ಬ್ರೇಕಿಂಗ್ ನ್ಯೂಸ್
23-11-21 12:32 pm HK news Desk ಕರ್ನಾಟಕ
ಕಾರವಾರ, ನ.23: ಕರಾವಳಿಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದ ಬೃಹತ್ ಶಿವನ ಪ್ರತಿಮೆಯ ಶಿರವನ್ನು ಛೇದಿಸಿದ ರೀತಿ ಎಡಿಟ್ ಮಾಡಿದ ಫೋಟೊವನ್ನು ಐಸಿಸ್ ಉಗ್ರ ಸಂಘಟನೆಯ ಮುಖವಾಣಿ 'ದಿ ವಾಯ್ಸ್ ಆಫ್ ಹಿಂದ್' ಎಂಬ ಆನ್ಲೈನ್ ಪತ್ರಿಕೆಯಲ್ಲಿ ಪ್ರಕಟಿಸಲಾಗಿದ್ದು ಈ ಫೋಟೊ ಜಾಲತಾಣದಲ್ಲಿ ವೈರಲ್ ಆಗಿದೆ.
ಉಗ್ರ ಸಂಘಟನೆ ‘ಐಸಿಸ್’ನ ಪತ್ರಿಕೆಯಲ್ಲಿ ಪ್ರಕಟಿಸಲಾಗಿರುವ ಫೋಟೋವನ್ನು ಅನ್ಶುಲ್ ಸಕ್ಸೇನಾ ಎಂಬವರು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿ ಕೇಂದ್ರ ಸರಕಾರದ ಗಮನ ಸೆಳೆದಿದ್ದಾರೆ. ಜಗತ್ತಿನಲ್ಲೇ ಅತ್ಯಂತ ಎತ್ತರದ್ದಾಗಿರುವ ಮುರುಡೇಶ್ವರದ ಶಿವನ ವಿಗ್ರಹದ ಶಿರವನ್ನು ಕತ್ತರಿಸಿದಂತೆ ಎಡಿಟ್ ಮಾಡಿದ್ದು ಫೋಟೊದ ಜೊತೆಗೆ its time to break the False Gods ಎಂದು ಬರೆಯಲಾಗಿದೆ. ಹಿಂದು ದೇವರ ಚಿತ್ರವನ್ನು ವಿಕೃತಿಗೊಳಿಸಿದ ಮತಾಂಧರ ಕೃತ್ಯಕ್ಕೆ ಭಾರೀ ಆಕ್ರೋಶ ಕೇಳಿಬಂದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಫೋಟೊ ಭಾರೀ ವೈರಲ್ ಆಗುತ್ತಿದೆ.
ನಕಲಿ ದೇವರುಗಳನ್ನು ಒಡೆದು ಹಾಕುವ ಸಮಯ ಬಂದಿದೆ ಎನ್ನುವ ರೀತಿ ಬರೆದಿದ್ದು ಮುರುಡೇಶ್ವರ ಉಗ್ರರ ಟಾರ್ಗೆಟ್ ಆಗಿದ್ಯಾ ಅನ್ನುವ ಶಂಕೆಯೂ ಮೂಡುವಂತಾಗಿದೆ. ಅಲ್ಲದೆ, ಶಿವನ ಪ್ರತಿಮೆಯನ್ನು ಅರ್ಧಕ್ಕೆ ಕತ್ತರಿಸಿ, ತಲೆಯ ಭಾಗದಲ್ಲಿ ಉಗ್ರ ಸಂಘಟನೆಯ ಕಪ್ಪು ಧ್ವಜವನ್ನು ಹಾರಾಡುತ್ತಿರುವಂತೆ ಚಿತ್ರಿಸಿದ್ದಾರೆ. ಕಳೆದ ಸೆಪ್ಟೆಂಬರ್ ನಲ್ಲಿ ಈ ಚಿತ್ರವನ್ನು ಸಕ್ಸೇನಾ ಪೋಸ್ಟ್ ಮಾಡಿದ್ದು ಅದೇ ತಿಂಗಳ ಸಂಚಿಕೆಯಲ್ಲಿ ಈ ಚಿತ್ರವನ್ನು ಪ್ರಕಟಿಸಿರುವ ಸಾಧ್ಯತೆಯಿದೆ.
'ದಿ ವಾಯ್ಸ್ ಆಫ್ ಹಿಂದ್' ಐಸಿಸ್ ಉಗ್ರವಾದಿ ಸಂಘಟನೆ ಮತ್ತು ಕಾಶ್ಮೀರದ ಉಗ್ರವಾದಿಗಳ ಪರ ಇರುವ ಆನ್ಲೈನ್ ಪತ್ರಿಕೆ. ಪ್ರತೀ ತಿಂಗಳು ಅದನ್ನು ಹೊರ ತರಲಾಗುತ್ತಿದೆ ಎನ್ನುವ ಮಾಹಿತಿಗಳು ಇವೆ. ಕಳೆದ ಬಾರಿ ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಭಟ್ಕಳದಲ್ಲಿ ಅಡಗಿದ್ದ ಐಸಿಸ್ ಪ್ರೇರಿತ ಉಗ್ರನನ್ನು ಎನ್ಐಎ ಅಧಿಕಾರಿಗಳು ಬಂಧಿಸಿದ್ದರು. ಜುಫ್ರಿ ಜವಾಹರ್ ದಾಮುದಿ ಎನ್ನುವ ಬಂಧಿತ ವ್ಯಕ್ತಿ ಭಟ್ಕಳದಲ್ಲಿದ್ದೇ ದಿ ವಾಯ್ಸ್ ಆಫ್ ಹಿಂದ್ ಪತ್ರಿಕೆಯಲ್ಲಿ ಬರೆಯುತ್ತಿದ್ದ. ಅದರ ಮೂಲಕ ಐಸಿಸ್ ವಿಚಾರಧಾರೆಗಳನ್ನು ಪ್ರಚುರ ಪಡಿಸುತ್ತಿದ್ದ ಎನ್ನುವ ವಿಚಾರವನ್ನು ಎನ್ಐಎ ಅಧಿಕಾರಿಗಳು ಪತ್ತೆ ಮಾಡಿದ್ದರು. ಅದರ ಬೆನ್ನಲ್ಲೇ ಈ ರೀತಿ ಮುರುಡೇಶ್ವರದ ಶಿವನ ಚಿತ್ರವನ್ನು ವಿಕೃತಗೊಳಿಸಿ ಆನ್ಲೈನ್ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆಯಾ ಎನ್ನುವ ಸಂಶಯ ಉಂಟಾಗಿದೆ.
Karwar ISIS magzine Voice of Hind shows image of Murdeshwar idol being destroyed, says time to break false gods. Anshul Saxena has also shared this on his twitter post. The magzine pic has gone viral on social media.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm