಶ್ರೀಕಿ ಬಂಧನ ಆಗಿದ್ದಾಗ, ಜಾಮೀನು ಮೇಲೆ ಬಿಡುಗಡೆಗೊಂಡಾಗ ಗೃಹ ಸಚಿವರಾಗಿದ್ದವರು ಈಗಿನ ಮುಖ್ಯಮಂತ್ರಿ ಬೊಮ್ಮಾಯಿ. ಅವರೇ ಉತ್ತರ ನೀಡಬೇಕು. ಅಶೋಕ್ ಅವರಿಗ್ಯಾಕೆ ಈ ಬಗ್ಗೆ ಆಸಕ್ತಿ ಎಂದು ಕಟಕಿಯಾಡಿದ್ದಾರೆ. ರಾಜ್ಯ ಸರಕಾರದ ಬಗ್ಗೆ ಸಮರ್ಥಿಸಿ, ಸಚಿವ ಅಶೋಕ್ ಹೇಳಿಕೆ ನೀಡಿದ್ದರು.

BJP arrested Sriki so give us information or else quit from your position slama Siddaramaiah. Former Karnataka chief minister Siddaramaiah on Monday asked the Basavaraj Bommai-led Bharatiya Janata Party (BJP) government to provide protection to Srikrishna or Sriki, the person at the heart of the raging Bitcoin scandal, stating that the latter’s life could be in danger.